ನವದೆಹಲಿ:ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್(NCERT) ಮಂಡಳಿಯೂ ತನ್ನ 12ನೇ ತರಗತಿ ರಾಜ್ಯಶಾಸ್ತ್ರ ಪಠ್ಯದಿಂದ ಪ್ರತ್ಯೇಕ ಖಲಿಸ್ತಾನ್​ ಬೇಡಿಕೆ ಕುರಿತ ವಿಷಯವನ್ನು ತೆಗೆದು ಹಾಕಿದೆ.
ಶಿರೋಮಣಿ ಗುರುದ್ವಾರ ಪರಬಂಧಕ್​ ಸಮಿತಿ(SGPC) ಪ್ರತ್ಯೇಕ ಖಲಿಸ್ತಾನ್ ಬೇಡಿಕೆ ಕುರಿತು ವಿಷಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಸಿಖ್ಖರ ಇತಿಹಾಸದ ಕುರಿತು NCERT ಪಠ್ಯ ಪುಸ್ತಕದಲ್ಲಿ ತಪ್ಪಾಗಿ ನಮೂದಿಸಲಾಗಿದೆ. ಸ್ವಾತಂತ್ರ್ಯ ನಂತರದ ಭಾರತದ ರಾಜಕೀಯ ಪಠ್ಯದಲ್ಲಿ ಆನಂದ್​ಪುರ್​ ಸಾಹಿಬ್​ ನಿರ್ಣಯದ ಕುರಿತು ತಪ್ಪಾಗಿ ಉಲ್ಲೇಖಿಸಲಾಗಿದೆ ಎಂದು SGPC ಆಕ್ಷೇಪಿಸಿತ್ತು.
ಇದನ್ನೂ ಓದಿ:ದೇವಾಲಯದ ಆಭರಣಗಳನ್ನು 172 ಬಾರಿ ಅಡವಿಟ್ಟ ಅರ್ಚಕ; 6 ವರ್ಷ ಸಜೆ
ಆನಂದ್​ಪುರ್​ ನಿರ್ಣಯವು ಫೆಡರಲಿಸಂ ಬಲಪಡಿಸುವ ಮನವಿಯಾಗಿತ್ತು. ಆದರೆ, ಇದನ್ನು ಪ್ರತ್ಯೇಕ ಸಿಖ್​ ರಾಷ್ಟ್ರದ ಕುರಿತು ಮನವಿ ಎಂದು ಅರ್ಥೈಸಲಾಗಿದೆ. ಭಾರತದಿಂದ ಪ್ರತ್ಯೇಕತೆ ಹಾಗೂ ಖಲಿಸ್ತಾನ್​ ರಾಷ್ಟ್ರ ರಚಿಸುವ ಬಗ್ಗೆ ಹಲವು ಪ್ರತ್ಯೇಕವಾದಿಗಳು ವಾದ ಮಂಡಿಸುತ್ತಿದ್ದಾರೆ ಎಂಬ ವಾಕ್ಯವನ್ನು ಪಠ್ಯದಿಂದ ತೆಗೆಯಲಾಗಿದೆ.
ಆನಂದ್​ಪುರ್​ ನಿರ್ಣಯವು ಫೆಡರಲಿಸಂ ಬಲಪಡಿಸುವ ಅಂಶ ಎಂದು ಪುನಃ ಬರೆಯಲಾಗಿದೆ. ಈ ಕುರಿತು NCERT ವತಿಯಿಂದ ಕೊರಿಜೆಂಡಮ್ ನೀಡಲಾಗಿದ್ದು ಹೊಸ ಶೈಕ್ಷಣಿಕ ಅವಧಿಯ ಪುಸ್ತಕಗಳು ಈಗಾಗಲೇ ಮುದ್ರಿಸಿರುವುದರಿಂದ ಬದಲಾವಣೆಯಾದ ಪ್ರತಿಗಳು ನಿಮಗೆ ಆನ್​ಲೈನ್​ನಲ್ಲಿ ಲಭ್ಯವಿರುತ್ತದೆ ಎಂದು ಹಿರಿಯ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 1 =
Remember me
