ಜೈಪುರ:22 ವರ್ಷದ NEET ಪರೀಕ್ಷಾರ್ಥಿ ಒಬ್ಬರು ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಬೆಂಗಳೂರು ಮೂಲದ ಮೊಹಮ್ಮದ್​ ನಾಸಿರ್​(22) ಎಂದು ಗುರುತಿಸಲಾಗಿದ್ದು ಕೋಟಾ ನಗರದ ವಿಗ್ಯಾನ್​ ನಗರದಲ್ಲಿರುವ ಬಹುಮಹಡಿ ಕಟ್ಟಡದ 10ನೇ ಮಹಡಿಯಿಂದ ಜಿಗಿದು ಸಾವನಪ್ಪಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ವಿಗ್ಯಾನ್​ ನಗರ ಪೊಲೀಸ್​ ಠಾಣಾಧಿಕಾರಿ ದೇವೇಶ್​ ಭರಧ್ವಾಜ್​ ಮೃತ ನಾಸೀರ್ ಭಾನುವಾರ ಜೈಪುರದಲ್ಲಿ ನಡೆದ NEET ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು ಮತ್ತು ಪ್ರವೇಶಾತಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು.
ಇದನ್ನೂ ಓದಿ:ಚಾಲಕನ ನಿಯಂತ್ರಣ ತಪ್ಪಿ ನಿರ್ವಾಹಕನಿಗೆ ಗುದ್ದಿದ ಬಸ್​; ತುಂಡು ತುಂಡಾದ ದೇಹ
ಕಳೆದ ಒಂದು ವರ್ಷದಿಂದ ಕೋಟಾದ ಕೋಚಿಂಗ್​ ಸೆಂಟರ್​ ಒಂದರಲ್ಲಿ ಅವರು NEET ಪರೀಕ್ಷೆಗೆ ತರಭೇತಿ ಪಡೆಯುತ್ತಿದ್ದಾರೆ. ಸ್ನೇಹಿತರೊಂದಿಗೆ ವಿಗ್ಯಾನ್​ನಗರದಲ್ಲಿರುವ ಫ್ಲ್ಯಾಟ್​ನಲ್ಲಿ ವಾಸಿಸುತ್ತಿದ್ದರು.
ಆದರೆ, ಅವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲದ ಖಾರಣ ಆತ್ಮಹತ್ಯೆ ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ನಾಸೀರ್​ ಮೃತ ದೇಹವನ್ನು ಎಂಬಿಎಸ್​ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದ್ದು ಅವರ ಪೋಷಕರು ಬೆಂಗಳೂರಿನಿಂದ ಬಂದ ನಂತರ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಠಾಣಾಧಿಕಾರಿ ದೇವೇಶ್​ ಭಾರಧ್ವಾಜ್ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + eighteen =
Remember me
