ಮುಂಬೈ:ತಾನು ನೀಡಿದ ಕಸರತ್ತನ್ನು ವಿದ್ಯಾರ್ಥಿಗಳು ಸರಿಯಾಗಿ ಮಾಡಲಿಲ್ಲ ಎಂಬ ಕಾರಣಕ್ಕೆ ನ್ಯಾಷನಲ್​ ಕೆಡೆಟ್​ ಕಾರ್ಪ್ಸ್​(NCC)ನ ಹಿರಿಯ ಕೆಡೆಟ್​ ಒಬ್ಬ ತನ್ನ ಜ್ಯೂನಿಯರ್​ಗಳ ಮೇಲೆ ಟ್ರೈನಿಂಗ್​ ಹೆಸರಲ್ಲಿ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಘಟನೆಯೂ ಮಹಾರಾಷ್ಟ್ರದ ಥಾಣೆಯ ಬಂದೋಡ್ಕರ್​ ಕಾಲೇಜಿನಲ್ಲಿ ನಡೆದಿದ್ದು, ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
ವೈರಲ್​ ಆಗಿರುವ ವಿಡಿಯೋದಲ್ಲಿ ಸೀನಿಯರ್ ಎನ್​ಸಿಸಿ ಕೆಡೆಟ್​ ಒಬ್ಬ ತನ್ನ 8 ಮಂದಿ ಜ್ಯೂನಿಯರ್​ಗಳನ್ನು ಮಳೆ ನೀರಿನ ನಡುವೆ ಪುಷ್​ಅಪ್​ ಪೊಸಿಷನ್​ನಲ್ಲಿ ಇರುವಂತೆ ಹೇಳುತ್ತಾನೆ. ಬಳಿಕ ಅವರ ಮೇಲೆ ದೊಡ್ಡ ಕೋಲೊಂದರಲ್ಲಿ ಅಮಾನುಷವಾಗಿ ಹಲ್ಲೆ ನಡೆಸಲು ಶುರು ಮಾಡುತ್ತಾನೆ.
Horrific Thane Video!!A video of NCC students being beaten up at Thane’s Joshi Bedekar College has gone viral…#Inhumanpunishment#NCCtrainingpic.twitter.com/vZj9C01xR9
ಇದನ್ನೂ ಓದಿ:ಕಿರಿಯ ವಯಸ್ಸಿಗೆ ಇಹಲೋಕ ತ್ಯಜಿಸಿದ “ಮಿಸ್​ ವೆನಿಜುವೆಲಾ” ಖ್ಯಾತಿಯ ರೂಪದರ್ಶಿ ಅರಿಯಾನಾ ವಿಯೆರಾ
ಕೆಲವರು ನೋವನ್ನು ತಾಳಲಾರದೆ ಜೋರಾಗಿ ಅಳುತ್ತಿದ್ದರು ಸಹ ಆತ ಹೊಡೆಯುವುದನ್ನು ನಿಲ್ಲಿಸುವುದಿಲ್ಲ. ಈ ಕೃತ್ಯವನ್ನು ಬಂದೋಡ್ಕರ್​ ಕಾಲೇಜಿನ ವಿದ್ಯಾರ್ಥಿಯೋರ್ವ ತನ್ನ ಮೊಬೈಲ್​ ಫೋನಿನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ಧಾನೆ. ಘಟನೆಯ ಕುರಿತು ಸಾಕಷ್ಟು ಖಂಡನೆ ವ್ಯಕ್ತವಾಗುತ್ತಿದ್ದು, ತರಬೇತಿ ಹೆಸರಲ್ಲಿ ಈ ರೀತಿ ಮಾಡುವುದು ಶಿಕ್ಷಾರ್ಹ ಎಂದು ಹಲವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಂದೋಡ್ಕರ್​ ಕಾಲೇಜು ಪ್ರಾಂಶುಪಾಲರಾದ ಸುಚಿತ್ರಾ ನಾಯ್ಕ್​ ಇಂತಹ ವರ್ತನೆಯನ್ನು ನಾವು ಯಾವುದೇ ಕಾರಣಕ್ಕು ಸಹಿಸುವ ಮಾತಿಲ್ಲ. ಕಳೆದ 40 ವರ್ಷಗಳಿಂದ ನಮ್ಮ ಕಾಲೇಜಿನಲ್ಲಿ ಎನ್​ಸಿಸಿ ತರಬೇತಿ ಕೊಡಲಾಗುತ್ತಿದ್ದು, ಶಿಕ್ಷಕರ ಅನುಪಸ್ಥಿತಿಯಲ್ಲಿ ಈ ಘಟನೆ ನಡೆದಿದೆ.
ಹಲ್ಲೆ ಮಾಡಿರುವ ಎನ್​​ಸಿಸಿ ವಿದ್ಯಾರ್ಥಿ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಈ ರೀತಿಯ ವರ್ತನೆಯನ್ನು ಯಾವುದೇ ಕಾರಣಕ್ಕು ಆಡಳಿತ ಮಂಡಳಿ ಸಹಿಸುವುದಿಲ್ಲ ಎಂದು ಬಂದೋಡ್ಕರ್​ ಕಾಲೇಜು ಪ್ರಾಂಶುಪಾಲರಾದ ಸುಚಿತ್ರಾ ನಾಯ್ಕ್ ತಿಳಿಸಿದ್ಧಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
