ನವದೆಹಲಿ:ವಿಶ್ವವನ್ನೇ ಕಾಡುತ್ತಿರುವ ಕರೊನಾ ವೈರಸ್ ಕನಿಷ್ಠ 18-24 ತಿಂಗಳು ಅಸ್ತಿತ್ವದಲ್ಲಿರಲಿದೆ ಎಂದು ಸಾಂಕ್ರಾಮಿಕ ರೋಗ ಸಂಶೋಧನೆ ಮತ್ತು ನೀತಿ ಕೇಂದ್ರ (ಸಿಐಡಿಆರ್​ಎಪಿ) ತಿಳಿಸಿದೆ.
ಕರೊನಾ ವೈರಸ್ ಬೇರೆ ಸಾಂಕ್ರಾಮಿಕ ಕಾಯಿಲೆಗಳಂತಲ್ಲ. ಲಕ್ಷಣವಿಲ್ಲದಿದ್ದರೂ ಕಾಯಿಲೆ ಹರಡುವ ಸಾಧ್ಯತೆಯಿದೆ. ಪ್ರಪಂಚದ ಶೇ.60ರಿಂದ ಶೇ. 70 ಜನರು ಈ ವೈರಸ್ ದಾಳಿಗೆ ಒಳಗಾಗುತ್ತಾರೆ. ನಮ್ಮಲ್ಲಿ ಇನ್ನೂ ಕರೊನಾ ನಿರೋಧಕ ಲಸಿಕೆ ಸಿದ್ಧವಾಗಿಲ್ಲ. 2009-10ರಲ್ಲಿ ಅಮೆರಿಕದಲ್ಲಿ ಫ್ಲೂ ನಿಯಂತ್ರಣಕ್ಕೆ ಲಸಿಕೆ ಕಂಡುಹಿಡಿಯಲಾಗಿತ್ತು. ಅದರಿಂದ 15 ಲಕ್ಷ ಜನರನ್ನು ಸೋಂಕಿನಿಂದ ರಕ್ಷಿಸಿಕೊಳ್ಳಲಾಯಿತು. ಕರೊನಾ ಫ್ಲೂಗಿಂತ ಬೇಗ ಹರಡುವ ಸಾಮರ್ಥ್ಯ ಹೊಂದಿದೆ. ಕರೊನಾ ಲಸಿಕೆ ಸಿದ್ಧವಿಲ್ಲದ ಕಾರಣ ಈ ರೋಗ 2022ರವರೆಗೆ ಮುಂದುವರಿಯಲಿದೆ ಎಂದು ತಿಳಿಸಲಾಗಿದೆ. ಮಂದಗತಿಯಲ್ಲಿ ಬಹುಕಾಲ, ಸಣ್ಣಪುಟ್ಟ ಏರಿಳಿತದೊಂದಿಗೆ 2021ರಲ್ಲಿ ಈಗಿನಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಸೋಂಕು ಹರಡುವ ಸಾಧ್ಯತೆ ಇದೆ. ವಿಶ್ವವು ಮುಂದಿನ ವರ್ಷದಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಸೋಂಕನ್ನು ಎದುರಿಸಲು ಸಿದ್ಧವಾಗಬೇಕಿದೆ ಎಂದು ವರದಿ ಹೇಳಿದೆ. ಸಿಐಡಿಆರ್​ಎಪಿಯ ನಿರ್ದೇಶಕ ಮೈಕೆಲ್ ಏಸ್ಟರ್​ಹೋಮ್ ವೈದ್ಯಕೀಯ ನಿರ್ದೇಶಕ ಕ್ರಿಸ್ಟನ್ ಮೂರ್, ಆರೋಗ್ಯ ಇತಿಹಾಸಕಾರ ಜಾನ್ ಬ್ಯಾರಿ ಮತ್ತು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮಾರ್ಕ್ ಲಿಪ್​ಸಿಟ್ ಈ ಅಧ್ಯಯನವನ್ನು ನಡೆಸಿ ವರದಿ ತಯಾರಿಸಿದ್ದಾರೆ.
ಮಹಾಮಾರಿ ಕರೊನಾ ವೈರಸ್ ಹರಡುವಿಕೆ ಮೇ 21ರ ವೇಳೆಗೆ ನಿಯಂತ್ರಣಕ್ಕೆ ಬರಲಿದೆ ಎಂದು ಮುಂಬೈನ ಸ್ಕೂಲ್ ಆಫ್ ಎಕಾನಾಮಿಕ್ಸ್ ಮತ್ತು ಪಬ್ಲಿಕ್ ಪ್ರೖೆವಸಿ ತಿಳಿಸಿದೆ. ಈಗಾಗಲೇ ನೂತನ ಕರೊನಾ ಪ್ರಕರಣ ಪತ್ತೆಯಾಗದಂತೆ ಎಚ್ಚರಿಕೆ ವಹಿಸಿ ಯಶಸ್ವಿಯಾಗಿರುವ ದೇಶಗಳಲ್ಲಿನ ಅಂಕಿ ಸಂಖ್ಯೆ ಅಧ್ಯಯನ ನಡೆಸಿ ಸಂಸ್ಥೆ ಈ ವರದಿ ತಯಾರಿಸಿದೆ. ಸೋಂಕು ಮೊದಲು ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತದೆ. ತನ್ನ ಸಾಮರ್ಥ್ಯವನ್ನು ಮುಟ್ಟಿದ ತಕ್ಷಣ ಹರಡುವಿಕೆ ನಿಲ್ಲುತ್ತದೆ. ಬೇರೆ ದೇಶಗಳಲ್ಲಿ ಯಾವ ರೀತಿಯಲ್ಲಿ ಹರಡಿದೆ ಮತ್ತು ಹರಡುವಿಕೆ ಸಾಮರ್ಥ್ಯವನ್ನು ತಲುಪಿದೆ ಎನ್ನುವುದನ್ನು ಗಮನಿಸಿದರೆ ಭಾರತದಲ್ಲಿ ಕರೊನಾ ಹರಡುವಿಕೆ ಸಾಮರ್ಥ್ಯ ಮೇ 21ಕ್ಕೆ ಗರಿಷ್ಠ ಮಟ್ಟಕ್ಕೆ ತಲುಪಲಿದೆ. ಬಳಿಕ ಇಳಿಮುಖವಾಗಲಿದೆ ಎಂದು ವರದಿ ಹೇಳಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + sixteen =
Remember me
