ಬೆಂಗಳೂರು:ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆಯಲ್ಲಿ (ನೀಟ್) ರಾಜ್ಯದ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮೆರೆದಿದ್ದಾರೆ. ಅಖಿಲ ಭಾರತ ಮಟ್ಟದ ಟಾಪ್ 20ರಲ್ಲಿ 6 ಹಾಗೂ 50ರ ಪಟ್ಟಿಯಲ್ಲಿ ಒಟ್ಟು 9 ಅಭ್ಯರ್ಥಿಗಳು ಸ್ಥಾನ ಪಡೆೆದಿದ್ದಾರೆ. ಇದಲ್ಲದೆ, ವಿವಿಧ ವಿಭಾಗಗಳಲ್ಲಿನ ಟಾಪರ್​ಗಳನ್ನು ಸೇರಿಸಿದಲ್ಲಿ ಸಂಖ್ಯೆ 14ಕ್ಕೆ ಏರಿಕೆಯಾಗುತ್ತದೆ. ಈ ಮೂಲಕ ಹಿಂದಿನ ಎಲ್ಲ ದಾಖಲೆಗಳನ್ನು ಮೀರಿದಂತಾಗಿದೆ.
ಅರ್ಹತೆಯಲ್ಲೂ ರೆಕಾರ್ಡ್:ಈ ಬಾರಿ ರಾಜ್ಯದ 1,22,423 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಒಟ್ಟಾರೆ 72,262 ಜನರು ವೈದ್ಯಕೀಯ ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ. ಕಳೆದ ಸಾಲಿಗೆ ಹೋಲಿಸಿದಲ್ಲಿ ಈ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ಕಳೆದ ವರ್ಷ 89,359 ಜನರು ಪರೀಕ್ಷೆಗೆ ಹಾಜರಾಗಿ 55,009 ಜನರು ಅರ್ಹತೆ ಗಿಟ್ಟಿಸಿಕೊಂಡಿದ್ದರು. ಮಹಾರಾಷ್ಟ್ರ ಹಾಗೂ ಉತ್ತರಪ್ರದೇಶವನ್ನು ಹೊರತುಪಡಿಸಿದರೆ ರಾಜ್ಯದ ವಿದ್ಯಾರ್ಥಿಗಳೇ ಹೆಚ್ಚಿನ ಪ್ರಮಾಣದಲ್ಲಿ ಅರ್ಹತೆ ಪಡೆದಿರುವುದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಬಿಡುಗಡೆ ಮಾಡಿರುವ ಅಂಕಿ-ಅಂಶಗಳಿಂದ ಸಾಬೀತಾಗಿದೆ. ಸಾಮಾನ್ಯವಾಗಿ ಉತ್ತರಭಾರತದ ವಿದ್ಯಾರ್ಥಿಗಳು ನೀಟ್​ನಲ್ಲಿ ಉತ್ತಮ ಸಾಧನೆ ತೋರುತ್ತಿದ್ದರು. ಈ ಬಾರಿ ದಕ್ಷಿಣದಲ್ಲಿ ಅದರಲ್ಲೂ ರಾಜ್ಯದ ವಿದ್ಯಾರ್ಥಿಗಳು ಮುಂದಿರುವುದು ವಿಶೇಷವಾಗಿದೆ. ತಮಿಳುನಾಡಿನಲ್ಲಿ 1.20 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರೆ, ಅರ್ಹತೆ ಪಡೆದವರ ಸಂಖ್ಯೆ 67,782. ಕೇರಳದಲ್ಲಿ 64 ಸಾವಿರ ಜನರು ಅರ್ಹತೆಗೆ ಪಾತ್ರರಾಗಿದ್ದಾರೆ. ಉತ್ತರಪ್ರದೇಶದಲ್ಲಿ 1.17 ಲಕ್ಷ ಹಾಗೂ ಮಹಾರಾಷ್ಟ್ರದಲ್ಲಿ 1.13 ಲಕ್ಷ ವಿದ್ಯಾರ್ಥಿಗಳು ಅರ್ಹತೆ ಗಳಿಸಿ ರಾಷ್ಟ್ರಮಟ್ಟದಲ್ಲಿ ಮೊದಲೆರಡು ಸ್ಥಾನದಲ್ಲಿದ್ದಾರೆ.
ರಾಜ್ಯಕ್ಕೆ 650 ಹೆಚ್ಚುವರಿ ವೈದ್ಯಕೀಯ ಸೀಟುಗಳು ಲಭ್ಯ:ರಾಜ್ಯಕ್ಕೆ ಈ ಬಾರಿ 650 ಹೆಚ್ಚುವರಿ ವೈದ್ಯಕೀಯ ಪದವಿ ಹಾಗೂ 216 ಪಿಜಿ ಸೀಟುಗಳು ಲಭ್ಯವಾಗಿವೆ. ಈ ಮೂಲಕ ಒಟ್ಟು ಎಂಬಿಬಿಎಸ್ ಸೀಟುಗಳ ಸಂಖ್ಯೆ 10,795 ಹಾಗೂ ಪಿಜಿ ಸೀಟುಗಳ ಪ್ರಮಾಣ 5360ಕ್ಕೆ ಏರಿಕೆಯಾಗಿದೆ. ಇದಲ್ಲದೆ, ತಮಿಳುನಾಡು ಎಂಜಿಆರ್ ವಿವಿ ವ್ಯಾಪ್ತಿಗೆ ಸೇರಿರುವ ಬೆಂಗಳೂರಿನ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಕೂಡ ರಾಜ್ಯದ ಆರೋಗ್ಯ ವಿವಿ ವ್ಯಾಪ್ತಿಗೆ ಒಳಪಟ್ಟರೆ ಸೀಟುಗಳ ಸಂಖ್ಯೆ ಇನ್ನೂ ಹೆಚ್ಚಾಗಲಿದೆ. ಹಾವೇರಿ, ಯಾದಗಿರಿ ಹಾಗೂ ಚಿಕ್ಕಮಗಳೂರು ಸರ್ಕಾರಿ ವೈದ್ಯ ಕಾಲೇಜುಗಳ ಸೀಟುಗಳ ಸಂಖ್ಯೆಯನ್ನು ತಲಾ 150ಕ್ಕೆ ಏರಿಸಲಾಗಿದೆ. ಬಳ್ಳಾರಿ ವಿಜಯನಗರ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆಯನ್ನು 150ರಿಂದ 200ಕ್ಕೆ ಹೆಚ್ಚಿಸಲಾಗಿದೆ.
ಮದ್ಯಪಾನ ಮಾಡಿಕೊಂಡೇ ಶಾಲೆಗೆ ಬರುತ್ತಿದ್ದ ಶಿಕ್ಷಕಿ; ಬಾಟಲಿ ಸಮೇತ ಸಿಕ್ಕಿಬಿದ್ದು ಅಮಾನತು..

ಹಿಜಾಬ್ ಜತೆ ಸಿಖ್ಖರ ಕಿರ್ಪನ್​ ಮತ್ತು ಟರ್ಬನ್​ ಹೋಲಿಕೆ ಇಲ್ಲ: ಸುಪ್ರೀಂ ಕೋರ್ಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
