ಮುಂಬೈ:ರಾಜಕೀಯ ಪಕ್ಷಗಳು ತಮ್ಮತ್ತ ಬೆಂಬಲಿಗರನ್ನು ಆಕರ್ಷಿಸಲು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರುತ್ತವೆ ಮತ್ತು ಯಶಸ್ವಿಯಾಗುತ್ತವೆ.
ಇದೀಗ ಶರದ್​ ಪವಾರ್​ ನೇತೃತ್ವದ ನ್ಯಾಷನಲಿಸ್ಟ್​ ಕಾಂಗ್ರೆಸ್​ ಪಾರ್ಟಿಯೂ ಈ ರೀತಿಯ ಪ್ರಯೋಗಕ್ಕೆ ಮುಂದಾಗಿದೆ.
ತಮ್ಮ ಪಕ್ಷದತ್ತ ಹೆಚ್ಚಿನ ಬೆಂಬಲಿಗರನ್ನು ಸೆಳೆಯಲು ಯೋಜನೆಯನ್ನು ರೂಪಿಸಿರುವ NCP ನಾಯಕರು ಹೊಸ ಅಪ್ಲಿಕೇಶನ್​ ಒಂದನ್ನು ಲಾಂಚ್​ ಮಾಡಿದ್ದಾರೆ.
राष्ट्रवादी काँग्रेस पक्षाशी कार्यकर्त्यांची आणि राज्यातील जनतेची जवळीक वाढविण्यासाठी पक्षामार्फत अधिकृत ॲप तयार करण्यात आले. या ॲपच्या माध्यमातून पक्षाची धोरणे, पक्षासंबंधी नवनवीन माहिती सातत्याने पुरवण्यात येते. आता या ॲपमध्ये आता सुधारणा करण्यात आली आहे. त्यानुसार एनसीपी ॲप…pic.twitter.com/blwchmdSRf
ಇದನ್ನೂ ಓದಿ:ಸೆಲೆಬ್ರಿಟಿಗಳಿಗೆ ಶಾಕ್​ ನೀಡಿದ ಟ್ವಿಟರ್; ರಾತ್ರೋರಾತ್ರಿ ಕಾಣೆಯಾದ ಬ್ಲೂ ಟಿಕ್​
ಈ ಆ್ಯಪ್​ ಡೌನ್​ಲೋಡ್​ ಮಾಡಿ ರಿಜಿಸ್ಟರ್​​ ಮಾಡುವವರಿಗೆ ಪಕ್ಷದ ಕಡೆಯಿಂದ ಉಡುಗೊರೆಗಳನ್ನು ನೀಡಲಾಗುವುದು ಎಂದು ತಿಳಿಸಿದೆ.
ಈ ಕುರಿತು ಮಾತನಾಡಿರುವ ಪಕ್ಷದ ವಕ್ತಾರರೊಬ್ಬರು ಆ್ಯಪ್​ ಲಾಂಚ್​ ಮಾಡಿರುವ ಮುಖ್ಯ ಕಾರಣ ಎಂದರೆ ಜನರಿಗೆ ನಮ್ಮ ಪಕ್ಷದ ತತ್ವ ಸಿದ್ಧಾಂತ, ನಮ್ಮ ಸರ್ಕಾರ ಇದ್ದಾಗ ಜಾರಿಗೆ ತಂದಿರುವ ಯೋಜನೆಗಳು ಮತ್ತು ರಾಜಕೀಯದ ಬಗ್ಗೆ ಮಾಹಿತಿ ನೀಡಲು ಈ ಅಪ್ಲಿಕೇಶನ್​ ಉಪಯುಕ್ತವಾಗಿದೆ ಎಂದು ತಿಳಿಸಿದ್ದಾರೆ.
ಅಪ್ಲಿಕೇಶನ್​ ಅನ್ನು ಡೌನ್​​ಲೋಡ್​​ ಮಾಡುವವರಿಗೆ ಟೀ-ಶರ್ಟ್​​, ಬ್ಯಾಗ್​, ಛತ್ರಿ, ಕೀ ಚೈನ್​​, ಪೆನ್, ವಾಲೆಟ್​, ಕಾಫಿ ಮಗ್​, ವಾಟರ್​ ಬಾಟಲ್​​ ಹಾಗೂ ಹ್ಯಾಟ್​​ಗಳನ್ನು ನೀಡಲಾಗುವುದು ಎಂದು NCP ಪಕ್ಷದ ಹಿರಿಯ ವಕ್ತಾರರೊಬ್ಬರು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + nineteen =
Remember me
