ಅಮರಾವತಿ:ಮುಂದಿನ ತಿಂಗಳೇ ಮಗನ ಮದುವೆಯಿತ್ತು. ಅದಕ್ಕಾಗಿ ತಂದೆ ತಾಯಿ ಭರ್ಜರಿ ಸಿದ್ಧತೆ ಆರಂಭಿಸಿದ್ದರು. ಮದುವೆ ಆಹ್ವಾನ ಪತ್ರಿಕೆಯನ್ನು ಯಾರ್ಯಾರಿಗೆ ಕೊಡಬೇಕು ಎನ್ನುವ ಪಟ್ಟಿಯೂ ಸಿದ್ಧವಾಗುವುದರಲ್ಲಿತ್ತು. ಅಷ್ಟರಲ್ಲಿ ಬಂದ ಕರೆಗೆ ಇಡೀ ಗ್ರಾಮವೇ ಅಘಾತಕ್ಕೊಳಗಾಗಿದೆ.
ನಾವೀಗ ಹೇಳಲೊರಟಿರುವುದು ಮೊನ್ನೆ ಚತ್ತೀಸ್​ಗಢದ ಬಿಜಾಪುರದಲ್ಲಿ ನಕ್ಸಲ್​ ದಾಳಿಯಿಂದಾಗಿ ಹುತಾತ್ಮನಾದ ಯೋಧನೊಬ್ಬನ ಕಥೆ. ಆತನ ಹೆಸರು ಮುರಳಿ ಕೃಷ್ಣ. ಆಂಧ್ರ ಪ್ರದೇಶದ ಗುಂಟೂರು ಮೂಲದ ಆತ ಆರು ವರ್ಷದ ಹಿಂದೆ ಸಿಆರ್​ಪಿಎಫ್​ ಸೇರ್ಪಡೆಗೊಂಡಿದ್ದ. ಕೋಬ್ರಾ 210 ವಿಂಗ್​ನಲ್ಲಿ ಕೆಲಸ ನಿಯೋಜಿಸಲಾಗಿತ್ತು. ಬಿಜಾಪುರದಲ್ಲಿ ನಕ್ಸಲರ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ. ಅದಾಗಲೇ 32 ವರ್ಷದವನಾಗಿದ್ದ ಮುರಳಿ ಕೃಷ್ಣನಿಗೆ ಮದುವೆ ಮಾಡಲು ಕುಟುಂಬ ನಿಶ್ಚಯಿಸಿತ್ತು. ಮೇ 22ಕ್ಕೆ ಆತ ಹಸೆಮಣೆ ಏರಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿತ್ತು.
ಆದರೆ ಶನಿವಾರದಂದು ನಕ್ಸಲರು ಮಾಡಿದ ದಾಳಿಗೆ ಮುರಳಿ ಕೃಷ್ಣ ಕೊನೆಯುಸಿರೆಳೆದಿದ್ದಾನೆ. ಈ ವಿಚಾರ ತಿಳಿದುಬರುತ್ತಿದ್ದಂತೆಯೇ ಆತನ ಪೂರ್ತಿ ಗ್ರಾಮ ಕಣ್ಣೀರಿಡಲಾರಂಭಿಸಿದೆ. ಮಗನನ್ನು ಕಳೆದುಕೊಂಡ ನೋವಿನಲ್ಲಿ ತಾಯಿ ಗೋಗರೆಯುತ್ತಿರುವುದು ಎಂತವರಿಗೂ ಕಣ್ಣೀರು ತರಿಸುವಂತಾಗಿದೆ. (ಏಜೆನ್ಸೀಸ್​)
ಆ ರೀತಿಯ ವಿಡಿಯೋವನ್ನು ಅಮ್ಮನಿಗೆ ಕಳುಹಿಸಿದ ಮಗಳು! ಇದೆಲ್ಲ ಆ್ಯಪ್​ ತಪ್ಪೆಂದು ಕ್ಷಮೆಯಾಚನೆ

ಚಿನ್ನಮ್ಮ ಜೈಲಿಂದ ಬಿಡುಗಡೆಯಾಗಿದ್ದರೂ ಮತ ಹಾಕುವಂತಿಲ್ಲ! ಕುತೂಹಲ ಕೆರಳಿಸಿದ ವೋಟರ್​ ಲಿಸ್ಟ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
