ನವದೆಹಲಿ: ಮಸ್ಟಿಟಿಸ್​, ಬ್ರೂಸೆಲ್ಲೊಸಿಸ್​ ಸೇರಿ ವಿವಿಧ ರೀತಿ ಪಶು ರೋಗಗಳಿಗೆ ಪರ್ಯಾಯ ಚಿಕಿತ್ಸಾ ವಿಧಾನವಾಗಿ ಆಯುರ್ವೇದವನ್ನು ಬಳಸುವುದಕ್ಕೆ ರಾಷ್ಟ್ರೀಯ ಪಶು ಅಭಿವೃದ್ಧಿ ಮಂಡಳಿ (ಎನ್​ಡಿಡಿಬಿ) ಮುಂದಡಿ ಇರಿಸಿದೆ. ಪರಿಸರ ದಿನಾಚರಣೆ ಕಾರ್ಯಕ್ರಮದ ಸಂದರ್ಭದಲ್ಲಿ ಪಶು ಆಯುರ್ವೇದ ಆಧಾರಿತ ಎಥ್ನೋ ವೆಟರ್​ನರಿ ಮೆಡಿಸಿನ್​(ಇವಿಎಂ) ಅನ್ನು ಪರ್ಯಾಯ ಚಿಕಿತ್ಸೆ ರೂಪದಲ್ಲಿ ಬಳಸಲು ಉತ್ತೇಜನ ನೀಡುವುದಕ್ಕೆ ಮುಂದಾಗಿದೆ.
ಇದನ್ನೂ ಓದಿ:ಜೂನ್ 12ರಂದು ನಡೆಯಲಿದೆ ಜಿಎಸ್​ಟಿ ಕೌನ್ಸಿಲ್ ಸಭೆ: ಚರ್ಚೆಯಾಗಲಿವೆ ಮಹತ್ವದ ವಿಚಾರಗಳು
ಜಾಗತಿಕವಾಗಿ ಪರಿಸರ, ಮನುಷ್ಯರು ಮತ್ತು ಪ್ರಾಣಿಗಳ ಸುರಕ್ಷಿತ ಮತ್ತು ಆರೋಗ್ಯಪೂರ್ಣ ಸಹಬಾಳ್ವೆಯ ಅಗತ್ಯ ಇಂದು ಕಂಡುಬಂದಿದೆ. ಕೋವಿಡ್ 19 ಸೋಂಕು ಜಾಗತಿಕವಾಗಿ ಆರೋಗ್ಯ ಬಿಕ್ಕಟ್ಟನ್ನು ಸೃಷ್ಟಿಸಿದೆ. ಮನುಷ್ಯರಿಗೆ ಕಂಟಕವಾಗುತ್ತಿರುವ ಪ್ರಾಣಿಜನ್ಯ ರೋಗಗಳನ್ನು ಅದರ ಮೂಲದಲ್ಲಿಯೇ ತಡೆಗಟ್ಟುವ ವಿಚಾರಕ್ಕೆ ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ.| ದಿಲೀಪ್ ರಥ್ಎನ್​ಡಿಡಿಬಿ ಚೇರ್ಮನ್
ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಎನ್​ಡಿಡಿಬಿ, ಪ್ರಾಣಿಗಳ ರೋಗಗಳಿಗೆ ಚಿಕಿತ್ಸೆ ನೀಡುವಾಗ ವಿವೇಚನಾ ರಹಿತವಾಗಿ ಪ್ರತಿಜೀವಕಗಳನ್ನು ಬಳಸಲಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಪಯಾರ್ಯ ಚಿಕಿತ್ಸೆಗೆ ಉತ್ತೇಜನ ನೀಡುವುದು ಅವಶ್ಯ. ದೇಶದ ಹತ್ತಕ್ಕೂ ಹೆಚ್ಚು ರಾಜ್ಯಗಳಲ್ಲಿ ವಿವಿಧ ಹಾಲು ಉತ್ಪಾದಕ ಸಂಸ್ಥೆಗಳು ತೀವ್ರ ಸ್ವರೂಪದಲ್ಲಿ ಇವಿಎಂ ಅನ್ನು ಉತ್ತೇಜಿಸುತ್ತಿವೆ. ಇವಿಎಂಗೆ ಔಷಧೀಯ ಸಸ್ಯಗಳು, ಗಿಡಮೂಲಕೆಗಳು, ಸಾಂಬಾರ ಪದಾರ್ಥಗಳನ್ನು ಬಳಸಲಾಗುತ್ತಿದೆ. ಸಾಮಾನ್ಯ ರೋಗಗಳಿಗೆ ಸಾಂಪ್ರದಾಯಿಕವಾದ ಹಳ್ಳಿ ಮದ್ದು ಮಾಡಲಾಗುತ್ತಿದ್ದು ಅವುಗಳನ್ನೇ ಬಳಸುವಂತೆ ಪಶುಪಾಲಕರಿಗೆ ಉತ್ತೇಜನ ನೀಡುವ ಕೆಲಸ ನಡೆಯುತ್ತಿದೆ ಎಂದು ಹೇಳಿಕೊಂಡಿದೆ.
ಇದನ್ನೂ ಓದಿ:ಜೂನ್​ 11ರಿಂದ ತಿರುಪತಿ ಬಾಲಾಜಿ ದರ್ಶನ: ಆದರೆ ಸುಲಭವಿಲ್ಲ
ದೇಶದಲ್ಲಿರುವ ಬಹುತೇಕ ಪಶುಪಾಲಕರಿಗೆ ವೆಟರಿನರಿ ಡಾಕ್ಟರ್​ ವೆಚ್ಚ ಅಥವಾ ಚಿಕಿತ್ಸೆಯ ವೆಚ್ಚವನ್ನು ಭರಿಸುವುದಕ್ಕೆ ಕಷ್ಟವಾಗುತ್ತಿದೆ. ಆ್ಯಂಟಿ ಮೈಕ್ರೋಬಿಯಲ್ ರೆಸಿಸ್ಟನ್ಸ್​ ಭಾರತ ಮತ್ತು ಜಾಗತಿಕ ಮಟ್ಟದಲ್ಲಿ ಸೈಲೆಂಟ್ ಆಗಿ ಹಬ್ಬತ್ತಿರುವ ಬಗ್ಗೆ ಎನ್​ಡಿಡಿಬಿ ಕಳವಳ ವ್ಯಕ್ತಪಡಿಸಿದೆ. ಈ ಗಂಭೀರ ಸಮಸ್ಯೆಗೆ ಪಶು ಆಯುರ್ವೇದ ಆಧಾರಿತ ಇವಿಎಂ ರೀತಿಯ ಪರ್ಯಾಯ ಚಿಕಿತ್ಸೆಯೇ ಪರಿಹಾರ ಎಂದು ಅದು ಹೇಳಿದೆ.
ಇದನ್ನೂ ಓದಿ:ದಾವೂದ್ ಇಬ್ರಾಹಿಂ ಮತ್ತು ಪತ್ನಿಗೆ ಕೋವಿಡ್​ 19 ಸೋಂಕು?
ಪ್ರಾಣಿ ಆರೋಗ್ಯದ ವಿಶ್ವ ಸಂಘಟನೆಯ ಮಾಹಿತಿ ಪ್ರಕಾರ, ಮನುಷ್ಯರಿಗೆ ತಗುಲುವ ರೋಗಗಳ ಪೈಕಿ ಶೇಕಡ 60 ಪ್ರಾಣಿಜನ್ಯ ಸೋಂಕುಗಳು. ಶೇಕಡ 75 ರೋಗಗಳು ಪ್ರಾಣಿಗಳಿಂದಲೇ ಮನುಷ್ಯರಿಗೆ ಹರಡುತ್ತಿವೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕಾದ ಅವಶ್ಯಕತೆ ಇದೆ ಎಂದು ಎನ್​ಡಿಡಿಬಿ ಪ್ರತಿಪಾದಿಸಿದೆ. (ಏಜೆನ್ಸೀಸ್)
VIDEO| ‘ಬದಲಾಗು ನೀನು ಬದಲಾಯಿಸು ನೀನು’ ದೃಶ್ಯರೂಪಕ ಬಿಡುಗಡೆ ಮಾಡಿದ ಸಿಎಂ ಯಡಿಯೂರಪ್ಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 3 =
Remember me
