ನವದೆಹಲಿ:ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ತನಿಖೆಯನ್ನು ಬೇರೆಬೇರೆ ಆಯಾಮಗಳಲ್ಲಿ ವಿವಿಧ ತನಿಖಾ ದಳಗಳು ನಡೆಸುತ್ತಿವೆ.
ಸುಶಾಂತ್ ಸಾವಿನೊಂದಿಗೆ ಥಳುಕು ಹಾಕಿಕೊಂಡಿರುವ ಮಾದಕ ದ್ರವ್ಯದ ಬಗ್ಗೆ ತನಿಖೆ ನಡೆಸುತ್ತಿರುವ ಎನ್​ಸಿಬಿ ಈಗಾಗಲೇ ಹಲವರ ವಿಚಾರಣೆ ನಡೆಸಿದೆ.
ಆದರೆ ಈ ಡ್ರಗ್ಸ್​ ಲಿಂಕ್​ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಬಿಜೆಪಿಗೆ ತುಂಬ ಆಪ್ತರು ಎಂದು ಕಾಂಗ್ರೆಸ್​ ನಾಯಕ ಅಧೀರ್ ರಂಜನ್​ ಚೌಧರಿ ಆರೋಪಿಸಿದ್ದಾರೆ.ಸುಶಾಂತ್​ ಸಾವಿಗೆ ಸಂಬಂಧಪಟ್ಟಂತೆ ಡ್ರಗ್ಸ್​ ಬಗ್ಗೆ ತನಿಖೆ ನಡೆಸುತ್ತಿರುವ ಎನ್​ಸಿಬಿ ಅಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಗೆ ತುಂಬ ಆಪ್ತರು. ಈ ವಿಚಾರದಲ್ಲಿ ಬಿಜೆಪಿ ರಾಜಕೀಯ ಆಟ ಆಡುತ್ತಿದೆ ಎಂದು ನೇರವಾಗಿ ಆರೋಪಿಸಿದರು.ಇದನ್ನೂ ಓದಿ:ಸುಶಾಂತ್​ ಜತೆ ಪಾರ್ಟಿ ಮಾಡಿದ್ದು ಹೌದು … ಒಪ್ಪಿಕೊಂಡ ಶ್ರದ್ಧಾ ಕಪೂರ್​
ಸುಶಾಂತ್​ ಸಾವಿನ ಪ್ರಕರಣದಲ್ಲಿ ತನಿಖೆ ಮಾಡುತ್ತಿರುವ ಇ.ಡಿ., ಸಿಬಿಐಗಳು ಇದುವರೆಗೆ ಏನು ಪತ್ತೆ ಹಚ್ಚಿವೆ ಎಂಬುದು ಯಾರಿಗೂ ಗೊತ್ತಾಗಿಲ್ಲ. ಇದೀಗ ಎಲ್ಲ ನಟ-ನಟಿಯರನ್ನೂ ಡ್ರಗ್ಸ್​ಗೆ ಲಿಂಕ್​ ಮಾಡಿ, ಅವರಿಗೆ ನೋಟಿಸ್ ಕೊಟ್ಟು, ವಿಚಾರಣೆಗೆ ಕರೆಸಲಾಗುತ್ತಿದೆ ಎಂದು ಹೇಳಿದರು.
ಬಿಹಾರ ಚುನಾವಣೆಗೆ ಬಿಜೆಪಿ ಸುಶಾಂತ್​ ಸಾವಿನ ಪ್ರಕರಣವನ್ನು ದಾಳವನ್ನಾಗಿ ಬಳಸಿಕೊಳ್ಳುತ್ತಿದೆ. ಎನ್​​ಸಿಬಿ ಬಿಜೆಪಿಯ ರಕ್ಷಕವಾಗಿದೆ ಎಂದು ನಿನ್ನೆಯಷ್ಟೇ ಚೌಧರಿ ಆರೋಪಿಸಿದ್ದರು.(ಏಜೆನ್ಸೀಸ್​)
VIDEO| ಮರ್ಸಿಡಿಸ್ ಬೆಂಜ್​ನಿಂದ ಭಾರತದಲ್ಲಿ ‘ಎಎಂಜಿ ಜಿಎಲ್​ಇ 53 4ಮ್ಯಾಟಿಕ್​ ಪ್ಲಸ್​ ಕೂಪೆ’ ಕಾರು ಬಿಡುಗಡೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + eleven =
Remember me
