ಪಟನಾ: ಮೋದಿ ಹವಾಕ್ಕೆ ವಿರುದ್ಧವಾಗಿ ಮಹಾಘಟ ಬಂಧನದ ಮೂಲಕ ಗೆಲುವು ದಾಖಲಿಸಿದ ಮೊದಲ ರಾಜ್ಯ ಬಿಹಾರ. ಹೀಗಾಗಿ ಅಲ್ಲಿನ ಪ್ರತಿ ರಾಜಕೀಯ ಬೆಳವಣಿಗೆಯೂ ದೇಶದ ಗಮನಸೆಳೆಯುತ್ತಿದೆ. ಇದೀಗ ಬಿಹಾರದಲ್ಲಿ ಸದ್ಯದಲ್ಲೇ ವಿಧಾನಸಭೆ ಚುನಾವಣೆಯನ್ನು ಎದುರಿಸಲಿದ್ದು, ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್​(ಎನ್​ಡಿಎ) ಮಿತ್ರಪಕ್ಷಗಳ ನಡುವೆ ಹಲವು ವಿಚಾರಗಳಲ್ಲಿ ಭಿನ್ನಮತ ಏರ್ಪಟ್ಟಿದೆ.ಆಡಳಿತ ಚುಕ್ಕಾಣಿ ಎನ್​ಡಿಎ ಕೈಯಲ್ಲಿದ್ದರೂ, ಸಂಯುಕ್ತ ಜನತಾದಳ (ಜೆಡಿಯು), ಲೋಕ ಜನಶಕ್ತಿ ಪಕ್ಷದ ನಾಯಕರ ನಡುವೆ ಹಲವು ಮಹತ್ವದ ವಿಚಾರಗಳಲ್ಲಿ ಹೊಂದಾಣಿಕೆ ಇಲ್ಲದಿರುವುದೇ ಇದಕ್ಕೆ ಕಾರಣ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಕೇಂದ್ರ ಸಚಿವ ರಾಮ್​ ವಿಲಾಸ್ ಪಾಸ್ವಾನ್ ನಡುವೆ ಅಸಮಾಧಾನದ ಹೊಗೆ ಎದ್ದಿದೆ. ವಿಶೇಷವಾಗಿ ಬಿಹಾರಕ್ಕೆ ಮರಳಿದ ವಲಸೆ ಕಾರ್ಮಿಕರಿಗೆ ಉದ್ಯೋಗ ಒದಗಿಸುವ ವಿಷಯ, ಕೃಷಿಕರ ವಿಷಯ, ಚುನಾವಣೆಯಲ್ಲಿ ಸೀಟು ಹಂಚಿಕೆ ಹೀಗೆ ಹಲವು ವಿಷಯಗಳಲ್ಲಿ ಒಮ್ಮತ ಸಾಧಿಸುವುದು ಸಾಧ್ಯವಾಗಿಲ್ಲ. ಎಲ್ಲದಕ್ಕೂ ಮಿಗಿಲಾಗಿ ಮುಖ್ಯಮಂತ್ರಿ ಗಾದಿ ವಿಚಾರವೂ ಇದರಲ್ಲಿ ಸೇರಿಕೊಂಡಿದೆ. ಮುಖ್ಯಮಂತ್ರಿ ಗಾದಿ ಎಲ್​ಜೆಪಿಗೂ ಸಿಗಬೇಕು ಎಂಬ ವಾದ ಪಾಸ್ವಾನ್ ಆಪ್ತವಲಯದ್ದು.
ಜೆಡಿಯುನ ಹಿರಿಯ ನಾಯಕರೊಬ್ಬರ ಮಾಹಿತಿ ಪ್ರಕಾರ, ಮುಖ್ಯಮಂತ್ರಿ ನಿತೀಶ್ ಕುಮಾರ್​ ವಿಚಾರವಾಗಿ ಎಲ್​ಜೆಪಿ ನಾಯಕರು ಬಹಳ ಟೀಕೆ ಮಾಡುತ್ತಿದ್ದಾರೆ. ಕರೊನಾ ವೈರಸ್ ಸೋಂಕು ನಿರ್ವಹಣೆಯಲ್ಲಿ ಸರ್ಕಾರದ ನಡೆಯನ್ನೂ ಟೀಕಿಸುತ್ತಿದ್ದಾರೆ.ಈ ಭಿನ್ನಮತ ಎಲ್ಲಿತನಕ ಹೋಗಿದೆ ಎಂದರೆ ಎರಡೂ ಪಕ್ಷದ ನಾಯಕರು ತಾವು ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡಿದ್ದೇವೆಯೇ ಹೊರತು, ಪರಸ್ಪರ ಅಲ್ಲ ಎಂದು ಬಹಿರಂಗ ಹೇಳಿಕೆ ನೀಡುವ ತನಕ ಮುಂದೆ ಹೋಗಿದ್ದಾರೆ.
ಇದನ್ನೂ ಓದಿ:ಯೋಧನಾಗು, ಇಲ್ಲಾ ಶಿಕ್ಷಕನಾಗು- ಈ ಗ್ರಾಮದ ಪ್ರತಿಮಗುವೂ ಪಾಲಿಸಬೇಕಾದ ಅಲಿಖಿತ ಶಾಸನವಿದು!
ಬಿಹಾರದ ವಿಧಾನಸಭೆಯಲ್ಲಿ 243 ಸ್ಥಾನಗಳ ಪೈಕಿ 120 ಸ್ಥಾನಗಳಲ್ಲಿ ಜೆಡಿಯು ಸ್ಪರ್ಧಿಸುವ ವಿಚಾರವನ್ನು ಬಿಜೆಪಿ ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಎಲ್​ಜೆಪಿಯ ಸೀಟು ಹಂಚಿಕೆ ಏನಿದ್ದರೂ ಬಿಜೆಪಿ ಜತೆಗೆ ನಡೆಯಬೇಕು. ಉಳಿದ ಸೀಟುಗಳು ಬಿಜೆಪಿಯದ್ದಾಗಿದ್ದು, ಅದನ್ನು ಅವರು ಮಾತನಾಡಿ ಬಗೆಹರಿಸಿಕೊಳ್ಳಬೇಕು ಎಂಬುದು ಜೆಡಿಯು ನಾಯಕರ ವಾದ. ವಿಧಾನ ಪರಿಷತ್ತಿನ 12 ಸ್ಥಾನಗಳಿಗೂ ಚುನಾವಣೆ ನಡೆಯಲಿದ್ದು, ಅಲ್ಲಿ ಕನಿಷ್ಠ ಏಳು ಸ್ಥಾನಗಳು ಜೆಡಿಯುಗೆ ಹಾಗೂ ಉಳಿದ ಐದು ಸ್ಥಾನಗಳನ್ನು ಬಿಜೆಪಿ, ಎಲ್​ಜೆಪಿಗಳು ಹಂಚಿಕೊಳ್ಳಬೇಕು ಎಂಬ ಬೇಡಿಕೆಯನ್ನು ಜೆಡಿಯು ನಾಯಕರು ಬಿಜೆಪಿ ಮುಂದಿಟ್ಟಿದ್ದಾರೆ.
2015ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 157 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಎಲ್​ಜೆಪಿ 42 ಮತ್ತು ಉಳಿದ ಸ್ಥಾನಗಳಲ್ಲಿ ಇನ್ನುಳಿದ ಚಿಕ್ಕಪುಟ್ಟ ಮಿತ್ರಪಕ್ಷಗಳು ಸ್ಪರ್ಧಿಸಿದ್ದವು. ಇದೇ ವೇಳೆ ಆರ್​ಜೆಡಿ-ಜೆಡಿಯು ಮಹಾಘಟಬಂಧನದ ಹೆಸರಿನಲ್ಲಿ ಚುನಾವಣೆ ಸ್ಪರ್ಧಿಸಿ ಗೆಲುವು ದಾಖಲಿಸಿಕೊಂಡಿತ್ತು. ತರುವಾಯ ಆರ್​ಜೆಡಿ ಜತೆಗಿನ ಮೈತ್ರಿ ಕಡಿದುಕೊಂಡ ನಿತೀಶ್ ಕುಮಾರ್ ಮತ್ತೆ ಬಿಜೆಪಿ ಜತೆಗೆ ಕೈ ಜೋಡಿಸಿ ಸರ್ಕಾರ ಉಳಿಸಿಕೊಂಡಿದ್ದರು. 2010ರ ಚುನಾವಣೆಯಲ್ಲಿ ಬಿಜೆಪಿ- ಜೆಡಿಯು ಒಟ್ಟಾಗಿ ಸ್ಪರ್ಧಿಸಿದ್ದವು. ಆರ್​ಜೆಡಿ, ಎಲ್​ಜೆಪಿ ಮೈತ್ರಿ ಪ್ರತ್ಯೇಕವಾಗಿ ಸ್ಪರ್ಧಿಸಿತ್ತು. ಕಾಂಗ್ರೆಸ್ ಒಂಟಿಯಾಗಿ ಚುನಾವಣೆ ಎದುರಿಸಿತ್ತು. (ಏಜೆನ್ಸೀಸ್​)
ಹಂಪಿಗೆ ಲಾಕ್ ಡೌನ್ ಮುಕ್ತಿ…!: ಇಂದಿನಿಂದ ಸ್ಮಾರಕ ವೀಕ್ಷಣೆಗೆ ಅವಕಾಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 13 =
Remember me
