ನವದೆಹಲಿ :ಉಲ್ಬಣಿಸುತ್ತಿರುವ ಕರೊನಾ ಸೋಂಕಿನ ಹಿನ್ನೆಲೆಯಲ್ಲಿ, ಬರುವ ಭಾನುವಾರದಂದು ನಡೆಯಬೇಕಿದ್ದ 2021ರ ನೀಟ್-ಪಿಜಿ(NEET-PG) ವೈದ್ಯಕೀಯ ಪ್ರವೇಶ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವರಾದ ಡಾ. ಹರ್ಷವರ್ಧನ್ ಟ್ವೀಟ್ ಮಾಡಿದ್ದು, ಮುಂದಿನ ದಿನಾಂಕವನ್ನು ನಂತರ ನಿರ್ಧರಿಸಲಾಗುವುದು ಎಂದಿದ್ದಾರೆ.
ವೈದ್ಯಕೀಯ ಪಿಜಿ ಕೋರ್ಸ್​ಗಳಿಗೆ ಪ್ರವೇಶದ ನಿರೀಕ್ಷೆಯಲ್ಲಿರುವ 1.7 ಲಕ್ಷ ಅಭ್ಯರ್ಥಿಗಳು ತೆಗೆದುಕೊಂಡಿರುವ ಈ ಪರೀಕ್ಷೆಯು ಏಪ್ರಿಲ್ 18 ರ ಭಾನುವಾರ ನಿಗದಿಯಾಗಿತ್ತು. ಪರೀಕ್ಷೆಯನ್ನು ಮುಂದೂಡಿರುವ ಬಗ್ಗೆ ತಿಳಿಸಿರುವ ಸಚಿವರು, “ನಮ್ಮ ಯುವ ವೈದ್ಯಕೀಯ ವಿದ್ಯಾರ್ಥಿಗಳ ಒಳಿತನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ” ಎಂದಿದ್ದಾರೆ.
ಇದನ್ನೂ ಓದಿ:ಮರ್ಕಜ್​ ಮಸೀದಿಯಲ್ಲಿ 50 ಜನಕ್ಕೆ ನಮಾಜ್ ಮಾಡಲು ಅವಕಾಶ : ಹೈಕೋರ್ಟ್
ಈ ಮುನ್ನ ವಿದ್ಯಾರ್ಥಿ-ವೈದ್ಯರ ಗುಂಪೊಂದು ಪ್ರವೇಶ ಪರೀಕ್ಷೆಗಳ ಮುಂದೂಡಿಕೆಯನ್ನು ಕೋರಿ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿರುವ ವರದಿ ಹೊರಬಿದ್ದಿತ್ತು. ಸದರಿ ಅರ್ಜಿಯು ನಾಳೆ ಮುಖ್ಯ ನ್ಯಾಯಮೂರ್ತಿ ಎಸ್​.ಎ.ಬೊಬ್ಡೆ ಅವರ ಮುಂದೆ ವಿಚಾರಣೆಗೆ ಪಟ್ಟಿಯಾಗಿತ್ತು ಎನ್ನಲಾಗಿದೆ.(ಏಜೆನ್ಸೀಸ್)
ಹಾಸನ ಶಾಸಕ ಪ್ರೀತಂ ಗೌಡಗೆ ಕರೊನಾ
ಹಿಮಾಚಲ ಪ್ರದೇಶದಲ್ಲಿ ಟ್ರೆಕ್ ಮಾಡುತ್ತಿದ್ದವರಿಗೆ ಸಿಕ್ಕಿತು, ಪಾಕಿಸ್ತಾನಿ ಮೊಬೈಲ್ ಸಿಗ್ನಲ್ !
ಕರೊನಾ ವಿರುದ್ಧ ದೃಢ ಸಂಕಲ್ಪ : ಚುನಾವಣೆ ಎದುರಿದ್ದರೂ ಈ ಹಳ್ಳಿ ಪೂರ್ಣ ಬಂದ್ !


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + twenty =
Remember me
