ಚಂಡೀಗಢ:ಪ್ರೀತಿಗೆ ಜಾತಿಯ ಬೇಲಿಯಿಲ್ಲ, ಆದರೆ ಕುಟುಂಗಳಿಗಿದೆಯಲ್ಲವೇ? ಅದೇ ರೀತಿ ಬೇರೆ ಜಾತಿಯ ಯುವಕನೊಬ್ಬನನ್ನು ಪ್ರೀತಿಸಿ ಮದುವೆಯಾದ ಯುವತಿಯೊಬ್ಬಳು, ಕೇವಲ ಒಂದೂವರೆ ತಿಂಗಳಲ್ಲಿ ವಿಧವೆಯಾಗಿರುವ ಘಟನೆ ಹರಿಯಾಣದ ಪಾಣಿಪತ್​ನಲ್ಲಿ ನಡೆದಿದೆ. ಮೂರೇ ದಿನಗಳಲ್ಲಿ ಮರ್ಯಾದಾ ಹತ್ಯೆಯ ಎರಡನೇ ಪ್ರಕರಣದ ದಾಖಲಾಗಿದೆ.
ಇದನ್ನೂ ಓದಿ:ಕೋವಿಡ್ ಲಸಿಕೆಯಿಂದ ಅಲರ್ಜಿ ಆಗುತ್ತಂತೆ!: ತಜ್ಞರ ಈ ಎಚ್ಚರಿಕೆ ನಿಮ್ಮ ಗಮನದಲ್ಲಿರಲಿ…
ನೀರಜ್​ (23) ಹೆಸರಿನ ಯುವಕ ಬೇರೆ ಜಾತಿಯ ಯುವತಿಯನ್ನು ಪ್ರೀತಿಸುತ್ತಿದ್ದ. ಈ ವಿಚಾರದಲ್ಲಿ ಮೊದಲಿಗೆ ಕುಟುಂಬಗಳಿಗೆ ಒಪ್ಪಿಗೆ ಇರಲಿಲ್ಲ. ಅದಾದ ನಂತರ ಕುಟುಂಬಗಳು ಒಪ್ಪಿದ್ದು, ಅವರಿಬ್ಬರು ಮದುವೆಯಾಗಿದ್ದಾರೆ. ಮದುವೆಗೆ ಒಪ್ಪಿರುವುದಾಗಿ ಎರಡೂ ಕುಟುಂಬಗಳು ಪಂಚಾಯಿತಿಗೆ ಪತ್ರ ಬರೆದುಕೊಟ್ಟಿವೆ. ಆದರೆ ಈ ಮದುವೆ ಯುವತಿಯ ಅಣ್ಣಂದಿರಿಗೆ ಚೂರೂ ಇಷ್ಟವಿರಲಿಲ್ಲವಂತೆ.
ಶುಕ್ರವಾರದಂದು ಸಂಜೆ ಯುವತಿಯ ಅಣ್ಣಂದಿರು ನೀರಜ್​ನ ಮೇಲೆ ಹಲ್ಲೆ ನಡೆಸಿದ್ದು, ಅವನಿಗೆ ಕನಿಷ್ಠ 12 ಬಾರಿ ಚಾಕುವಿನಿಂದ ಚುಚ್ಚಿದ್ದಾರೆ. ನಂತರ ಅಲ್ಲಿಂದ ಪರಾರಿಯಾಗಿದ್ದಾರೆ. ಆ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಮದುವೆಯಾದಾಗಿನಿಂದಲೂ ನೀರಜ್​ಗೆ ಬೆದರಿಕೆ ಕರೆಗಳು ಬರುತ್ತಿದ್ದವಂತೆ. ನಿನ್ನನ್ನು ಸಾಯಿಸುತ್ತೇವೆ ಎಂದು ಬೆದರಿಕೆ ಹಾಕಲಾಗುತ್ತಿತ್ತಂತೆ. ಹಾಗೆಯೇ ಯುವತಿಗೂ ಕರೆ ಮಾಡುತ್ತಿದ್ದ ಅಣ್ಣಂದಿರು ನಿನಗೆ ಕಣ್ಣೀರು ತರಿಸುತ್ತೇವೆ ಎಂದು ಬೆದರಿಸುತ್ತಿದ್ದರಂತೆ. ಈ ವಿಚಾರವಾಗಿ ನವದಂಪತಿ ಪೊಲೀಸ್​ ರಕ್ಷಣೆಯನ್ನೂ ಕೋರಿದ್ದರಂತೆ. ಆದರೆ ಅದನ್ನು ನಿರ್ಲಕ್ಷಿಸಿದ್ದ ಪೊಲೀಸರು ದಂಪತಿಗೆ ರಕ್ಷಣೆ ನೀಡಿಲ್ಲ.
ಇದನ್ನೂ ಓದಿ:ಚುನಾವಣೆಯಲ್ಲಿ ಗೆದ್ದರೂ ಹೆಂಡತಿಯನ್ನೇ ಕಳೆದುಕೊಂಡ ಅಭ್ಯರ್ಥಿ; ಗಂಡನ ಮೇಲಿನ ಸಿಟ್ಟಿಗೆ ಹೀಗಾ ಮಾಡೋದು?!
ನೀರಜ್​ನ ಕೊಲೆ ಮಾಡಿರುವ ಆರೋಪಿಗಳು ಮತ್ತೆ ಕರೆ ಮಾಡ, ಇನ್ನಷ್ಟು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ನೀರಜ್​ನ ಅಣ್ಣ ದೂರಿದ್ದಾರೆ. ಈ ವಿಚಾರವಾಗಿ ಪೊಲೀಸ್​ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)
ಮಗನ ಹೆಂಡತಿಗೆ ಮಾವ ಹೀಗಾ ಮಾಡೋದು?! ತನಿಖೆಯಲ್ಲಿ ಬಯಲಾಯಿತು ಮಾವನ ನಿಜ ಬಣ್ಣ

54ರ ಫಾಸ್ಟರ್ ಜತೆ 24ರ ಯುವತಿ ಮದುವೆ: ಇಲ್ಲಿದೆ ಎಕ್ಸ್​ಕ್ಲೂಸಿವ್​ ಫೋಟೋಸ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × two =
Remember me
