ನವದೆಹಲಿ:ವಿಪಕ್ಷಗಳ ವಿರೋಧದ ನಡುವೆಯೂ ಮೂರು ಕೃಷಿ ಮಸೂದೆಗಳನ್ನು ಸಂಸತ್ತು ಅಂಗೀಕರಿಸಿದೆ. ಈ ಸಂಬಂಧ ಶುಕ್ರವಾರ ದೇಶಾದ್ಯಂತ ಪ್ರತಿಭಟನೆಗಳು ವ್ಯಕ್ತವಾಗಿದೆ. ಈ ನಡುವೆ, ಪಂಡಿತ ದೀನದಯಾಳ ಉಪಾಧ್ಯಾಯ ಅವರ ಜಯಂತಿ ಆಚರಣೆ ನಿಮತ್ತ ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೃಷಿ ಮಸೂದೆ ಕುರಿತ ಗೊಂದಲಗಳು ಬೇಕಾಗಿಲ್ಲ. ಹಿಂದಿನ ಸರ್ಕಾರಗಳು ಗೊಂದಲದ ಕಾನೂನುಗಳನ್ನು ಜಾರಿಗೊಳಿಸಿದ್ದವು. ಎನ್​ಡಿಎ ಸರ್ಕಾರ ಅವೆಲ್ಲವನ್ನೂ ತಿದ್ದಿ ತೀಡಿ ರೈತ ಕಲ್ಯಾಣಕ್ಕೆ ಸುಧಾರಣಾ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಸ್ಪಷ್ಟಪಡಿಸಿದರು.
ಸ್ವಾತಂತ್ರ್ಯೋತ್ತರ ಭಾರತದಲ್ಲಿ ಎನ್​ಡಿಎ ಅಧಿಕಾರಕ್ಕೆ ಬರುವುದಕ್ಕೂ ಮೊದಲು ದಶಕಗಳ ಅವಧಿಗೆ ಹಿಂದಿನ ಸರ್ಕಾರಗಳೆಲ್ಲವೂ ಕೃಷಿಕರು, ಕಾರ್ಮಿಕರ ವಿಚಾರದಲ್ಲಿ ಪೊಳ್ಳು ಭರವಸೆಯನ್ನು, ಘೋಷಣೆಗಳನ್ನು ಕೂಗುತ್ತ ಬಂದಿದ್ದವು. ಯಾವುದೂ ಕಾರ್ಯಗತವಾಗುತ್ತಿರಲಿಲ್ಲ. ಕೃಷಿಕರಿಗೆ, ಕಾರ್ಮಿಕರಿಗೆ ಸಿಗುತ್ತಾ ಇದ್ದುದು ಗೊಂದಲದ, ಬಿಕ್ಕಟ್ಟುಗಳಿಂದ ಕೂಡಿದ ಕಾನೂನು ಮತ್ತು ಭರವಸೆಗಳಷ್ಟೇ.
ಇದನ್ನೂ ಓದಿ:‘ದೀಪಿಕಾ ವಿಚಾರಣೆ ವೇಳೆ ಆಕೆ ಜತೆ ನಾನೂ ಇರಬಹುದೇ’; ಎನ್​ಸಿಬಿಗೆ ಪತಿ ರಣವೀರ್​ ಸಿಂಗ್​ ಮನವಿ
ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರ ಸ್ಥಿರವಾಗಿ ಪರಿಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸುತ್ತಲೇ ಇದೆ. ಕೃಷಿಕರ ಕಲ್ಯಾಣಕ್ಕಾಗಿ ಸುಧಾರಣಕಾ ಕ್ರಮಗಳನ್ನು ಪರಿಚಯಿಸಿದೆ. ಕಳೆದ ಕೆಲವು ವರ್ಷಗಳ ಅವಧಿಯಲ್ಲಿ ಕೃಷಿಕರನ್ನು ಬ್ಯಾಂಕಿನ ಜತೆಗೆ ಜೋಡಿಸುವ ಕೆಲಸ ಮಾಡಲಾಗಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮೂಲಕ 10 ಕೋಟಿಗೂ ಅಧಿಕ ಕೃಷಿಕರಿಗೆ 1 ಲಕ್ಷ ಕೋಟಿ ರೂಪಾಯಿಗೂ ಅಧಿಕ ಹಣವನ್ನು ವರ್ಗಾಯಿಸಲಾಗಿದೆ. ಕೃಷಿಕರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಕೊಡಿಸುವ ನಮ್ಮ ಪ್ರಯತ್ನ ಮುಂದುವರಿದಿದ್ದು, ಅದರ ಮೂಲಕ ಕೃಷಿಕರು ಸಾಲ ಪಡೆಯಬಹುದಾಗಿದೆ ಎಂದು ಪ್ರಧಾನಿ ವಿವರಿಸಿದರು. ಪ್ರಧಾನಿಯವರ ಪೂರ್ಣ ಭಾಷಣ ವೀಕ್ಷಣೆಗೆ ಮೇಲಿನ ವಿಡಿಯೋ ಕ್ಲಿಕ್ಕಿಸಬಹುದು. (ಏಜೆನ್ಸೀಸ್)
ನಟಿಯರಿಗೆ ಡ್ರಗ್ಸ್ ಪೂರೈಸ್ತಿದ್ದ 4ನೇ ಪೆಡ್ಲರ್ ಸಿಸಿಬಿ ಬಲೆಗೆ

Sign in to your account
Please enter an answer in digits:9 − 5 =
Remember me
