ಮುಂಬೈ:ತಮ್ಮ ವಿರುದ್ದ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ಬಾಲಿವುಡ್​ ನಟ ನವಾಜುದ್ದೀನ್​ ಸಿದ್ಧಿಕಿ ಮಾಜಿ ಪತ್ನಿ ಆಲಿಯಾ ಅಲಿಯಾಸ್​ ಜೈನಾಬ್​ ಸಿದ್ಧಿಕಿ ಮತ್ತು ಸಹೋದರ ಶಂಶುದ್ದಿನ್​ ಸಿದ್ಧಿಕಿ ವಿರುದ್ಧ ಬಾಂಬೆ ಹೈಕೋರ್ಟಿನಲ್ಲಿ 100 ಕೋಟಿ ರೂಗಳ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದಾರೆ.
ವೈವಾಹಿಕ ಕಲಹದಲ್ಲಿ ಸಿಲುಕಿರುವ ನಟ ತಮ್ಮ ವಿರುದ್ದ ಯಾವುದೇ ಹೇಳಿಕೆಗಳನ್ನ ನೀಡದಂತೆ ಮಾಜಿ ಪತ್ನಿ ಹಾಗೂ ಸಹೋದರನನ್ನ ಶಾಶ್ವತವಾಗಿ ನಿರ್ಬಂಧಿಸುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.
2008ರಲ್ಲಿ ಸಹೋದರ ಶಂಶುದ್ದೀನ್​ರನ್ನು ನವಾಜುದ್ದೀನ್​ ತಮ್ಮ ಮ್ಯಾನೇಜರ್ ಆಗಿ ನೇಮಿಸಿದ್ದರು ಮತ್ತು ಹಣಕಾಸಿನ ಉಸ್ತುವಾರಿಯನ್ನ ನೀಡಿದ್ದರು. ಶಂಶುದ್ದೀನ್​ ತಮ್ಮ ಸಹೋದರನಿಗೆ ಮೋಸ ಮಾಡಿ ಆಸ್ತಿ ಖರೀದಿಸಿದ್ದರೂ ಎಂದು ತಿಳಿದು ಬಂದಿದೆ.
ಇದನ್ನು ಓದಿ:ಸಂಸತ್​ ಸದಸ್ಯತ್ವದಿಂದ ರಾಹುಲ್​ ಅನರ್ಹ; ಕಪ್ಪುಬಟ್ಟೆ ಧರಿಸಿ ವಿಪಕ್ಷಗಳ ಒಗ್ಗಟ್ಟು ಪ್ರದರ್ಶನ
ತಮ್ಮ ಸಹೋದರ 21 ಕೋಟಿ ರೂಪಾಯಿ ಮೋಸ ಮಾಡಿರುವ ಬಗ್ಗೆ ನವಾಜ್​ ಪ್ರಶ್ನಿಸಿದ್ದಾಗ ನಟನ ವಿರುದ್ದ ಸುಳ್ಳು ದೂರು ದಾಖಲಿಸುವಂತೆ ಮಾಜಿ ಪತ್ನಿ ಆಲಿಯಾಗೆ ಕುಮ್ಮಕು ನೀಡಿದ್ದ ಎಂದು ನವಾಜುದ್ಧೀನ್​ ಪರ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿರುವ ದಾವೆಯಲ್ಲಿ ಆರೋಪಿಸಿದ್ದಾರೆ.
ಪ್ರಕರಣದ ವಿಚಾರಣೆಯನ್ನು ಮಾರ್ಚ್​ 30ರಂದು ನ್ಯಾಯಮೂರ್ತಿ ರಿಯಾಜ್​ ಚಗ್ಲಾ ಅವರು ಇರುವ ಏಕಸದಸ್ಯ ಪೀಠ ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + twenty =
Remember me
