ನವದೆಹಲಿ:ಬಿಹಾರ ಚುನಾವಣಾ ಗೆಲುವಿನ ಸಂಭ್ರಮದ ನಿಮಿತ್ತ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಹಾಗೇ ಬಿಹಾರದ ಜನತೆಗೆ ಧನ್ಯವಾದ ತಿಳಿಸಿದರು.ಈ 21ನೇ ಶತಮಾನದಲ್ಲಿ ಅಭಿವೃದ್ಧಿಯೇ ರಾಷ್ಟ್ರ ರಾಜಕಾರಣದ ಮೂಲಮಂತ್ರ ಎಂದು ಜನರೇ ನಿರ್ಧರಿಸಿದ್ದಾರೆ. ದೇಶದ ಅಭಿವೃದ್ಧಿಗಾಗಿ ಯಾವ ಪಕ್ಷ ನಿರಂತರವಾಗಿ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆಯೋ, ಅದನ್ನೇ ಜನರು ಗೆಲ್ಲಿಸುತ್ತಿದ್ದಾರೆ ಎಂದು ಮೋದಿಯವರು ಹೇಳಿದರು.
ಮಹಿಳಾ ಮತದಾರರನ್ನು ಸೈಲೆಂಟ್​ ಮೆಜಾರಿಟಿ ಎಂದು ಕರೆದ ಪ್ರಧಾನಿಯವರು, ಈ ದೇಶದ ಮಹಿಳೆಯರು ಎಲ್ಲ ರೀತಿಯ ಚುನಾವಣೆಯಲ್ಲೂ ಬಿಜೆಪಿಯನ್ನು ಮೌನವಾಗಿಯೇ ಬೆಂಬಲಿಸುತ್ತಿದ್ದಾರೆ. ಉಜ್ವಲಾ ಯೋಜನೆಯಿಂದ ಹಿಡಿದು, ಗೃಹಕ್ಕೆ ಸಂಬಂಧಪಟ್ಟ ಎಲ್ಲ ಯೋಜನೆಗಳ ಫಲಾನುಭವಿಗಳು ಮಹಿಳೆಯರೇ ಆಗಿದ್ದಾರೆ. ಅವರೂ ಸಹ ಎನ್​ಡಿಎಗೇ ಮತ ಹಾಕುತ್ತಿದ್ದಾರೆ. ಬಿಹಾರದ ಈ ಉಪಚುನಾವಣೆಯಲ್ಲೂ ಅದೇ ಪುನರಾವರ್ತನೆಯಾಗಿದೆ ಎಂದರು.
ಬಿಹಾರವಷ್ಟೇ ಅಲ್ಲದೆ, ಕರ್ನಾಟಕ, ಉತ್ತರ ಪ್ರದೇಶ, ಗುಜರಾತ್​, ಮಧ್ಯಪ್ರದೇಶ್​, ಮಣಿಪುರ ಉಪಚುನಾವಣೆಗಳಲ್ಲೂ ಬಿಜೆಪಿ ಗೆದ್ದಿದ್ದು, ಸ್ಥಳೀಯ ಮುಖಂಡರು ಈ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿಯವರೇ ಕಾರಣ ಎನ್ನುತ್ತಿದ್ದಾರೆ. ಅದರಲ್ಲೂ ಬಿಹಾರ ಉಪಚುನಾವಣೆಯಲ್ಲಿ ಜಿದ್ದಾಜಿದ್ದಿ ಹೆಚ್ಚಾಗಿತ್ತು. ಎನ್​ಡಿಎ ವಿರುದ್ಧ ಮಹಾಘಟ್​ಬಂಧನ್​ ರಚಿತವಾಗಿತ್ತು. ಆದರೂ ಸಹ ಒಟ್ಟು 243 ವಿಧಾನಸಭಾ ಕ್ಷೇತ್ರಗಳಲ್ಲಿ 125 ಕ್ಷೇತ್ರಗಳಲ್ಲಿ ಎನ್​ಡಿಎ ಗೆಲುವು ಸಾಧಿಸಿದೆ.
ಅದರಲ್ಲೂ ಬಿಜೆಪಿ ಪಾಲಿಗೆ ಪ್ರಧಾನಿ ನರೇಂದ್ರ ಮೋದಿಯವರೇ ಮುಖ್ಯ ಪ್ರಚಾರಕರಾಗಿದ್ದಾರೆ. ಬಿಹಾರದ ಮೂರು ಹಂತದ ಚುನಾವಣೆ ನಿಮಿತ್ತ ಮೋದಿಯವರು ಒಟ್ಟು 12 ರ್ಯಾಲಿಗಳನ್ನು ನಡೆಸಿದ್ದರು. (ಏಜೆನ್ಸೀಸ್​)
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
Sign in to your account
Please enter an answer in digits:4 × two =
Remember me
