ಮುಂಬೈ:ಇತ್ತ ಸ್ಯಾಂಡಲ್​ವುಡ್​ನಲ್ಲಿ ನಟಿಯರಾದ ರಾಗಿಣಿ, ಸಂಜನಾ ಡ್ರಗ್ಸ್​ ಮಾರಾಟ ಜಾಲದಲ್ಲಿ ಸಿಲುಕಿಕೊಂಡಿರುವ ಬೆನ್ನಿಗೇ ಅತ್ತ ಬಾಲಿವುಡ್​ನಲ್ಲಿ ಕನ್ನಡದ ಹುಡುಗಿ ನಟಿ ದೀಪಿಕಾ ಪಡುಕೋಣೆಗೂ ಡ್ರಗ್ಸ್​ ಮಾಫಿಯಾ ಉರುಳು ಸುತ್ತಿಕೊಳ್ಳುತ್ತಾ ಎಂಬ ಕುತೂಹಲ ಮೂಡಿದೆ.
ಮಾದಕ ವಸ್ತುಗಳ ನಿಯಂತ್ರಣ ವಿಭಾಗ (ಎನ್​ಸಿಬಿ) ಶೀಘ್ರದಲ್ಲೇ ದೀಪಿಕಾ ಪಡುಕೋಣೆಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್​ ಜಾರಿಗೊಳಿಸಲಿದೆ ಎಂಬ ವಿಷಯ ಹರಿದಾಡುತ್ತಿದೆ. ನಟ ಸುಶಾಂತ್ ಸಿಂಗ್ ರಜಪೂತ್ ನಿಗೂಢ ಸಾವಿನ ಹಿನ್ನೆಲೆಯಲ್ಲಿ ಎನ್​ಸಿಬಿ ತನಿಖೆ ನಡೆಸುತ್ತಿದ್ದು, ತನ್ಮಧ್ಯೆ ಸಿಕ್ಕ ಸುಳಿವಿನ ಆಧಾರದ ಮೇರೆಗೆ ದೀಪಿಕಾ ಪಡುಕೋಣೆಗೆ ಸಮನ್ಸ್​ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಟ್ಯಾಲೆಂಟ್ ಮ್ಯಾನೇಜ್​ಮೆಂಟ್ ಏಜೆನ್ಸಿ ಕ್ವಾನ್​ನ ಕರಿಷ್ಮಾ ಎಂಬಾಕೆಯೊಂದಿಗೆ ದೀಪಿಕಾ ನಡೆಸಿದ್ದ ವಾಟ್ಸ್​ಆ್ಯಪ್​ ಚಾಟ್​ ಮಾಹಿತಿ ಕಲೆ ಹಾಕಿರುವ ಎನ್​ಸಿಬಿ ಅಧಿಕಾರಿಗಳು, ದೀಪಿಕಾರನ್ನು ವಿಚಾರಣೆಗೆ ಕರೆಸಲು ಮುಂದಾಗಿದ್ದಾರೆ. ಜತೆಗೆ ನಟಿಯರಾದ ರಾಕುಲ್ ಪ್ರೀತ್ ಸಿಂಗ್, ಶ್ರದ್ಧಾ ಕಪೂರ್ ಅವರಿಗೂ ವಿಚಾರಣಾ ಸಮನ್ಸ್ ಜಾರಿಯಾಗುವ ಸಾಧ್ಯತೆಗಳೂ ಇವೆ ಎನ್ನಲಾಗಿದೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 11 =
Remember me
