ನವದೆಹಲಿ:ಗಡಿಭಾಗದಲ್ಲಿ ಚೀನಾ, ಪಾಕಿಸ್ತಾನಗಳು ಕಾಲ್ಕೆರೆದು ಯುದ್ಧಾಹ್ವಾನ ನೀಡುತ್ತಿರಬೇಕಾದರೆ, ಭಾರತೀಯ ನೌಕಾಪಡೆ ಸಮರಕ್ಕೆ ಸಿದ್ಧವಾಗಿರುವುದಾಗಿ ಪರೋಕ್ಷ ಸಂದೇಶ ರವಾನಿಸಿದೆ. ಇಂದು ಬೆಳಗ್ಗೆ ಕ್ಷಿಪಣಿ ಪರೀಕ್ಷೆಯ 18 ಸೆಕೆಂಡ್​ಗಳ ವಿಡಿಯೋವನ್ನು ಬಿಡುಗಡೆ ಮಾಡಿ ಗಮನಸೆಳೆದಿದೆ.
ಅರೆಬ್ಬಿ ಸಮುದ್ರದ ಯಾವುದೋ ಒಂದು ಪ್ರದೇಶದಲ್ಲಿ ಐಎನ್​ಎಸ್​ ಪ್ರಬಾಲ್​ ಸಮರ ನೌಕೆಯಿಂದ ಕ್ಷಿಪಣಿಯನ್ನು ಉಡಾಯಿಸಿದ್ದು, ಅದು ದೂರದಲ್ಲಿ ಗುರಿಯಂತಿದ್ದ ಇನ್ನೊಂದು ನಿಷ್ಪ್ರಯೋಕ ನೌಕೆಯನ್ನು ಉಡಾಯಿಸಿದೆ. ಈ ಕವಾಯತಿನ ವಿಡಿಯೋ ಇದಾಗಿದೆ ಎಂದು ನೌಕಾಪಡೆಯ ವಕ್ತಾರ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಕುತ್ತಿಗೆಯಲ್ಲಾದ ಬದಲಾವಣೆ ನಿರ್ಲಕ್ಷಿಸಿದ ಯುವತಿ: ಕೊನೆಗೆ ವೈದ್ಯರ ಬಳಿ ಹೋದವಳಿಗೆ ಕಾದಿತ್ತು ಶಾಕ್​!
ಸಮುದ್ರದಲ್ಲಿ ಐಎನ್​ಎಸ್​ ವಿಕ್ರಮಾದಿತ್ಯ ಮತ್ತು ಕೆಲವು ಸಮರ ನೌಕೆಗಳು, ದಾಳಿ ಹೆಲಿಕಾಪ್ಟರ್​ಗಳು, ಯುದ್ಧ ವಿಮಾನಗಳು ಕವಾಯತು ನಡೆಸಿದ್ದು, ಅದರ ಭಾಗವಾಗಿ ಈ ಕ್ಷಿಪಣಿ ಕವಾಯತು ಕೂಡ ನಡೆದಿತ್ತು. ಇದಕ್ಕೂ ಮುನ್ನ, ನೌಕಾಪಡೆ ಸಿಬ್ಬಂದಿ ಮುಖ್ಯಸ್ಥ ಅಡ್ಮಿರಲ್​ ಕರಮ್​ಬೀರ್​ ಸಿಂಗ್ ಗುರುವಾರವಷ್ಟೇ ನೌಕಾಪಡೆಯ ಸಮರ ಸಿದ್ಧತೆಯನ್ನು ಖುದ್ದುಪರಿಶೀಲಿಸಿದ್ದರು. (ಏಜೆನ್ಸೀಸ್)
The anti-ship missile (AShM) launched by Indian Navy Missile Corvette#INSPrabal, homes on with deadly accuracy at max range, sinking target ship: Indian Navypic.twitter.com/kXOQceSaNO
— ANI (@ANI)October 23, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
