ನವದೆಹಲಿ:ರಾಜ್ಯಸಭೆಯ 61 ಸ್ಥಾನಗಳಿಗೆ ನೂತನ ಸದಸ್ಯರು ಆಯ್ಕೆಯಾಗುವುದರೊಂದಿಗೆ ಮೇಲ್ಮನೆಯಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟದ ಬಲ ಹೆಚ್ಚಾಗಿದೆ. 17 ಸದಸ್ಯರ ಆಯ್ಕೆಯೊಂದಿಗೆ ರಾಜ್ಯಸಭೆಯಲ್ಲಿ ಬಿಜೆಪಿ ಸಂಖ್ಯಾ ಬಲ 85ಕ್ಕೆ ಏರಿಕೆಯಾಗಿದ್ದು, 245 ಸದಸ್ಯರನ್ನೊಳಗೊಂಡ ರಾಜ್ಯಸಭೆಯಲ್ಲಿ ಎನ್​ಡಿಎ ಮೈತ್ರಿಕೂಟದ ಒಟ್ಟು ಸಂಖ್ಯೆ 116ಕ್ಕೆ ಏರಿದೆ. ಇದರ ಜತೆಗೆ ಬಿಜೆಪಿಯೆಡೆಗೆ ಒಲವು ಹೊಂದಿರುವ ಬಿಜೆಡಿ (9 ಸ್ಥಾನ), ವೈಎಸ್​ಆರ್ ಕಾಂಗ್ರೆಸ್ (6 ಸ್ಥಾನ) ಹಾಗೂ ಇನ್ನಿತರ ಸಣ್ಣ ಪಕ್ಷಗಳು ಬೆಂಬಲಿಸಿದರೆ ರಾಜ್ಯಸಭೆಯಲ್ಲಿ ಎನ್​ಡಿಎ ಯಾವುದೇ ಪ್ರಮುಖ ಸವಾಲುಗಳನ್ನು ಸುಲಭವಾಗಿ ಎದುರಿಸಬಹುದಾಗಿದೆ.
61 ಸ್ಥಾನಗಳ ಚುನಾವಣೆಯಲ್ಲಿ 9 ಸ್ಥಾನಗಳನ್ನು ಗೆದ್ದರೂ ಕಾಂಗ್ರೆಸ್ ಸಂಖ್ಯೆ 40ಕ್ಕಿಳಿದಿದೆ. ಬಿಜೆಡಿ ಮತ್ತು ಟಿಎಂಸಿ ತಲಾ 4 ಸ್ಥಾನ, ಜೆಡಿಯು, ಎಐಎಡಿಎಂಕೆ ಮತ್ತು ಡಿಎಂಕೆ ತಲಾ 3 ಸ್ಥಾನ, ಎನ್​ಸಿಪಿ, ಆರ್​ಜೆಡಿ ಮತ್ತು ಟಿಆರ್​ಎಸ್ ತಲಾ 2 ಸ್ಥಾನ ಹಾಗೂ ಉಳಿದ ಪಕ್ಷಗಳು 12 ಸ್ಥಾನಗಳನ್ನು ತಮ್ಮದಾಗಿಸಿಕೊಂಡಿವೆ. ಮೇಲ್ವನೆಗೆ ಆಯ್ಕೆಯಾಗಿರುವ 61 ನೂತನ ಸದಸ್ಯರಲ್ಲಿ ಕಾಂಗ್ರೆಸ್​ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿಯ ಜ್ಯೋತಿರಾದಿತ್ಯ ಸಿಂಧಿಯಾ ಸೇರಿದಂತೆ 43 ಸಂಸದರು ಇದೇ ಮೊದಲ ಬಾರಿ ಮೇಲ್ಮನೆ ಪ್ರವೇಶಿಸಿದ್ದಾರೆ. 12 ಸಂಸದರು ರಾಜ್ಯಸಭೆಗೆ ಮರು ಆಯ್ಕೆಯಾಗಿದ್ದು, ಈ ಹಿಂದೆ ರಾಜ್ಯಸಭೆ ಸದಸ್ಯರಾಗಿದ್ದ 6 ಸಂಸದರು ಮತ್ತೆ ಪ್ರವೇಶ ಪಡೆದಿದ್ದಾರೆ. 20 ರಾಜ್ಯಗಳ ಒಟ್ಟು 61 ಸ್ಥಾನಗಳಲ್ಲಿ 42 ಸ್ಥಾನಗಳ ಸದಸ್ಯರು ಕಳೆದ ಮಾರ್ಚ್​ನಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದು, ಇದರಲ್ಲಿ 28 ಸದಸ್ಯರು ಮೊದಲ ಬಾರಿ ಮೇಲ್ಮನೆ ಪ್ರವೇಶಿಸಿದವರಾಗಿದ್ದಾರೆ.
ರಾಜ್ಯಸಭೆ ಬಲಾಬಲ:
ಲಡಾಖ್​ಗೆ ಹರಿಯುವ ಗಾಲ್ವಾನ್​ ನದಿ ದಿಕ್ಕನ್ನೇ ಬದಲಿಸುತ್ತಿದೆ ಚೀನಾ; ಉಪಗ್ರಹ ಚಿತ್ರಗಳಿಂದ ಕುತಂತ್ರ ಬಯಲು



ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + twenty =
Remember me
