ಪಟನಾ:ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್​ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ.
ಬಹಳ ಕುತೂಹಲ ಕೆರಳಿಸಿದ್ದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಎನ್​ಡಿಎ ಸರ್ಕಾರಕ್ಕೆ ಅಧಿಕಾರ ಸಿಕ್ಕಿದ್ದು, ನಿತೀಶ್​ ಕುಮಾರ್​ಗೆ ಮತ್ತೆ ಸಿಎಂ ಪಟ್ಟ ಕಟ್ಟಲು ಎನ್​ಡಿಎ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಭಾನುವಾರ ನಡೆದ ಎನ್​ಡಿಎ ಸಭೆಯಲ್ಲಿ ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್​ ಕುಮಾರ್​ ಅವರನ್ನು ಆಯ್ಕೆ ಮಾಡಲಾಗಿದೆ. ಜೆಡಿಯು ಕಡಿಮೆ ಸ್ಥಾನ ಗೆದ್ದರೂ ನಿತೀಶ್​ಗೆ ನಾಲ್ಕನೇ ಬಾರಿ ಮುಖ್ಯಮಂತ್ರಿ ಆಗುವ ಅವಕಾಶ ಒಲಿದಿದೆ.
ಜಿದ್ದಾಜಿದ್ದಿನ ಹೋರಾಟದಲ್ಲಿ ಮಹಾಘಟಬಂಧನ್​ ವಿರುದ್ಧ ಎನ್​ಡಿಎ(ಬಿಜೆಪಿ, ಜೆಡಿಯು, ಎಚ್​ಎಎಂ ಹಾಗೂ ವಿಐಪಿ ಪಕ್ಷಗಳು) ಸ್ಪಷ್ಟ ಬಹುಮತ ಪಡೆದಿದೆ. ಪ್ರತಿ ಹಂತದಲ್ಲೂ ಕುತೂಹಲ ಸೃಷ್ಟಿಸಿದ್ದ ಪೈಪೋಟಿಯಲ್ಲಿ ಎನ್‍ಡಿಎಗೆ ರೋಚಕ ಗೆಲುವು ಸಿಕ್ಕಿದೆ. ಶುಕ್ರವಾರವಷ್ಟೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನಿತೀಶ್​ಕುಮಾರ್​, ಹೊಸ ಎನ್​ಡಿಎ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿಯುವ ತನಕ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರಿದಿದ್ದರು.
ಇದೀಗ ಎನ್​ಡಿಎ ಸಭೆಯಲ್ಲಿ ಮುಖ್ಯಮಂತ್ರಿ ಯಾರೆಂಬ ನಿರ್ಣಯ ಹೊರಬಿದ್ದಿದ್ದು, ನಿತೀಶ್​ ಅವರಿಗೆ ಸಿಎಂ ಗಾದಿ ಒಲಿದಿದೆ. ಸೋಮವಾರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆ ಇದೆ.
ಜಯಚಂದ್ರ ಕೇಳಿದ್ದನ್ನ ಡಿಕೆಶಿ ಕೊಡ್ಲಿಲ್ವಂತೆ… ಅದಕ್ಕೆ ಶಿರಾದಲ್ಲಿ ಕಾಂಗ್ರೆಸ್​ ಸೋಲ್ತಂತೆ!

ಬಿಹಾರದಲ್ಲಿ ಮತ್ತೆ ಪ್ರಜಾಪ್ರಭುತ್ವಕ್ಕೆ ಗೆಲುವಾಗಿದೆ- ಪ್ರಧಾನಿ ನರೇಂದ್ರ ಮೋದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − six =
Remember me
