ಬೆಂಗಳೂರು: ಕರೊನಾ ಸೋಂಕಿಗೊಳಗಾದ ರೋಗಿಗಳಿಗೆ ಸೇವೆ ಮಾಡುತ್ತಲೇ ಸೋಂಕಿಗೆ ಒಳಗಾಗಿದ್ದ ಲಂಡನ್ನಿನಲ್ಲಿರುವ ಕನ್ನಡಿಗ ವೈದ್ಯ ಡಾ. ನೀರಜ್ ಪಾಟೀಲ್ ಸಂಪೂರ್ಣ ಗುಣಮುಖರಾಗಿದ್ದಾರೆ.
ರಾಷ್ಟ್ರೀಯ ಆರೋಗ್ಯ ಸೇವೆಯ (ಎನ್​ಎಚ್​ಎಸ್) ಅಪಘಾತ ಮತ್ತು ತುರ್ತು ಸೇವೆಯ ಕನ್ಸಲ್ಟೆಂಟ್ ಆಗಿರುವ ನೀರಜ್ ಪಾಟೀಲ್, ಏ.8ರ ಸುಮಾರಿಗೆ ಕರೊನಾ ಸೋಂಕಿಗೆ ಒಳಗಾಗಿದ್ದರು. ಇದೀಗ ಸೋಂಕಿನಿಂದ ಮುಕ್ತವಾಗಿದ್ದು, 14 ದಿನಗಳ ಕ್ವಾರಂಟೈನ್ ಅವಧಿಯನ್ನೂ ಮುಕ್ತಾಯಗೊಳಿಸಿದ್ದಾರೆ. ಸೋಮವಾರದಿಂದ ಮತ್ತೆ ಕರ್ತವ್ಯಕ್ಕೆ ಮರಳಲು ಸಿದ್ಧವಾಗಿರುವ ಅವರು ‘ವಿಜಯವಾಣಿ’ ಕರೊನಾ ಗೆದ್ದು ಬಂದ ಅನುಭವ ಹಂಚಿಕೊಂಡಿದ್ದಾರೆ.
ಸಂಕಷ್ಟದ ಸಮಯ: ದೇವರ ದಯೆ ಮತ್ತು ಪ್ರಾರ್ಥನೆಯಿಂದಾಗಿ ಕರೊನಾದಿಂದ ಸಂಪೂರ್ಣ ಗುಣಮುಖನಾಗಿದ್ದೇನೆ. ಅನೇಕ ಸೋಂಕಿತನ್ನು ಉಪಚರಿಸುತ್ತಿದ್ದ ನನಗೆ ಪ್ರಾರಂಭದಲ್ಲಿ ಸಣ್ಣ ಜ್ವರ ಬಂತು. ಪ್ರತಿ ಎರಡು ದಿನಕ್ಕೊಮ್ಮೆ ಜಿಮ್ ಹೋಗುತ್ತಿದ್ದ ನನಗೆ ಅದೇಕೊ ನಿಶ್ಯಕ್ತಿ ಕಾಣಿಸಲು ಆರಂಭವಾಗಿತ್ತು. ಕೆಲಸ ಮಾಡಲು ಆಸಕ್ತಿ, ಉತ್ಸಾಹ ಇರುತ್ತಿರಲಿಲ್ಲ. ನಂತರ ತೀವ್ರ ಕೆಮ್ಮು ಆರಂಭವಾಯಿತು. ಮುಖ್ಯವಾಗಿ ನಾಲಿಗೆ ರುಚಿಯನ್ನು ಕಳೆದುಕೊಂಡಿತು.
ಸೋಂಕು ತಗುಲಿದೆ ಎಂಬ ವಿಚಾರ ತಿಳಿದ ಕೂಡಲೆ ಒಮ್ಮೆ ಭಯವಾಯಿತು. ಜ್ವರದ ತೀವ್ರತೆಗೆ ಬದುಕುವುದೇ ಇಲ್ಲ ಎನ್ನುವಂತಾಗಿತ್ತು. ಒಮ್ಮೆ ಪ್ಯಾರಾಸಿಟಮಲ್ ತೆಗೆದುಕೊಂಡರೆ ತೀವ್ರ ಬೆವರು ಬಂದು 5-6 ಗಂಟೆ ಸರಿಯಾಗಿರುತ್ತಿತ್ತು. ಮತ್ತೆ ಜ್ವರ ಹೆಚ್ಚುತ್ತಿತ್ತು. ಆಸ್ಪತ್ರೆಯಲ್ಲಿ ಪ್ರಮುಖವಾಗಿ Hydroxychloroquine, azithromycin, amoxicillin ಅನ್ನು ಪ್ರತಿನಿತ್ಯ 4 ಬಾರಿ 1 ಗ್ರಾಂ ಪ್ಯಾರಾಸಿಟಮಲ್ ಔಷಧದಿಂದ ವೈದ್ಯರು ಉಪಚರಿಸಿದ್ದರು. ಜತೆಗೆ ಯಥೇಚ್ಚ ನೀರು ಸೇವಿಸುವುದರ ಮೂಲಕ ಗುಣಮುಖರಾಗಿಸಿದ್ದಾರೆ. ಆಸ್ಪತ್ರೆಯಲ್ಲಿ ಎರಡು ದಿನ ಇದ್ದು, ನಂತರ 5 ದಿನ ಮನೆಯಲ್ಲೇ ಸಂಪೂರ್ಣ ಕ್ವಾರಂಟೈನ್ ಆದೆ. 7 ದಿನಕ್ಕೆ ಗುಣಮುಖನಾಗಿ ನಂತರ 14 ದಿನ ಕ್ವಾರಂಟೈನ್ ಮುಂದುವರಿಸಿದೆ. ಮನೆಯವರು ಆಹಾರ ತಯಾರಿಸಿ ಬಾಗಿಲಲ್ಲಿ ತಂದಿಡುತ್ತಿದ್ದರು. ಟಿವಿ, ಲ್ಯಾಪ್​ಟಾಪ್, ಇಂಟರ್ನೆಟ್, ನೆಟ್​ಫ್ಲಿಕ್ಸ್​ನಲ್ಲಿ ಸಿನಿಮಾ ನೋಡುವುದು, ಹಾಡುಗಳನ್ನು ಕೇಳುವುದು, ಭಗವದ್ಗೀತೆ ಓದುವುದರ ಮೂಲಕ ಮಾನಸಿಕ ಸದೃಢತೆ ಕಾಪಾಡಿಕೊಂಡೆ. ಎಲ್ಲರೂ ಕೈ ಸ್ವಚ್ಛವಾಗಿಟ್ಟುಕೊಳ್ಳಬೇಕು. ಕೈನಿಂದ ಆಗಾಗ್ಗೆ ಮೂಗು, ಕಣ್ಣು ಮುಟ್ಟಿಕೊಳ್ಳುವ ಸಾಮಾನ್ಯ ಅಭ್ಯಾಸ ಬಿಡಬೇಕು. ಎಲ್ಲರಿಗೂ ಮನೆಯಲ್ಲಿ ಪ್ರತ್ಯೇಕ ಕೊಠಡಿ, ಶೌಚಾಲಯ, ಮನರಂಜನೆ ವ್ಯವಸ್ಥೆ ಭಾರತದಲ್ಲಿ ಸಾಕಷ್ಟು ಜನರಿಗೆ ಇರುವುದಿಲ್ಲ. ಅಂಥ ಸ್ಥಿತಿಯಲ್ಲಿ ಕರೊನಾ ನಿಯಂತ್ರಣ ಕಷ್ಟವಾಗುತ್ತದೆ.
ಕರೊನಾ ವೈರಸ್​ಗೆ ದಾವಣಗೆರೆಯ 69 ವರ್ಷದ ವೃದ್ಧ ಸಾವು; ಇವರ ಸಂಪರ್ಕಕ್ಕೆ ಬಂದಿದ್ದ ಐವರಲ್ಲಿ ಸೋಂಕು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 2 =
Remember me
