ನವದೆಹಲಿ:ಸಹಾಯಕ ಸಂತಾನೋತ್ಪತ್ತಿ ತಂತ್ರ (ಎಆರ್‌ಟಿ) ಪ್ರಕ್ರಿಯೆಯಲ್ಲಿ ವೀರ್ಯ ಅದಲು-ಬಲದು ಮಾಡಿದಕ್ಕೆ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ (ಎನ್‌ಸಿಡಿಆರ್‌ಸಿ) ದೆಹಲಿಯ ಖಾಸಗಿ ಆಸ್ಪತ್ರೆ ಮತ್ತು ವೈದ್ಯರಿಗೆ 1.50 ಕೋಟಿ ರೂಪಾಯಿ ದಂಡ ವಿಧಿಸಿದೆ.ಇದನ್ನೂ ಓದಿ:ಮದುವೆ ಗಂಡಿನ ಕಡೆಯಿಂದ ಹುಡುಗಿ ತಂದೆಗೆ ಸಿಕ್ಕಿತು 6.50 ಲಕ್ಷ ರೂ.; ಇದು ವಧು ದಕ್ಷಿಣೆಯಲ್ಲ! ಮತ್ತೇನು?
ಮಹಿಳೆಯೊಬ್ಬರು ಜೂನ್ 2009ರಲ್ಲಿ ಎಆರ್‌ಟಿ ಪಕ್ರಿಯೆಯ ಮೂಲಕ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಶಿಶುಗಳ ರಕ್ತದ ಗುಂಪು ಪಾಲಕರ ಗುಂಪಿನೊಂದಿಗೆ ಹೊಂದಾಣಿಕೆಯಾಗಿರಲಿಲ್ಲ. ಹೀಗಾಗಿ, ಪಿತೃತ್ವ ಪರೀಕ್ಷೆ ಅಥವಾ ಡಿಎನ್‌ಎ ಪ್ರೊಫೈಲ್ ಪರೀಕ್ಷೆಯನ್ನು ನಡೆಸಲಾಯಿತು. ಆಗ, ಮಹಿಳೆಯ ಪತಿಯು ಈ ಅವಳಿ ಮಕ್ಕಳ ಜೈವಿಕ ತಂದೆ ಅಲ್ಲ ಎಂಬುದು ಬಹಿರಂಗವಾಯಿತು. ಈ ಹಿನ್ನೆಲೆಯಲ್ಲಿ ದಂಪತಿಯು ಸೇವೆಯಲ್ಲಿನ ನಿರ್ಲಕ್ಷ್ಯಕ್ಕಾಗಿ 2 ಕೋಟಿ ರೂ. ಪರಿಹಾರ ನೀಡಬೇಕೆಂದು ಖಾಸಗಿ ಆಸ್ಪತ್ರೆ ವಿರುದ್ಧ ದೂರು ಸಲ್ಲಿಸಿದ್ದರು.
ಇದನ್ನೂ ಓದಿ:8 ವರ್ಷದ ಬಾಲಕನ ಆಧಾರ್ ಕಾರ್ಡ್​ನಲ್ಲಿ ದಾಖಲೆ ಎಲ್ಲವೂ ಸರಿಯಾಗಿದೆ; ಆದರೆ….
ಈ ದೂರನ್ನು ಆಲಿಸಿದ ಆಯೋಗ ಇತ್ತೀಚಿನ ವರ್ಷಗಳಲ್ಲಿ ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವ ಮತ್ತು ಅನೈತಿಕ ಅಭ್ಯಾಸಗಳನ್ನು ಅನುಸರಿಸುತ್ತಿರುವ ಎಆರ್‌ಟಿ ಚಿಕಿತ್ಸಾಲಯಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ನವಜಾತ ಶಿಶುಗಳ ಡಿಎನ್‌ಎ ವಿವರ ನೀಡುವುದನ್ನು ಕಡ್ಡಾಯಗೊಳಿಸುವುದರ ಜತೆಗೆ, ಇಂತಹ ಚಿಕಿತ್ಸಾಲಯಗಳ ಮಾನ್ಯತೆ ನೀಡುವ ಅವಶ್ಯಕತೆಯಿದೆ ಎಂದು ಹೇಳಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
