ನವದೆಹಲಿ:ಆನ್​ಲೈನ್ ತರಗತಿಗಳಿಗೆ ಹಾಜರಾಗಲು ಕನಿಷ್ಠ ಶೇಕಡ 27 ವಿದ್ಯಾರ್ಥಿಗಳ ಬಳಿ ಸ್ಮಾರ್ಟ್​ಫೋನ್ ಅಥವಾ ಲ್ಯಾಪ್​ಟಾಪ್​ಗಳಿಲ್ಲ. ಶೇಕಡ 28 ವಿದ್ಯಾರ್ಥಿಗಳು ಮತ್ತು ಪೋಷಕರು ಬೋಧನೆಗೆ ವಿದ್ಯುತ್ ಕಡಿತ ಅಡ್ಡಿಯಾಗುವ ಬಗ್ಗೆ ಆತಂಕ ಹೊಂದಿದ್ದಾರೆ ಎಂದು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್​ಸಿಇಆರ್​ಟಿ) ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.
ಕೇಂದ್ರೀಯ ವಿದ್ಯಾಲಯಗಳು, ನವೋದಯ ವಿದ್ಯಾಲಯಗಳು ಮತ್ತು ಸಿಬಿಎಸ್​ಇ ಅಂಗಸಂಸ್ಥೆ ಶಾಲೆಗಳ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಮತ್ತು ಶಾಲಾ ಪ್ರಾಂಶುಪಾಲರು ಸೇರಿ 34,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಎನ್​ಸಿಇಆರ್​ಟಿ ಈ ಸಮೀಕ್ಷೆಗೆ ಒಳಪಡಿಸಿದೆ.
ಪರಿಣಾಮಕಾರಿ ಶೈಕ್ಷಣಿಕ ಉದ್ದೇಶಗಳಿಗಾಗಿ ಸಾಧನಗಳನ್ನು ಬಳಸುವ ಜ್ಞಾನದ ಕೊರತೆ ಮತ್ತು ಶಿಕ್ಷಕರಿಗೆ ಆನ್​ಲೈನ್ ಬೋಧನೆಯ ಬಗ್ಗೆ ಚೆನ್ನಾಗಿ ತಿಳಿದಿಲ್ಲದಿರುವುದು ವಿದ್ಯಾರ್ಥಿಗಳ ಕಲಿಕೆಗೆ ಅಡಚಣೆಯುಂಟುಮಾಡಿವೆ ಎಂದು ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ.ಶೇಕಡ 33ರಷ್ಟು ಜನರು ಆನ್​ಲೈನ್ ಶಿಕ್ಷಣ ಕಷ್ಟ ಅಥವಾ ಭಾರ ಎಂದು ಭಾವಿಸಿದ್ದಾರೆ. ಕರೊನಾ ಬಿಕ್ಕಟ್ಟು ಪರಿಸ್ಥಿತಿ ಹಿನ್ನೆಲೆಯಲ್ಲಿ ಗರಿಷ್ಠ ಪ್ರಮಾಣದ ಜನರು ಮೊಬೈಲ್​ನ್ನು ಕಲಿಕೆ ಅಥವಾ ಬೋಧನೆಯ ಪ್ರಮಖ ಮಾಧ್ಯಮವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಆದರೂ ಶೇಕಡ 27 ವಿದ್ಯಾರ್ಥಿಗಳು ಕಲಿಕೆಗಾಗಿ ಮೊಬೈಲ್ ಅಥವಾ ಲ್ಯಾಪ್​ಟಾಪ್ ಯಾವುದನ್ನೂ ಹೊಂದಿಲ್ಲ. ಶೇಕಡ 36 ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳು ಮತ್ತು ಅವರ ಬಳಿ ಲಭ್ಯವಿರುವ ಇತರ ಪುಸ್ತಕಗಳನ್ನು ಬಳಸಿಕೊಂಡು ಕಲಿಕೆಯಲ್ಲಿ ನಿರತರಾಗಿದ್ದಾರೆ ಎಂದು ಸಮೀಕ್ಷೆಯ ವರದಿಯಲ್ಲಿ ತಿಳಿಸಲಾಗಿದೆ.
ಬಹುತೇಕ ಶಿಕ್ಷಕರು ಮತ್ತು ಪ್ರಾಂಶುಪಾಲರು ಬೋಧನೆಗಾಗಿ ಲ್ಯಾಪ್​ಟಾಪ್​ಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕರೊನಾ ಅವಧಿಯಲ್ಲಿ ಬೋಧನೆ ಮತ್ತು ಕಲಿಕೆಗೆ ಟಿವಿ ಮತ್ತು ರೇಡಿಯೋಗಳು ಅತ್ಯಂತ ಕಡಿಮೆ ಬಳಕೆಯಾಗಿವೆ. ಶಿಕ್ಷಣದ ಪ್ರಗತಿಯನ್ನು ತಿಳಿಯುವ ಸಲುವಾಗಿ ಬಹುತೇಕ ರಾಜ್ಯಗಳು ಭೌತಿಕ ಕಾರ್ಯವಿಧಾನಗಳನ್ನು ಬಳಸಿದ್ದು, ವಿದ್ಯಾರ್ಥಿಗಳ ಮನೆಗೆ ಶಿಕ್ಷಕರು ಭೇಟಿ ನೀಡುವ ಮೂಲಕ ಅಥವಾ ಫೋನ್​ನಲ್ಲಿ ಸಂವಹನ ನಡೆಸುವ ಮೂಲಕ ಅವರ ಪಾಲಕರಿಗೆ ಮಾರ್ಗದರ್ಶನ ನೀಡಿದ್ದಾರೆ ಎಂದು ತಿಳಿಸಲಾಗಿದೆ.
ಗಣಿತ ಕಲಿಕೆ ಕಷ್ಟ
ಸುಮಾರು ಅರ್ಧದಷ್ಟು ವಿದ್ಯಾರ್ಥಿಗಳು ತಮ್ಮ ಬಳಿ ಪುಸ್ತಕಗಳಿಲ್ಲ ಎಂದು ಸಮಸ್ಯೆ ಹೇಳಿಕೊಂಡಿದ್ದಾರೆ. ಎನ್​ಸಿಇಆರ್​ಟಿ ಮತ್ತು ದೀಕ್ಷಾ ವೆಬ್​ಸೈಟ್​ಗಳಲ್ಲಿ ಇ-ಪಠ್ಯಪುಸ್ತಕಗಳು ಲಭ್ಯವಿದೆಯಾದರೂ, ಅವುಗಳನ್ನು ಬಳಸುವ ಬಗ್ಗೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಅರಿವಿನ ಕೊರತೆಯಿದೆ ಎಂದು ತಿಳಿದುಬಂದಿದೆ. ಆನ್​ಲೈನ್ ಮೂಲಕ ಗಣಿತ ವಿಷಯವನ್ನು ಕಲಿಯುವುದು ಹೆಚ್ಚು ಕಷ್ಟದಾಯಕ ಎಂದು ಬಹುತೇಕರು ಅಭಿಪ್ರಾಯಪಟ್ಟಿದ್ದಾರೆ. ಜತೆಗೆ ವಿಜ್ಞಾನ ವಿಷಯದ ಬಗ್ಗೆಯೂ ಹಲವರು ಸಮಸ್ಯೆಗಳನ್ನು ಹೇಳಿದ್ದು, ಅದರಲ್ಲಿ ಪರಿಕಲ್ಪನೆಗಳು ಮತ್ತು ಪ್ರಯೋಗಗಳು ಇರುವುದರಿಂದ ಅವುಗಳನ್ನು ಶಿಕ್ಷಕರ ಮೇಲ್ವಿಚಾರಣೆಯಲ್ಲಿ ಪ್ರಯೋಗಾಲಯದಲ್ಲಿ ಮಾತ್ರ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 11 =
Remember me
