ನವದೆಹಲಿ:ನೂತನ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರುವಂತೆ 12ನೇ ತರಗತಿ ಪಠ್ಯಕ್ರಮದಲ್ಲಿ ಗಾಂಧೀಜಿ, ಹಿಂದೂ-ಮುಸ್ಲಿಂ ಭಾವೈಕ್ಯತೆ, RSS ನಿಷೇಧದ ಬಗೆಗಿನ ಪಾಠಗಳನ್ನು NCERT ಕೈ ಬಿಟ್ಟಿದೆ.
ಗಾಂಧೀಜಿ ಅವರ ಹತ್ಯೆಯೂ ದೇಶದಲ್ಲಿ ಕೋಮು ಸ್ವಾರಸ್ಯದ ಮೇಲೆ ಅಗಾಧವಾದ ಪರಿಣಾಮವನ್ನು ಬೀರಿತ್ತು. ಗಾಂಧೀಜಿ ಪ್ರತಿಪಾದಿಸಿದ ಹಿಂದೂ-ಮುಸ್ಲಿಂ ಭಾವೈಕ್ಯತೆಯೂ ಹಿಂದೂ ಪರ ಸಂಘಟನೆಗಳನ್ನು ಕೆರಳಿಸಿತ್ತು. ಇದರಿಂದ ಕೆಲಕಾಲ RSSಅನ್ನು ದೇಶದಲ್ಲಿ ನಿಷೇಧ ಮಾಡಿದ್ದು ಇವುಗಳನ್ನು ಪಠ್ಯಕ್ರಮದಿಂದ ಕೈ ಬಿಡಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:12ನೇ ತರಗತಿ ವಿದ್ಯಾರ್ಥಿಗಳಿಗಿಲ್ಲ ಮೊಘಲ್​ ಅಧ್ಯಯನ;ವ್ಯಾಪಕ ಖಂಡನೆ
ಈ ಕುರಿತು ಮಾತನಾಡಿರುವ NCERT ನಿರ್ದೇಶಕ ದಿನೇಶ್​ ಸಕ್ಲಾನಿ 12ಣೇ ತರಗತಿ ಪಠ್ಯಕ್ರಮದಲ್ಲಿ ಕಡಿತಗೊಳಿಸಲಾಗಿಲ್ಲ ಗುಜರಾತ್​ ಗಲಭೆ, ಶೀತಲ ಸಮರ, ತುರ್ತು ಪರಿಸ್ಥಿತಿ ಸೇರಿದಂತೆ ಕೆಲವೊಂದು ವಿಷಯಗಳು ಪುನರಾವರ್ತನೆಯಾಗಿದ್ದವು. ಅಪ್ರಸ್ತುತವಾಗಿರುವ ಕೆಲವು ಆಂಶಗಳನ್ನು ಪಠ್ಯದಿಂದ ತೆಗೆದು ಹಾಕಲಾಗಿದೆ. ತಜ್ಱರ ಶಿಫಾರಸ್ಸಿನಂತೆ ಎಲ್ಲಾ ಮಾಡಲಾಗಿದೆ ಎಂದು ದಿನೇಶ್​ ಸಕ್ಲಾನಿ ತಿಳಿಸಿದ್ದಾರೆ.
NCERTಯ ಈ ಕ್ರಮಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು ವಿರೋಧ ಪಕ್ಷವಾದ ಕಾಂಗ್ರೆಸ್​ ಸೇರಿದಂತೆ ಅನೇಕರು ಇದನ್ನು ವಿರೋಧಿಸಿದ್ಧಾರೆ. ಬಿಜೆಪಿ ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದು ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿವೆ.
ಕೇಂದ್ರ ಸರ್ಕಾರವು ಪಠ್ಯಕ್ರಮದಲ್ಲಿ ಬದಲಾವಣೆ ಮಾಡುವ ಮೂಲಕ ಕಾಂಗ್ರೆಸ್​ ವಿರುದ್ಧದ ಪ್ರತೀಕಾರವಾಗಿ ಇಂತಹ ಕ್ರಮವನ್ನು ಕೈಗೊಂಡಿದೆ. ಈ ಮೂಲಕ ತಿಪ್ಪೆ ಸಾರಿಸುವ ಕೆಲಸಕ್ಕೆ ಮುಂದಾಗಿದೆ ಎಂದು ಎಐಸಿಸಿ ಪ್ರದಾನ ಕಾರ್ಯದರ್ಶಿ ಜೈರಾಮ್ ರಮೇಶ್​ ಟ್ವೀಟ್​ ಮಾಡಿ ಕಿಡಿಕಾರಿದ್ದಾರೆ.
This reveals the ruling regime's TRUE mindset. After all the RSS had not only attacked Gandhi but had been bitterly opposed to Dr. Ambedkar as well.https://t.co/chFlkiqSDO

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × three =
Remember me
