ಚಂಡೀಗಢ:ಪಂಜಾಬ್​ನಲ್ಲಿ ಫೆ.20ರಂದು ಚುನಾವಣೆ ನಡೆಯಲಿದ್ದು, ಬಿಜೆಪಿ ನೇತೃತ್ವದ ಎನ್​ಡಿಎ ಶನಿವಾರ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಸರ್ಕಾರಿ ಉದ್ಯೋಗದಲ್ಲಿ ಯುವಜನರಿಗೆ ಶೇಕಡ 75, ಖಾಸಗಿ ಉದ್ಯೋಗದಲ್ಲಿ ಶೇಕಡ 50 ಮೀಸಲು ಒದಗಿಸುವುದಾಗಿ ಭರವಸೆ ನೀಡಿದೆ. ಸರ್ಕಾರಿ ಉದ್ಯೋಗದಲ್ಲಿ ಮಹಿಳೆಯರಿಗೆ ಶೇಕಡ 35 ಮೀಸಲು, ಪದವೀಧರರಿಗೆ ಎರಡು ವರ್ಷ ನಿರುದ್ಯೋಗ ಭತ್ಯೆ 4000 ರೂಪಾಯಿ, ರಾಜ್ಯದ ಆಥಿರ್ಕತೆಯ ಪುನಶ್ಚೇತನಕ್ಕಾಗಿ ಭಾರಿ ಪ್ರಮಾಣದ ಮೂಲಸೌಕರ್ಯ ನಿರ್ಮಾಣ ಮುಂತಾದ ಭರವಸೆಗಳು ಪ್ರಣಾಳಿಕೆಯಲ್ಲಿವೆ. ಚುನಾವಣೆಗೆ ನಾಮನಿರ್ದೇಶನ ಮಾಡುವ ಮುನ್ನ ಡೋಪ್​ ಟೆಸ್ಟ್​ ಕಡ್ಡಾಯ ಮಾಡುವುದಾಗಿಯೂ ಪ್ರಣಾಳಿಕೆಯಲ್ಲಿ ಘೋಷಿಸಲಾಗಿದೆ. ಕೇಂದ್ರ ಸಚಿವರಾದ ಹರದೀಪ್​ ಸಿಂಗ್​ ಪುರಿ, ಸೋಮ್​ ಪ್ರಕಾಶ್​, ಬಿಜೆಪಿ ನಾಯಕರಾದ ದುಷ್ಯಂತ್​ ಗೌತಮ್​, ತರುಣ್​ ಛುಗ್​, ಅಮರಿಂದರ್​ ಸಿಂಗ್​ ಅವರ ಪುತ್ರ ರಣೀಂದರ್​ ಸಿಂಗ್​ ಮತ್ತು ಇತರರ ಉಪಸ್ಥಿತಿಯಲ್ಲಿ ಪ್ರಣಾಳಿಕೆ ಬಿಡುಗಡೆಯಾಗಿದೆ.
ಎರಡನೇ ಹಂತದಲ್ಲಿ 12 ಅನಕ್ಷರಸ್ಥ ಅಭ್ಯರ್ಥಿಗಳು:ಉತ್ತರ ಪ್ರದೇಶದಲ್ಲಿ ೆ. 14ರಂದು ಎರಡನೇ ಹಂತದಲ್ಲಿ ಚುನಾವಣೆ ಎದುರಿಸುವ 55 ಕ್ಷೇತ್ರಗಳಲ್ಲಿ 114 ಅಭ್ಯಥಿರ್ಗಳು ಎಂಟನೇ ತರಗತಿ ತನಕ ಓದಿದವರು. 12 ಅಭ್ಯರ್ಥಿಗಳು ಅನಕ್ಷರಸ್ಥರು. 102 ಅಭ್ಯಥಿರ್ಗಳು ಸ್ನಾತಕೋತ್ತರ ಪದವೀಧರರು, ಆರು ಅಭ್ಯರ್ಥಿಗಳು ಪಿಎಚ್​ಡಿ ಪಡದವರು ಎಂದು ಅಸೋಸಿಯೇಷನ್​ ಆ್​ ಡೆಮಾಕ್ರಟಿಕ್​ ರಿಾಮ್ಸ್​ರ್ (ಎಡಿಆರ್​) ವರದಿ ತಿಳಿಸಿದೆ. 586 ಅಭ್ಯಥಿರ್ಗಳು ಕಣದಲ್ಲಿದ್ದಾರೆ.
ಕಾಂಗ್ರೆಸ್​ನ ಓಲೈಕೆಗೆ ತಲೆದೂಗಬೇಡಿ:ಉತ್ತರಾಖಂಡದಲ್ಲಿ ಫೆ.14ರಂದು ಮತದಾನ ನಡೆಯಲಿದ್ದು, ರುದ್ರಪುರದಲ್ಲಿ ಕೊನೆಯ ದಿನದ ಪ್ರಚಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ದೇವಭೂಮಿಯಲ್ಲಿ ಮುಸ್ಲಿಂ ಯೂನಿವರ್ಸಿಟಿಯನ್ನು ಸ್ಥಾಪಿಸಲು ಕಾಂಗ್ರೆಸ್​ ಚಿಂತನೆ ನಡೆಸಿದೆ. ಕಾಂಗ್ರೆಸ್​ ಪಕ್ಷದ ಇಂತಹ ಓಲೈಕೆ ರಾಜಕಾರಣಕ್ಕೆ ತಲೆದೂಗಬೇಡಿ. ಅವರ ಕಾರ್ಯಸೂಚಿ ಯಶಸ್ವಿಯಾಗುವಂತೆ ಮಾಡಬೇಡಿ. ಎಂದು ಪ್ರಧಾನಿ ಮೋದಿ ಮತದಾರರಿಗೆ ಮನವಿ ಮಾಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 7 =
Remember me
