ನವದೆಹಲಿ:ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮಹಾಮಾರಿ ಕರೊನಾ ಸೋಂಕನ್ನು ತಡೆಗಟ್ಟಲು ಲಾಕ್​ಡೌನ್​ ಒಂದೇ ಸಾಲುವುದಿಲ್ಲ. ಜನರನ್ನು ತೀವ್ರವಾಗಿ ಪರೀಕ್ಷೆಗೆ ಒಳಪಡಿಸುವುದು ಹಾಗೂ ಸೋಂಕಿತರ ಸಂಪರ್ಕದಲ್ಲಿದ್ದವರ ಜಾಡನ್ನು ವೇಗವಾಗಿ ಪತ್ತೆ ಹಚ್ಚುವುದು ಕೂಡ ಲಾಕ್​ಡೌನ್​ ಅಷ್ಟೇ ಸರಿಸಮಾನವಾಗಿದೆ ಎಂದು ಕೇರಳದ ಹಣಕಾಸು ಸಚಿವ ಥಾಮಸ್​ ಇಸಾಕ್ ಕೇಂದ್ರಕ್ಕೆ ಸಲಹೆ ನೀಡಿದ್ದಾರೆ.
ದೇಶದಲ್ಲಿ ಮೊದಲ ಕರೊನಾ ಪ್ರಕರಣ ಪತ್ತೆಯಾದ ರಾಜ್ಯ ಕೇರಳ. ಜನವರಿಯಲ್ಲೇ ಪ್ರಕರಣ ಬೆಳಕಿಗೆ ಬಂದಿತ್ತು. ಆರಂಭದಲ್ಲಿ ಕೇರಳದಲ್ಲಿ ಪ್ರಕರಣಗಳು ಹೆಚ್ಚಾದರೂ ಇದೀಗ ಭಾರಿ ಇಳಿಕೆ ಕಂಡಿದ್ದು, ಲಾಕ್​ಡೌನ್​ ಮಾತ್ರವಲ್ಲದೇ ಬೇರೆ ಮಾರ್ಗದಲ್ಲೂ ಕೋವಿಡ್​ ವೈರಾಣು ತಗ್ಗಿಸಲು ಕೇರಳ ವೇಳಾಪಟ್ಟಿಯೊಂದನ್ನು ಸಿದ್ಧಪಡಿಸಿಕೊಂಡಿದೆ.
ದೇಶಾದ್ಯಂತ ಏಪ್ರಿಲ್​ 14ರವರೆಗೆ 21 ದಿನಗಳ ಕಾಲ ಲಾಕ್​ಡೌನ್​ ಹೇರಲಾಗಿದ್ದು, ಅದನ್ನು ವಿಸ್ತರಿಸಲು ಅನೇಕ ರಾಜ್ಯಗಳು ಕೇಂದ್ರ ಸರ್ಕಾರದ ಬಳಿ ಕೋರಿವೆ. ಅದರಲ್ಲಿ ಕೇರಳವು ಒಂದಾಗಿದೆ. ಈಗಾಗಲೇ ಕೆಲ ರಾಜ್ಯಗಳಲ್ಲಿ ಏಪ್ರಿಲ್​ 30ರವರೆಗೂ ಲಾಕ್​ಡೌನ್​ ವಿಸ್ತರಣೆ ಮಾಡಿ ಆಗಿದೆ.
ಇಡೀ ಸೋಂಕನ್ನು ತಡೆಗಟ್ಟುವವರೆಗೂ ಲಾಕ್​ಡೌನ್​ ಅನುಸರಿಸಲಾಗುವುದು. ಆದರೆ, ಈಗ ಲಾಕ್​ಡೌನ್​ ಒಂದೇ ಸಾಕಾಗಲ್ಲ. ತೀವ್ರವಾದ ಪರೀಕ್ಷೆ ಮತ್ತು ಸೋಂಕಿತರ ಸಂಪರ್ಕದಲ್ಲಿರುವವರನ್ನು ವೇಗವಾಗಿ ಪತ್ತೆ ಹಚ್ಚುವುದು ಹಾಗೂ ಅವರನ್ನು ಪ್ರತ್ಯೇಕವಾಗಿ ಇಡುವುದು ಕೂಡ ತುಂಬಾ ಮುಖ್ಯವಾಗಿದೆ ಎಂದು ಥಾಮಸ್​ ಇಸಾಕ್​ ಹೇಳಿದ್ದಾರೆ.
ಪರಿಸ್ಥಿತಿಯನ್ನು ಸರ್ಕಾರ ತುಂಬಾ ಹತ್ತಿರದಿಂದ ನಿರ್ವಹಣೆ ಮಾಡುತ್ತಿದೆ. ಕರೊನಾ ವೈರಸ್​ ತಡೆಗಟ್ಟಲು ಸರ್ಕಾರ ನಿರ್ದಿಷ್ಟ ತಂತ್ರಗಳನ್ನು ಅನುಸರಿಸುತ್ತಿದೆ. ಲಾಕ್​ಡೌನ್​ನಿಂದ ಆರ್ಥಿಕ ಚಟುವಟಿಕೆ ಕುಸಿದಿರುವುದರಿಂದ ಮುಂದಿನ ದಿನಗಳಲ್ಲಿ ಲಾಕ್​ಡೌನ್​ನಲ್ಲಿ ಕೆಲ ಬದಲಾವಣೆ ಮಾಡಿಕೊಂಡು, ಕೃಷಿ ಸೇರಿದಂತೆ ಕೆಲವೊಂದು ವಲಯಗಳಿಗೆ ರಿಯಾಯಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ವೇಗವಾಗಿ ಕಡಿಮೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ವೇಗವಾಗಿ ಕಡಿಮೆಯಾಗುವ ಭರವಸೆ ಇದೆ ಎಂದರು.(ಏಜೆನ್ಸೀಸ್​)
ತಮಿಳುನಾಡಿನಲ್ಲಿ ಸಾವಿರದ ಗಡಿ ದಾಟಿತು ಸೋಂಕು: 13 ಆರೋಗ್ಯ ಸಿಬ್ಬಂದಿಗೂ ತಗುಲಿದ ಹೆಮ್ಮಾರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 20 =
Remember me
