ನವದೆಹಲಿ:ವಿಶ್ವ ಅಥ್ಲೆಟಿಕ್​​​ ಚಾಂಪಿಯನ್​ಶಿಪ್​​ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ನೀರಜ್​ ಚೋಪ್ರಾ ಐತಿಹಾಸಿಕ ಸಾಧನೆ ಮಾಡಿದ್ದಾರೆ. ವಿಶ್ವ ಅಥ್ಲೆಟಿಕ್​ ಚಾಂಪಿಯನ್​ಶಿಪ್​ನಲ್ಲಿ ಚೆನ್ನದ ಪದಕ ಗೆದ್ದಿರುವ ಮೊದಲ ಭಾರತೀಯನೆಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ನೀರಜ್​ಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ಚಿನ್ನದ ಪದಕ ಗೆಲ್ಲುವ ಮೂಲಕ ಶತಕೋಟಿ ಭಾರತೀಯರ ಹೃದಯವನ್ನು ಗೆದ್ದಿರುವ ನೀರಜ್​ ಚೋಪ್ರಾ ಈಗ ತಾವು ಮಾಡಿದ ಕೆಲಸದಿಂದಾಗಿ ಜನತೆಯೆ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಬುಡಾಪೆಸ್ಟ್​ನಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್​ ಚಾಂಪಿಯನ್​ಶಿಪ್​ ಜಾವೆಲಿನ್​ ಥ್ರೋನಲ್ಲಿ ಚಿನ್ನದ ಪದಕ ಗೆದ್ದ ನಂತರ ಹಂಗೇರಿ ಮೂಲದ ಅಭಿಮಾನಿ ಒಬ್ಬರು ಭಾರತದ ಧ್ವಜದ ಮೇಲೆ ಸಹಿ ಹಾಕುವಂತೆ ನೀರಜ್​ ಅವರಿಗೆ ಕೇಳಿದ್ಧಾರೆ. ಇದಕ್ಕೆ ಪ್ರತಿಕ್ರಿಯಿಸಿದ ನೀರಜ್​ ನಾನು ಸಹಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
This is Neeraj Chopra, Olympic Gold Medalist.After winning the#WorldAthleticsChampsin Budapest yesterday, A hungarian fan came to him with an Indian flag and asked him to sign it for her.Subedar Neeraj Chopra humbly denied and said “ Sorry Mam, it is a violation of my flag…pic.twitter.com/mc7afI6h4e
ಇದನ್ನೂ ಓದಿ:ಬರುವ ಡಿಸೆಂಬರ್​ನಲ್ಲಿ ಲೋಕಸಭೆ ಚುನಾವಣೆ ಘೋಷಣೆ ಸಾಧ್ಯತೆ: ಮಮತಾ ಬ್ಯಾನರ್ಜಿ
ಏಕೆಂದರೆ ನೀವು ಭಾರತದ ಧ್ವಜದ ಮೇಲೆ ನನಗೆ ಸಹಿ ಮಾಡುವಂತೆ ಹೇಳುತ್ತಿದ್ದೀರಾ ಹಾಗೆ ಮಾಡಲು ಸಾಧ್ಯವಿಲ್ಲ. ಏಕೆಂದರೆ ಹಾಗೆ ಮಾಡಿದರೆ ನಾನು ರಾಷ್ಟ್ರಧ್ವಜ್ಕಕೆ ಅಪಮಾನ ಮಾಡಿದಂತೆ ಎಂದು ಮಹಿಳೆಗೆ ಅರ್ಥ ಮಾಡಿಸುತ್ತಾರೆ. ಬಳಿಕ ಆಕೆಯ ಟೀ ಶರ್ಟ್​ ತೋಲಿಗೆ ಸಹಿ ಹಾಕಿ ಮುಂದೆ ಬರುತ್ತಾರೆ.
ನೀರಜ್​ ಅವರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ನಿಮ್ಮ ನಿಲುವು ನಮ್ಮೆಲ್ಲರಿಗೂ ಸ್ಪೂರ್ತಿದಾಯಕ. ಅವರ ನಮ್ರತೆ ಹಾಗೂ ರಾಷ್ಟ್ರಧ್ವಜದ ಮೇಲಿನ ಗೌರವ ​ಶ್ಲಾಘನೀಯ ಎಂದು ಕಮೆಂಟ್​ ಮಾಡಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × one =
Remember me
