ನವದೆಹಲಿ:ನೀಟ್​ ಯುಜಿ ಅಕ್ರಮ ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದ 30ಕ್ಕೂ ಹೆಚ್ಚು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್​​ ಸೋಮವಾರ (ಜುಲೈ 8) ನಡೆಸಿತು. ಜುಲೈ 10ರೊಳಗೆ ಪ್ರಕರಣದ ವಿವಿಧ ಅಂಶಗಳ ಬಗ್ಗೆ ವಿವರಗಳನ್ನು ನೀಡಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ), ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಕೇಂದ್ರಕ್ಕೆ ನಿರ್ದೇಶನ ನೀಡಿದೆ. ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಜುಲೈ 11ಕ್ಕೆ ನಿಗದಿಪಡಿಸಿದೆ.
ಇದನ್ನು ಓದಿ:ಸಂದೇಶಖಾಲಿ ಪ್ರಕರಣ: ಸಿಬಿಐ ತನಿಖೆ ವಿರುದ್ಧ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್​​
ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿಗಳಾದ ಜೆಬಿ ಪಾಸ್ಟೋರ್ವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ತ್ರಿಸದಸ್ಯ ಪೀಠವು, ಪರೀಕ್ಷಾ ಸಂಸ್ಥೆ ಎನ್‌ಟಿಎಗೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು ಯಾವಾಗ, ಪತ್ರಿಕೆಗಳು ಹೇಗೆ ಸೋರಿಕೆಯಾಯಿತು ಮತ್ತು ಪತ್ರಿಕೆ ಸೋರಿಕೆ ಸಂಭವಿಸುವ ಮತ್ತು ನೈಜ ನಡವಳಿಕೆಯ ನಡುವಿನ ಅವಧಿಯನ್ನು ಬಹಿರಂಗಪಡಿಸಬೇಕು ಎಂದು ಆದೇಶಿಸಿದೆ.
ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ ವಹಿಸಿರುವುದರಿಂದ, ತನಿಖಾಧಿಕಾರಿಯು ನ್ಯಾಯಾಲಯಕ್ಕೆ ಸ್ಥಿತಿ ವರದಿಯನ್ನು ಸಲ್ಲಿಸಬೇಕು ಎಂದು ಪೀಠ ಹೇಳಿದೆ. ಅಲ್ಲದೆ ಕೇಂದ್ರಸರ್ಕಾರ ಮತ್ತು ಎನ್​ಟಿಎಗೆ ಶಂಕಿತ ಪ್ರಕರಣಗಳನ್ನು ಗುರುತಿಸಲು ಸೈಬರ್ ಫೋರೆನ್ಸಿಕ್​​​ ಘಟಕ ಅಥವಾ ಸರ್ಕಾರವು ನೇಮಿಸಿಕೊಳ್ಳುವ ಯಾವುದೇ ತಜ್ಞ ಏಜೆನ್ಸಿಯಲ್ಲಿ ಡೇಟಾ ವಿಶ್ಲೇಷಣೆಯನ್ನು ಬಳಸುವುದು ಕಾರ್ಯಸಾಧ್ಯವೇ ಎಂದು ಕೇಳಿತು.
ಸುಪ್ರೀಂಕೋರ್ಟ್ ಆದೇಶವನ್ನು ನಿರ್ದೇಶಿಸುವಾಗ ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ತಡೆಯಲು ಹಾಗೂ ನೀಟ್ ಪರೀಕ್ಷೆಯ ಪಾವಿತ್ರ್ಯತೆಯನ್ನು ಕಾಪಾಡಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಹೇಳಿದೆ.
ದೊಡ್ಡ ಪ್ರಮಾಣದ ಅಕ್ರಮಗಳಿಗೆ ಸಂಬಂಧಿಸಿದಂತೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ಇತ್ತೀಚೆಗೆ ಎನ್​ಟಿಎ ನ್ಯಾಯಾಲಯದಲ್ಲಿ ಹೇಳಿತ್ತು. ಅಲ್ಲದೆ, ಕಳೆದ ಶುಕ್ರವಾರ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಕೇಂದ್ರ ಸರ್ಕಾರವು ನೀಟ್​​ ಯುಜಿ ಪರೀಕ್ಷೆಯನ್ನು ರದ್ದುಗೊಳಿಸುವುದನ್ನು ವಿರೋಧಿಸಿತ್ತು. ಪರೀಕ್ಷೆಯನ್ನು ರದ್ದುಗೊಳಿಸುವುದರಿಂದ ಲಕ್ಷಾಂತರ ಪ್ರಾಮಾಣಿಕ ಮಕ್ಕಳಿಗೆ ತೊಂದರೆಯಾಗಬಹುದು ಎಂದು ಸರ್ಕಾರ ಅಫಿಡವಿಟ್​ನಲ್ಲಿ ಹೇಳಿತ್ತು. ವಿಚಾರಣೆ ನಡೆಸಿದ ಅರ್ಜಿಗಳಲ್ಲಿ ಮೇ 5ರಂದು ನಡೆದ ಪರೀಕ್ಷೆಯಲ್ಲಿನ ಅಕ್ರಮಗಳು ಮತ್ತು ಅವ್ಯವಹಾರಗಳ ಆರೋಪಗಳು ಸೇರಿವೆ, ಕೆಲವರು ಪರೀಕ್ಷೆಯನ್ನು ಮರು ನಡೆಸಲು ನಿರ್ದೇಶನವನ್ನು ಕೋರಿದ್ದಾರೆ.(ಏಜೆನ್ಸೀಸ್​​)
ಬೋಯಿಂಗ್​​​​ ಕ್ರಿಮಿನಲ್ ವಂಚನೆ; 243.6 ಮಿಲಿಯನ್ ಡಾಲರ್​ ದಂಡ ವಿಧಿಸಿದ ನ್ಯಾಯಾಲಯ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:15 + 15 =
Remember me
