ನವದೆಹಲಿ:ಕರೊನಾ ಸೋಂಕು ಯಾವ ರೀತಿಯಲ್ಲಿ, ಯಾರ ದೇಹವನ್ನು ಪ್ರವೇಶಿಸುತ್ತದೆ ಎಂದು ಹೇಳುವುದು ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ, ಕರೊನಾ ಸೋಂಕಿನಿಂದ ಮೃತ ಪಟ್ಟವರ ಶವಗಳನ್ನು ಹೂಳುವುದನ್ನು ಸದ್ಯದ ಪರಿಸ್ಥಿತಿಯಲ್ಲಿ ನಿಷೇಧಿಸಲಾಗಿದೆ. ಆದ್ದರಿಂದ ಶವಗಳನ್ನು ಸುಡುವಂತೆ ಸೂಚಿಸಲಾಗಿದೆ.ಮೃತ ದೇಹಗಳಿಂದ ಕರೊನಾ ಸೋಂಕು ಹರಡುವುದಿಲ್ಲ ಎಂಬ ಬಗ್ಗೆ ಕೆಲ ವರದಿಗಳು ಬಂದಿದ್ದರೂ ಮುಂಜಾಗರೂಕತಾ ಕ್ರಮದಿಂದಾಗಿ ಶವ ಹೂಳುವ ಬದಲು ಸುಡುವಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾರ್ಗಸೂಚಿ ಹೊರಿಡಿದೆ.ಮುಸ್ಲಿಂ ಧರ್ಮದ ಅನುಸಾರ ಶವಗಳನ್ನು ಹೂಳಲಾಗುತ್ತದೆ. ಆದರೆ ಇದೀಗ ಕಡ್ಡಾಯ ಆದೇಶದ ಹಿನ್ನೆಲೆಯಲ್ಲಿ ತಮ್ಮ ಧರ್ಮಾನುಸಾರ ಕರೊನಾ ಸೋಂಕಿತರನ್ನು ಸುಡುವಂತಿಲ್ಲ. ಇದು ತಮ್ಮ ಧರ್ಮಕ್ಕೆ ವಿರೋಧವಾಗಿದ್ದು, ಅವರನ್ನು ಕೂಡ ಹೂಳಲು ಅವಕಾಶ ನೀಡುವಂತೆ ಮುಸ್ಲಿಂ ಸಂಘಟನೆ ಸುಪ್ರೀಂಕೋರ್ಟ್‌ ಮೊರೆ ಹೋಗಿದೆ.ಜಮಿಯತ್‌ ಉಲಾಮಾ-ಎ- ಹಿಂದ್‌ ಸಂಘಟನೆ ಈ ಅರ್ಜಿ ಸಲ್ಲಿಸಿದೆ. ಮೃತ ದೇಹವನ್ನು ಎಲ್ಲಾ ರೀತಿಯ ಮುಂಜಾಗರೂಕತಾ ಕ್ರಮದೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಿದರೆ ಅದರಿಂದ ಯಾವುದೇ ಅಪಾಯವಿಲ್ಲ.ಸಾಂಕ್ರಾಮಿಕ ರೋಗಿಗಳನ್ನು ಸುಡಬೇಕು, ಹೂಳಬಾರದು ಎಂಬುದರದಲ್ಲಿ ಯಾವುದೇ ಅರ್ಥವಿಲ್ಲ. ಮೃತ ದೇಹದಿಂದ ಸೋಂಕು ಹರಡಿರುವ ಬಗ್ಗೆ ಇದುವರೆಗೆ ಯಾವುದೇ ದಾಖಲೆಗಳು ಇಲ್ಲ. ಆದ್ದರಿಂದ ತಮ್ಮ ಧರ್ಮಾನುಸಾರ ಕರೊನಾ ಸೋಂಕಿತರ ಶವಗಳನ್ನು ಕೂಡ ಹೂಳಲು ಅವಕಾಶ ನೀಡಲು ಆದೇಶಿಸಬೇಕು ಎಂದು ಸಂಘ ನ್ಯಾಯಾಲಯಕ್ಕೆ ಮನವಿ ಮಾಡಿದೆ.ಲಂಡನ್‌, ಇಟಲಿ, ಕೆನಡಾ ಸೇರಿದಂತೆ ಕೆಲ ರಾಷ್ಟ್ರಗಳಲ್ಲಿ ಕರೊನಾ ಪೀಡಿತರ ಶವಗಳನ್ನು ಹೂಳಲಾಗುತ್ತಿದೆ. ಅಲ್ಲಿ ಇದುವರೆಗೆ ಸೋಂಕು ತಗುಲಿರುವ ಬಗ್ಗೆ ಯಾವುದೇ ವರದಿ ಬಂದಿಲ್ಲ. ಆದ್ದರಿಂದ ತಮಗೂ ಅವಕಾಶ ನೀಡಬೇಕು ಎಂದು ಕೋರಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
