ಮುಂಬೈ:ಮಹಾರಾಷ್ಟ್ರ ಸಾರಿಗೆ ಸಂಸ್ಥೆಯ ಬೆಸ್ಟ್​ ಬಸ್ಸುಗಳ ,ಮೇಲೆ ಹಾಕಿರುವ‘ಕರ್ನಾಟಕ ನೋಡ ಬನ್ನಿ’ಜಾಹೀರಾತಿನ ಬಗ್ಗೆ ಥಾಣೆ ವಿಧಾನಸಭಾ ಕ್ಷೇತ್ರದ ಎನ್​ಸಿಪಿ ಶಾಸಕ ಜಿತೇಂದ್ರ ಅಹ್ವಾಡ್​ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಶಾಸಕ ಜಿತೇಂದ್ರ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯೂ ಮುಂಬೈ ನಗರ ಸಾರಿಗೆ ಬಸ್ಸುಗಳ ಮೇಲೆ ಇಂಗ್ಲೀಷ್​ ಹಾಗೂ ಮರಾಠಿಯಲ್ಲಿ ಜಾಹೀರಾತು ಬರೆಸಿದೆ. ನೆರೆಯ ರಾಜ್ಯದ ಜಾಹೀರಾತನ್ನ ಮಹಾರಾಷ್ಟ್ರದ ಬಸ್ಸುಗಳ ಮೇಲೆ ಏಕೆ ಹಾಕಬೇಕು ಎಂದು ಪ್ರಶ್ನಿಸಿದ್ದಾರೆ.
ಮಹಾರಾಷ್ಟ್ರ ಸಾರಿಗೆ ಸಂಸ್ಥೆಯೂ ಈ ಜಾಹೀರಾತುಗಳನ್ನ ತೆಗೆಸಿಹಾಕದಿದ್ದಲ್ಲಿ ಬಸ್ಸುಗಳನ್ನ ಒಡೆದು ಹಾಕಲಾಗುವುದು. ಈ ಜಾಹೀರಾತನ್ನು ಹಾಕಿಸುವ ಮೂಲಕ ಮರಾಠಿಗರ ಗಾಯದ ಮೇಲೆ ಉಪ್ಪುಸವರಿದಂತಾಗಿದೆ ಎಂದು ಎನ್​ಸಿಪಿ ಶಾಸಕ ಜಿತೇಂದ್ರ ಅಹ್ವಾಡ್​​ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ:ಕೋವಿಡ್​ ವೇಳೆ ಬಿಡುಗಡೆಯಾಗಿದ್ದ ಕೈದಿಗಳಿಗೆ ಶರಣಾಗುವಂತೆ ಸುಪ್ರೀಂ ಕೋರ್ಟ್​ ಸೂಚನೆ
ಇದನ್ನೂ ಓದಿ:ವಿಶ್ವಕರ್ಮ ಸಮುದಾಯ ರಾಜಕೀಯವಾಗಿ ಉನ್ನತ ಸ್ಥಾನಕ್ಕೇರಲು ಇದು ಸಕಾಲ: ಕಂಬಾರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + eighteen =
Remember me
