ದೆಹಲಿ:2023ರ ಕ್ರಿಕೆಟ್​​ ವಿಶ್ವಕಪ್ ವೇಳಾಪಟ್ಟಿಯನ್ನು ಐಸಿಸಿ ಇಂದು ಪ್ರಕಟಿಸಲಾಗಿದ್ದು, ಆತಿಥೇಯ ಭಾರತ ತಂಡವು ಬದ್ಧ ಎದುರಾಳಿ ಪಾಕಿಸ್ತಾನ ಜತೆಗೆ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸೆಣಸಾಡಲಿದೆ.ಇದನ್ನೂ ಓದಿ:‘ಸೈಕೋ ವುಮನ್ ಶ್ರುತಿ ಹಾಸನ್ ಗೆಳೆಯನೊಂದಿಗೆ ನಿತ್ಯ ಡ್ರಗ್ಸ್ ಸೇವಿಸುತ್ತಾರೆ’ಕ್ರಿಕೆಟ್‌ ಜಗತ್ತಿನ ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಜಿದ್ದಾಜಿದ್ದಿನ ಕದನವು ಅಕ್ಟೋಬರ್ 15ರಂದು ಮಧ್ಯಾಹ್ನ 2 ಗಂಟೆಗೆ ಗುಜರಾತ್​ನ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಪಂದ್ಯ ಅತ್ಯಂತ ರೋಚಕವಾಗಿರಲಿದೆ.ಈ ಹಿಂದೆ ಭಾರತ ಮತ್ತು ಪಾಕಿಸ್ತಾನ ತಂಡವು 1992, 1996, 1999, 2003, 2011, 2015 ಮತ್ತು 2019ರಲ್ಲಿ ಏಳು ಬಾರಿ ಮುಖಾಮುಖಿಯಾಗಿದ್ದು, ಉಭಯ ತಂಡಗಳು ಎಂಟನೇ ಬಾರಿ ಮತ್ತೇ ಮುಖಾಮುಖಿಯಾಗಲಿವೆ. 46 ದಿನಗಳ ಈ ವಿಶ್ವಕಪ್ ಟೂರ್ನಿಯ ಅವಧಿಯಲ್ಲಿ ಒಟ್ಟು 48 ಪಂದ್ಯಗಳನ್ನು ಆಡಲಾಗುತ್ತದೆ.ಇದನ್ನೂ ಓದಿ:VIDEO| ಬಾಯ್​ಫ್ರೆಂಡ್​​ ಇದ್ದಾನೆಂದ ಮಗಳಿಗೆ ಮುಖ ಮೂತಿ ನೋಡದೆ ಗುದ್ದಿದ ತಾಯಿ!ಭಾರತದ ವೇಳಾಪಟ್ಟಿ ಇಲ್ಲಿದೆ:ಭಾರತ vs ಆಸ್ಟ್ರೇಲಿಯಾ- ಅಕ್ಟೋಬರ್ 8- ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ.ಭಾರತ vs ಅಫ್ಘಾನಿಸ್ತಾನ – ಅಕ್ಟೋಬರ್ 11-  ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂ, ದೆಹಲಿ.ಭಾರತ vs ಪಾಕಿಸ್ತಾನ – ಅಕ್ಟೋಬರ್ 15-  ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್.ಭಾರತ vs ಬಾಂಗ್ಲಾದೇಶ – ಅಕ್ಟೋಬರ್ 19-  ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂ, ಪುಣೆ.ಭಾರತ vs ನ್ಯೂಜಿಲೆಂಡ್ – ಅಕ್ಟೋಬರ್ 22-  ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂ, ಧರ್ಮಶಾಲಾ.ಭಾರತ vs ಇಂಗ್ಲೆಂಡ್ – ಅಕ್ಟೋಬರ್ 29-  ಶ್ರೀ ಅಟಲ್ ಬಿಹಾರಿ ವಾಜಪೇಯಿ ಕ್ರಿಕೆಟ್ ಸ್ಟೇಡಿಯಂ, ಲಖನೌ.ಭಾರತ vs ಅರ್ಹತಾ ಸುತ್ತಿನ 2ನೇ ಕ್ವಾಲಿಫೈಯರ್- ನವೆಂಬರ್ 2-  ವಾಂಖೆಡೆ ಸ್ಟೇಡಿಯಂ, ಮುಂಬೈ.ಭಾರತ vs ದಕ್ಷಿಣ ಆಫ್ರಿಕಾ- ನವೆಂಬರ್ 5-  ಈಡನ್ ಗಾರ್ಡನ್ಸ್, ಕೋಲ್ಕತ್ತಾ.ಭಾರತ vs ಅರ್ಹತಾ ಸುತ್ತಿನ 1ನೇ ಕ್ವಾಲಿಫೈಯರ್- ನವೆಂಬರ್ 11- ಎಂ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು.ಈ ಟೂರ್ನಿಯ ಸೆಮಿಫೈನಲ್ ಪಂದ್ಯಗಳನ್ನು ಮುಂಬೈ ಮತ್ತು ಕೋಲ್ಕತಾದಲ್ಲಿ ನವೆಂಬರ್ 15 ಮತ್ತು 16ರಂದು ಆಯೋಜಿಸಲಾಗಿದೆ. ಫೈನಲ್ ಪಂದ್ಯವು ನವೆಂಬರ್ 19 ರಂದು ಅಹಮದಾಬಾದ್‌ನಲ್ಲಿ ನಡೆಯಲಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
