ಕತಾರ್​:ಭಾರತದ ಭರವಸೆಯ ಜಾವೆಲಿನ್​​ ಥ್ರೋ ಆಟಗಾರ ನೀರಜ್​ ಚೋಪ್ರಾ ಮತ್ತೊಮ್ಮೆ ಚಿನ್ನವನ್ನು ಗೆಲ್ಲುವ ಮೂಲಕ ಡೈಮಂಡ್​ ಲೀಗ್​ನಲ್ಲಿ ಸಾಧನೆಗೈದಿದ್ದಾರೆ. ದೋಹಾದಲ್ಲಿ ನಡೆದ​ ಲೀಗ್​ನಲ್ಲಿ ಜಾವೆಲಿನ್​ ಅನ್ನು 88.67 ಮೀಟರ್ ದೂರ ಎಸೆಯುವ ಮೂಲಕ ಚಾಂಪಿಯನ್​ ಆಗಿ ಹೊರಹೊಮ್ಮಿದ್ದಾರೆ.
ತಮ್ಮ ಮೊದಲನೇ ಎಸೆತದಲ್ಲೆ ಅತ್ಯುತ್ತಮವಾಗಿ ಜಾವೆಲಿನ್​ ಅನ್ನು 88.67 ಮೀಟರ್​ ದೂರ ಎಸೆಯುವ ಮೂಲಕ ನೀರಜ್​ ಚಿನ್ನದ ಪದಕವನ್ನು ಖಚಿತಪಡಿಸಿಕೊಂಡಿದ್ದರು. ಇನ್ನು, ನೀರಜ್​ಗೆ ಉತ್ತಮ ಪ್ರತಿಸ್ಪರ್ಧೆ ನೀಡಿದ ಜೇಕಬ್​​ ವಾಡ್ಲೆಜ್​ 88.63 ಮೀಟರ್​ ಜಾವೆಲಿನ್​ ಎಸೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರೆ, 85.88m ದೂರ ಎಸೆದ ಆಂಡರ್​ಸನ್​ ಪೀಟರ್ಸ್​ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು.
ಇದನ್ನೂ ಓದಿ:ಕೇರಳದ ಮೊದಲ ತೃತೀಯ ಲಿಂಗಿ ಬಾಡಿಬಿಲ್ಡರ್ ಇನ್ನಿಲ್ಲ; ಪತ್ನಿ ಮೇಲೆ ಕೊಲೆ ಆರೋಪ…
ಈ ಹಿಂದೆ ಟೋಕಿಯೊದಲ್ಲಿ ನಡೆದ ಒಲಿಂಪಿಕ್​ನಲ್ಲಿ ಕೂಡ ನೀರಜ್​ಗೆ ಟಕ್ಕರ್​ ನೀಡಿದ್ದ ಜೇಕಬ್​​ ವಾಡ್ಲೆಜ್ ಅಲ್ಲಿಯೂ ಬೆಳ್ಳಿಯನ್ನು ಗೆದ್ದಿದ್ದರು. ಇನ್ನೂ, ವಿಶ್ವ ಚಾಂಪಿಯನ್​ಶಿಪ್​ನಲ್ಲಿ ನೀರಜ್​ರನ್ನು ಸೊಲಿಸಿ, ಆಂಡರ್​ಸನ್​ ಪೀಟರ್ಸ್ ಸೊಲಿಸಿ ಬಂಗಾರದ ಪದಕವನ್ನು ಗೆದ್ದಿದ್ದರು ಎಂಬುದು ಗಮನಾರ್ಹ.
ಪಂದ್ಯ ಮುಗಿದ ಬಳಿಕ ಮಾತನಾಡಿದ ನೀರಜ್​, “ಈ ಪಂದ್ಯ ಅತ್ಯಂತ ರೋಚಕವಾಗಿತ್ತು. ಗೆಲುವು ದೊರೆತಿದ್ದು ನನಗೆ ಖುಷಿ ನೀಡಿದೆ. ಈ ಗೆಲುವಿನಿಂದ ನನ್ನ ಆತ್ಮವಿಶ್ವಾಸ ಇನ್ನಷ್ಟು ಹೆಚ್ಚಿದೆ” ಎಂದರು.(ಏಜೆನ್ಸೀಸ್​​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + seventeen =
Remember me
