ನವದೆಹಲಿ :ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಇನ್ನು ಮೂರು ದಿನಗಳಲ್ಲಿ, ಸುಮಾರು 51 ಲಕ್ಷ ಕರೊನಾ ಲಸಿಕೆಯ ಡೋಸ್​ಗಳನ್ನು ಹೊಸದಾಗಿ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಈಗಾಗಲೇ ನೀಡಿರುವ 20 ಕೋಟಿ ಲಸಿಕೆ ಡೋಸ್​ಗಳಲ್ಲಿ, ಇನ್ನೂ 1.84 ಕೋಟಿ ಡೋಸ್​ಗಳನ್ನು ಅವು ಜನರಿಗೆ ನೀಡುವುದು ಬಾಕಿ ಇದೆ ಎಂದೂ ಹೇಳಿದೆ.
ಈವರೆಗೆ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 20 ಕೋಟಿ (20,28,09,250) ಡೋಸ್​ಗಳಷ್ಟು ಕರೊನಾ ಲಸಿಕೆಯನ್ನು ಉಚಿತವಾಗಿ ಒದಗಿಸಿದೆ. ಅದರಲ್ಲಿ, ಮೇ 14 ರಂದು ಲೆಕ್ಕ ಹಾಕಲಾದ ಸರಾಸರಿಯ ಪ್ರಕಾರ 18,43,67,772 ಗಳನ್ನು ಬಳಸಿಕೊಳ್ಳಲಾಗಿದೆ. ಇನ್ನೂ 1,84,41,478 ಡೋಸ್​ಗಳನ್ನು ಫಲಾನುಭವಿಗಳಿಗೆ ನೀಡಬೇಕಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ:ನಕಲಿ ಡಾಕ್ಟರ್​ಗಳಿಂದಾಗಿ ಊರಿನ ತುಂಬಾ ಹರಡಿದ ಕರೊನಾ! ಸಾವಿನ ಮನೆಯ ಕದ ತಟ್ಟುತ್ತಿರುವ ಗ್ರಾಮಸ್ಥರು
ಮುಂದಿನ 3 ದಿನಗಳಲ್ಲಿ ಸುಮಾರು 51 ಲಕ್ಷ (50,95,640) ಹೊಸ ಡೋಸ್​​ಗಳನ್ನು ರಾಜ್ಯಗಳು ಕೇಂದ್ರದ ವತಿಯಿಂದ ಪಡೆಯಲಿವೆ ಎಂದಿರುವ ಸಚಿವಾಲಯ, ಕೇಂದ್ರ ಸರ್ಕಾರವು ಈ ಮುಂದೆಯೂ ರಾಜ್ಯಗಳಿಗೆ ತನ್ನ ಪಾಲಿನಿಂದ ಉಚಿತವಾಗಿ ಲಸಿಕೆ ಒದಗಿಸಲಿದೆ ಎಂದಿದೆ. ಪ್ರತಿ ತಿಂಗಳೂ ಸೆಂಟ್ರಲ್ ಡ್ರಗ್ಸ್​ ಲ್ಯಾಬರೋಟರಿ ಅನುಮೋದಿಸುವ ಉತ್ಪಾದನೆಯ ಶೇ. 50 ರಷ್ಟನ್ನು ಕೇಂದ್ರ ಇದಕ್ಕಾಗಿ ಖರೀದಿಸುತ್ತದೆ ಎನ್ನಲಾಗಿದೆ.(ಏಜೆನ್ಸೀಸ್)
ದೆಹಲಿಯಲ್ಲಿ ಕರೊನಾ ಸೋಂಕು ಇಳಿಕೆ ; ಲಾಕ್​ಡೌನ್ ಒಂದು ವಾರ ವಿಸ್ತರಣೆ

ಅಪ್ಪಅಮ್ಮ, ಅಜ್ಜಅಜ್ಜಿ ಕರೊನಾಗೆ ಬಲಿ; 12 ದಿನಗಳಲ್ಲಿ ಅನಾಥರಾದ ಹೆಣ್ಣುಮಕ್ಕಳು

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:19 − thirteen =
Remember me
