ನವದೆಹಲಿ:ಟೆಕ್​ ದೈತ್ಯ ಗೂಗಲ್​ಗೆ ಕಾಂಪಿಟೇಷನ್​ ಕಮಿಷನ್​ ಆಫ್​ ಇಂಡಿಯಾ(CCI) ವಿಧಿಸಿದ್ದ 1,337.76 ಕೋಟಿ ರೂಪಾಯಿ ದಂಡವನ್ನು ನ್ಯಾಷನಲ್​ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ(NCLAT) ಎತ್ತಿ ಹಿಡಿದಿದೆ.
ಅರ್ಜಿ ವಿಚಾರಣೆ ನಡೆಸಿದ ಜಸ್ಟಿಸ್​ ಅಶೋಕ್​ ಭೂಷಣ್​, ಅಲೋಕ್​ ಶ್ರೀವಾಸ್ತವ್​ ಅವರಿದ್ದ ದ್ವಿಸದಸ್ಯ ಪೀಠವು ನೂತನ ನಿರ್ದೇಶನಗಳನ್ನು ಜಾರಿ ಮಾಡುವಂತೆ ಮತ್ತು 30 ದಿನದ ಒಳಗಾಗಿ ದಂಡವನ್ನು ಪಾವತಿಸುವಂತೆ ಗೂಗಲ್​​ಗೆ ಸೂಚಿಸಿದ್ದಾರೆ.
ಇದನ್ನೂ ಓದಿ:10 ಅಡಿ ಸುರಂಗ ಕೊರೆದು ಚಿನ್ನಾಭರಣ ಮಳಿಗೆ ದೋಚಿದ ಕಳ್ಳರು
ತನಿಖೆ ವೇಳೆ CCIನಿಂದ ಲೋಪದೋಷವಾಗಿದೆ ಎಂದು ಆರೋಪಿಸಿ ಗೂಗಲ್​ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿತ್ತು. ಇದೇ ವೇಳೆ ನ್ಯಾಯಪೀಠವು CCIನ ಕೆಲವು ನಿಯಮಗಳಲ್ಲಿ ಮಾರ್ಪಾಡುಗಳನ್ನು ಮಾಡಿದೆ.
ಆ್ಯಂಡ್ರಾಯ್ಡ್​​ ಮೊಬೈಲ್​ ವ್ಯವಸ್ಥೆ ದುರ್ಬಳಕೆ ಮಾಡಿಕೊಂಡಿದ್ದಕ್ಕೆ ಅಕ್ಟೋಬರ್​ 20, 2022ರಂದು ಗೂಗಲ್​ಗೆ CCI 1,337.76 ಕೋಟಿ ರೂಪಾಯಿ ದಂಡವನ್ನ ಹಾಕಿತ್ತು. ಇದನ್ನು ಪ್ರಶ್ನಿಸಿ NCLATಗೆ ಮೇಲ್ಮನವಿ ಸಲ್ಲಿಸಲಾಗಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
