ತಿರುಪತಿ:ನಿನ್ನೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವದಂಪತಿ ನಯನತಾರಾ ಹಾಗೂ ವಿಘ್ನೇಶ್ ಶಿವನ್​​ ಇಂದು ತಿರುಪತಿಗೆ ಭೇಟಿ ನೀಡಿದ್ದಾರೆ.
ಶುಕ್ರವಾರ ಬೆಳಗ್ಗೆ ತಿರುಪತಿಗೆ ಭೇಟಿ ನೀಡಿದ ಈ ನವಜೋಡಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಗುರುವಾರವಷ್ಟೇ ತಮಿಳುನಾಡಿನ ಮಹಾಬಲಿಪುರಂನಲ್ಲಿ ಅದ್ಧೂರಿಯಾಗಿ ವಿವಾಹ ನಡೆಯಿತು.
ಹಸಿರು ಬಣ್ಣದ ಅಂಚಿರುವ ಹಳದಿ ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿರುವ ನಯನಾ, ಪತಿ ವಿಘ್ನೇಶ್​ ಕೂಡ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡರು.
ಬಾಲಿವುಡ್​ ನಟ ಶಾರುಖ್​​ ಖಾನ್​, ಸೇರಿದಂತೆ ರಜನಿಕಾಂತ್ ಹಾಗೂ ದಕ್ಷಿಣ ಭಾರತದ ಪ್ರಮುಖ ನಟ-ನಟಿಯರು ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು.
ಈ ಹಿಂದೆ ತಿರುಪತಿಯಲ್ಲೇ ಮದುವೆ ನಿಶ್ಚಯಿಸಿದ್ದ ಈ ಜೋಡಿ, ಕೊನೇ ಕ್ಷಣದಲ್ಲಿ ಸ್ಥಳ ಬದಲಾಯಿಸಿದ್ದರು. ಒಟ್ಟಾರೆ ಲೇಡಿ ಸೂಪರ್​ ಸ್ಟಾರ್​ ಎಂದೇ ಕರೆಸಿಕೊಂಡಿರುವ ನಯನತಾರಾ ಹಲವು ವರ್ಷಗಳ ಡೇಟಿಂಗ್​ ಬಳಿಕ ಈ ಜೋಡಿ ಹಸೆಮಣೆಯೇರಿದ್ದಾರೆ.(ಏಜೆನ್ಸೀಸ್​)
ನಯನತಾರಾ-ವಿಘ್ನೇಶ್​​ ಸಪ್ತಪದಿ ತುಳಿದ ಮಧುರಕ್ಷಣದ ಚಿತ್ರಗಳು ಇಲ್ಲಿವೆ

Sign in to your account
Please enter an answer in digits:14 − 7 =
Remember me
