ದೆಹಲಿ:ಡ್ರಗ್ಸ್​ ಕೇಸ್​ ಸಂಬಂಧ ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ, ಸಾರಾ ಅಲಿಖಾನ್, ಶ್ರದ್ಧಾ ಕಪೂರ್ ಮತ್ತು ರಕುಲ್ ಪ್ರೀತ್ ಸಿಂಗ್​ಗೆ ಮಾದಕ ವಸ್ತುಗಳ ನಿಯಂತ್ರಣ ವಿಭಾಗ (ಎನ್​ಸಿಬಿ) ಸಮನ್ಸ್​ ಜಾರಿ ಮಾಡಿದೆ.
ಸ್ಯಾಂಡಲ್​ವುಡ್​ನ ರಾಗಿಣಿ ದ್ವಿವೇದಿ, ಸಂಜನಾ ಅಲಿಯಾಸ್​ ಮಹಿರಾ ಡ್ರಗ್ಸ್​ ಕೇಸ್​ನಲ್ಲಿ ಜೈಲು ಸೇರಿದ್ದಾರೆ. ಇದೀಗ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ಡ್ರಗ್ ಮಾಫಿಯಾ ಉರುಳು ಕನ್ನಡದ ಹುಡುಗಿ, ಬಾಲಿವುಡ್​ನ ಟಾಪ್​ ನಟಿ ದೀಪಿಕಾ ಪಡುಕೋಣೆಗೂ ಸುತ್ತಿಕೊಂಡಿದೆ. ದೀಪಿಕಾ ಜತೆಗೆ ಇನ್ನೂ ಮೂವರಿಗೆ ಎನ್​ಸಿಬಿ ಬುಧವಾರ ಸಮನ್ಸ್​ ಜಾರಿ ಮಾಡಿದ್ದು, ಬಾಲಿವುಡ್​ನಲ್ಲಿ ಸಂಚಲನ ಸೃಷ್ಟಿಸಿದೆ. ಈ ನಾಲ್ವರು ಮುಂದಿನ ಮೂರು ದಿನಗಳೊಳಗೆ ಎನ್​ಸಿಬಿ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ. 25ರಂದು ವಿಚಾರಣೆಗೆ ಹಾಜರಾಗಲು ದೀಪಿಕಾ ಅವರಿಗೆ ಸೂಚಿಸಲಾಗಿದೆ.
ನಟ ಸುಶಾಂತ್ ನಿಗೂಢ ಸಾವಿನ ಹಿನ್ನೆಲೆಯಲ್ಲಿ ಎನ್​ಸಿಬಿ ತನಿಖೆ ನಡೆಸುತ್ತಿದೆ. ನಿನ್ನೆಯಷ್ಟೇ (ಮಂಗಳವಾರ) ದೀಪಿಕಾ ಪಡುಕೋಣೆಯ ವ್ಯವಸ್ಥಾಪಕ ಕರಿಷ್ಮಾ ಪ್ರಕಾಶ್​ರನ್ನು ಎನ್‌ಸಿಬಿ ವಿಚಾರಣೆ ನಡೆಸಿತ್ತು. ರಿಯಾ ಚಕ್ರವರ್ತಿ ವಾಟ್ಸ್​ಆ್ಯಪ್​ ಮೆಸೇಜ್​ಗಳ ಆಧಾರದ ಮೇಲೆ ವಿಚಾರಣೆ ನಡೆಯುತ್ತಿದೆ. ಒಟ್ಟಿನಲ್ಲಿ ದಿನಕ್ಕೊಂದು ತಿರುವು ಪಡೆಯುತ್ತಿರುವ ಡ್ರಗ್ಸ್​ ಮಾಫಿಯಾ ಪ್ರಕರಣ ಸ್ಯಾಂಡಲ್​ವುಡ್​ ಮತ್ತು ಬಾಲಿವುಡ್​ನ ಘಟಾನುಘಟಿಗಳ ಬುಡಕ್ಕೆ ಬರುತ್ತಿದೆ.
‘ಗಾಂಜಾ ಬೇಡ, ಮಾಲ್​ ಇದ್ರೆ ಬೇಕಾಗಿತ್ತು..’; ಬೆಚ್ಚಿ ಬೀಳಿಸುತ್ತೆ ದೀಪಿಕಾ ಪಡುಕೋಣೆ ವಾಟ್ಸಾಪ್​ ಚಾಟ್!​

ಸಿಸಿಬಿ ಕಚೇರಿಗೆ ಬಂದ ಅಕುಲ್, ಕರ್ನಾಟಕದ ಜನತೆಗೆ ನಮಸ್ಕಾರಗಳು… ಎನ್ನುತ್ತ ಸ್ಫೋಟಕ ಮಾಹಿತಿ ಹೊರಹಾಕಿದ್ರು

ಡ್ರಗ್ಸ್ ಕೇಸ್​ನಲ್ಲಿ ಸಿಕ್ಕಿಬಿದ್ದ ನಟಿ ಜತೆ ಲೈಂಗಿಕ ಸಂಭಾಷಣೆ! ಖಾಸಗಿ ವಿಡಿಯೋ ವೈರಲ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − seven =
Remember me
