ಪಟನಾ:ಬಹಳ ಕುತೂಹಲ ಕೆರಳಿಸಿದ್ದ ಬಿಹಾರ ವಿಧಾನ ಸಭಾ ಚುನಾವಣೆಯ ಫಲಿತಾಂಶ ಸಂಪೂರ್ಣವಾಗಿ ಪ್ರಕಟವಾಗಿದ್ದು, ಅಧಿಕಾರ ಚುಕ್ಕಾಣಿಯನ್ನು ನಿತೀಶ್ ಕುಮಾರ್ ನೇತೃತ್ವದ ಎನ್​ಡಿಎ ಉಳಿಸಿಕೊಂಡಿದೆ. ಪ್ರತಿ ಹಂತದಲ್ಲೂ ಕುತೂಹಲ ಸೃಷ್ಟಿಸಿದ್ದ ಪೈಪೋಟಿಯ ಕೊನೆಗೆ ಎನ್‍ಡಿಎಗೆ ರೋಚಕ ಗೆಲುವು ಪ್ರಾಪ್ತವಾಗಿದೆ. ಆರ್​ಜೆಡಿ ಉತ್ತಮ ಸಾಧನೆ ತೋರಿದ್ದರೂ, ಅದರ ನೇತೃತ್ವದ ಮೈತ್ರಿಕೂಟ ಪ್ರತಿಪಕ್ಷ ಸ್ಥಾನದಲ್ಲಿ ಕೂರಬೇಕಾಗಿದೆ. ಎಲ್​ಜೆಪಿ-ಜೆಡಿಯು ಕಿತ್ತಾಟದಲ್ಲಿ ಲಾಭವಾಗಿದ್ದು ಆರ್​ಜೆಡಿ ಎಂಬುದು ಸ್ಪಷ್ಟವಾಗಿದೆ.
ಮತ ಎಣಿಕೆ ಆರಂಭವಾಗುತ್ತಲೇ ಮುನ್ನಡೆ ಸಾಧಿಸಿದ್ದ ಆರ್​ಜೆಡಿ ನೇತೃತ್ವದ ಮೈತ್ರಿಕೂಟ ಅಧಿಕಾರ ಚುಕ್ಕಾಣಿ ಹಿಡಿದೇ ಬಿಡುವುದೆಂಬ ಭರವಸೆ ಮೂಡಿಸಿತ್ತು. ಆದರೆ, ಆಡಳಿತಾರೂಢ ಎನ್​ಡಿಎ ಕೂಡ ಪೈಪೋಟಿ ನೀಡಿದ್ದು ಮುಂದಿನ ಹಂತಗಳ ಮತ ಎಣಿಕೆಯಲ್ಲಿ ತೀವ್ರ ಪೈಪೋಟಿ ಕಂಡುಬಂದಿತ್ತು.243 ಕ್ಷೇತ್ರಗಳ ಪೈಕಿ ಬಿಜೆಪಿ 74, ಜೆಡಿಯು 43, ಎಚ್​ಎಎಂ 4, ವಿಕಾಸ ಶೀಲ್ ಇನ್​ಸಾನ್ ಪಾರ್ಟಿ 4,  ಎಲ್​ಜೆಪಿ 1 ಸ್ಥಾನಗಳಲ್ಲಿ ಗೆಲುವು ದಾಖಲಿಸಿವೆ. ಆರ್​ಜೆಡಿ 75 ಸ್ಥಾನಗಳಲ್ಲಿ ಗೆಲುವು ದಾಖಲಿಸಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಮೈತ್ರಿಕೂಟ ನಿರೀಕ್ಷಿತ ಸರಳ ಬಹುಮತ ಸಾಬೀತು ಪಡಿಸುವಲ್ಲಿ ವಿಫಲವಾದ ಕಾರಣ ಪ್ರತಿಪಕ್ಷದಲ್ಲೇ ಕೂರಬೇಕಾದ ಸ್ಥಿತಿ ಉಂಟಾಗಿದೆ. ಕಾಂಗ್ರೆಸ್ 19, ಎಐಎಂಇಐಎಂ 5, ಎಡರಂಗ 16 ಸ್ಥಾನಗಳಲ್ಲಿ ಗೆಲುವು ದಾಖಲಿಸಿವೆ.
ಇದನ್ನೂ ಓದಿ:ನಾಲ್ಕನೇ ಹಂತದ ನಿವೇಶನ ಹರಾಜಿನಲ್ಲಿ ಬಿಡಿಎಗೆ ಬಂಪರ್​ ಆದಾಯ
2015ರ ಚುನಾವಣೆಯ ಫಲಿತಾಂಶಕ್ಕೂ ಈ ಬಾರಿಯ ಚುನಾವಣಾ ಫಲಿತಾಂಶಕ್ಕೂ ಹೋಲಿಸಿದರೆ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯುಗೆ ಎಲ್​ಜೆಪಿ ವಿರೋಧದ ಅಲೆಯ ಬಿಸಿ ತಟ್ಟಿದೆ. ನಿತೀಶ್ ಕುಮಾರ್ ವಿರುದ್ಧ ಸಿಡಿದೆದ್ದು ಒಂಟಿಯಾಗಿ ಚುನಾವಣೆ ಎದುರಿಸಿ ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನ ಶಕ್ತಿ ಪಕ್ಷ ಒಂದು ಸ್ಥಾನ ಗೆಲ್ಲಲಷ್ಟೇ ಸಫಲವಾಗಿದೆ. ಕಳೆದ ಸಲಕ್ಕೆ ಹೋಲಿಸಿದರೆ ಈ ಸಲ ಇನ್ನಷ್ಟು ಹೊಡೆತ ತಿಂದಿದೆ. ತೇಜಸ್ವಿ ಯಾದವ್ ನೇತೃತ್ವದ ಆರ್​ಜೆಡಿ ಈ ಬಾರಿ ಅನಿರೀಕ್ಷಿತವೆಂಬಂತೆ ಅತಿ ಹೆಚ್ಚು ಸ್ಥಾನ ಗೆದ್ದುಕೊಂಡಿದ್ದು, ಮೈತ್ರಿಕೂಟದ ಬಲವೂ 100ರ ಮೇಲಿದೆ.ಪಕ್ಷಗಳ ಬಲಾಬಲ ಚಿತ್ರಣ ಈ ಕೆಳಗಿನಂತಿದೆ.


ಬಿಹಾರದಲ್ಲಿ ಮತ್ತೆ ಪ್ರಜಾಪ್ರಭುತ್ವಕ್ಕೆ ಗೆಲುವಾಗಿದೆ- ಪ್ರಧಾನಿ ನರೇಂದ್ರ ಮೋದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 18 =
Remember me
