ನವದೆಹಲಿ :ಕರೊನಾ ಹಿನ್ನೆಲೆಯಲ್ಲಿ ಒಂದೊಂದಾಗಿ ಶಾಲೆಗಳಿಂದ ಹಿಡಿದು ಸ್ನಾತಕೋತ್ತರ ಪದವಿ ಪ್ರವೇಶ ಪರೀಕ್ಷೆಗಳವರೆಗೆ ಎಲ್ಲವೂ ರದ್ದು ಇಲ್ಲ ಮುಂಡೂಡಲ್ಪಡುತ್ತಿವೆ. ಇದೀಗ, ಹೊಟೆಲ್​​ ಮ್ಯಾನೇಜ್​​ಮೆಂಟ್​ ಅಧ್ಯಯನ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಎನ್​ಟಿಎ ನಡೆಸುವ ಎನ್​ಸಿಹೆಚ್​ಎಂ ಜೆಇಇ ಪ್ರವೇಶ ಪರೀಕ್ಷೆಯನ್ನು ಮುಂದೂಡಲಾಗಿದೆ.
ಎನ್​ಸಿಹೆಚ್​ಎಂ ಜೆಇಇ 2021 ಪರೀಕ್ಷೆಯು ಜೂನ್​ 12 ರಂದು ನಡೆಯಬೇಕೆಂದು ನಿಗದಿಯಾಗಿತ್ತು. ಆದರೆ ಕರೊನಾದಿಂದಾಗಿ ಆಗಿರುವ ಅನಾನುಕೂಲದ ಹಿನ್ನೆಲೆಯಲ್ಲಿ ಈ ಪರೀಕ್ಷೆಯನ್ನು ಮುಂದೂಡಲಾಗಿದೆ. ಪರೀಕ್ಷೆಯ ಹೊಸ ದಿನಾಂಕವನ್ನು ನಂತರದಲ್ಲಿ ಎನ್​ಟಿಎನ ಅಧಿಕೃತ ವೆಬ್​ಸೈಟ್​ nta.ac.inನಲ್ಲಿ ಪ್ರಕಟಿಸಲಾಗುವುದು ಎನ್ನಲಾಗಿದೆ.
ಇದನ್ನೂ ಓದಿ:ಸಿಕ್ಕಿದ್ದಕ್ಕಿಂತ ಹೆಚ್ಚು ಡೋಸ್ ಲಸಿಕೆ ನೀಡಿತು ಈ ರಾಜ್ಯ! ನರ್ಸ್​ಗಳ ಕಾರ್ಯಕ್ಷಮತೆಯನ್ನು ಹೊಗಳಿದ ಸಿಎಂ
ಈ ಪರೀಕ್ಷೆ ತೆಗೆದುಕೊಳ್ಳಲು ಹೆಚ್ಚು ವಿದ್ಯಾರ್ಥಿಗಳಿಗೆ ಅವಕಾಶ ನೀಡಬೇಕೆಂಬ ಉದ್ದೇಶದಿಂದ ನೋಂದಣಿ ದಿನಾಂಕ ಮತ್ತು ಇತರ ಸಂಬಂಧಿತ ದಿನಾಂಕಗಳನ್ನು ಕೂಡ ಬದಲಿಸಲಾಗಿದೆ. ಇದೀಗ ಮೇ 31 ರವರೆಗೆ ನ್ಯಾಷನಲ್ ಕೌನ್ಸಿಲ್​ ಫಾರ್ ಹೋಟೆಲ್ ಮ್ಯಾನೇಜ್​​ಮೆಂಟ್ ಜಾಯಿಂಟ್ ಎನ್​ಟ್ರೆನ್ಸ್ ಎಕ್ಷಾಮಿನೇಷನ್​ಗೆ ಕೂರಲು ಬಯಸುವವರು ಆನ್​ಲೈನ್ ಅರ್ಜಿ ಸಲ್ಲಿಸಬಹುದಾಗಿದೆ.(ಏಜೆನ್ಸೀಸ್)
ಕ್ರಿಕೆಟಿಗನನ್ನು ಅಪಹರಿಸಿದ ದುಷ್ಕರ್ಮಿಗಳು! ಥಳಿಸಿದರು, ಗನ್​ ಹಿಡಿದು ಬೆದರಿಸಿದರು

ಅಮ್ಮನನ್ನು ಉಳಿಸಲು ಬಾಯಿಂದ ಉಸಿರು ತುಂಬಿದಳು ! ಮನ ಕಲಕುತ್ತೆ ಈ ಘಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − six =
Remember me
