ನವದೆಹಲಿ:ಅಂತಾರಾಷ್ಟ್ರೀಯ ಜಲ ಮಾರ್ಗಗಳಲ್ಲಿ ಸಂಚರಿಸುವ ವಾಣಿಜ್ಯ ಹಡಗುಗಳ ಮೇಲೆ ಇತ್ತೀಚಿನ ದಿನಗಳಲ್ಲಿ ಪದೆ ಪದೇ ಡ್ರೋನ್​ ದಾಳಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ನೌಕೆಗಳ ಭದ್ರತೆಗಾಗಿ ಉತ್ತರ ಹಾಗೂ ಮಧ್ಯ ಅರಬ್ಬಿ ಸಮುದ್ರ ಮತ್ತು ಏಡನ್​ ಕೊಲ್ಲಿಯಲ್ಲಿ ಕಣ್ಗಾವಲು ಹೆಚ್ಚಿಸಲು ಭಾರತೀಯ ನೌಕಾ ಪಡೆ ಕ್ರಮಗಳನ್ನು ಕೈಗೊಂಡಿದೆ.
ಜಲಮಾರ್ಗಗಳಲ್ಲಿ ಭದ್ರತೆಯನ್ನು ಖಾತರಿಪಡಿಸಲು ಪಣಿ ನಾಶಕಗಳು (ಡಸ್ಟ್ರಾಯರ್​) ಹಾಗೂ ಫ್ರಿಗೇಟ್​ಗಳುಳ್ಳ ನೇವಿಯ ಕಾರ್ಯ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ನೇವಿ ಭಾನುವಾರ ತಿಳಿಸಿದೆ. ಹಿಂದು ಮಹಾಸಾಗರದಲ್ಲಿ ಭದ್ರತೆಯ ಹೊಸ ಸವಾಲುಗಳ ಪರಿಶೀಲನೆಗೆ ಕರಾವಳಿ ಕಾವಲು ಪಡೆ ಜೊತೆ ನಿಕಟವಾಗಿ ಕೆಲಸ ಮಾಡುತ್ತಿರುವುದಾಗಿಯೂ ನೇವಿ ಹೇಳಿದೆ.
ಭಾರತದ ಕರಾವಳಿಯಿಂದ 400 ಕಿಮೀ ದೂರದಲ್ಲಿ ಎಂವಿ ಕೆಮ್​ ಎಂಬ ವಾಣಿಜ್ಯ ನೌಕೆ ಮೇಲೆ ಡ್ರೋನ್​ ದಾಳಿ ನಡೆದಿದ್ದ ಹಿನ್ನೆಲೆಯಲ್ಲಿ ಭಾರತೀಯ ನೌಕಾ ಪಡೆ ಭದ್ರತಾ ಕ್ರಮಗಳನ್ನು ಹೆಚ್ಚಿಸಲು ಮುಂದಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four − four =
Remember me
