ನವದೆಹಲಿ:ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪದವಿ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಿದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದ ಧ್ರುವ್ ಅದ್ವಾನಿ 5ನೇ ರ‌್ಯಾಂಕ್ ಪಡೆದಿದ್ದಾರೆ. ಅಂಗವಿಕಲ ಮಹಿಳಾ ಕೋಟಾದಲ್ಲಿ ಲಾವಣ್ಯ ಗುಪ್ತಾ 686 (ಶೇ.99.94) ಅಂಕ ಗಳಿಸಿ ದೇಶಕ್ಕೆ ಮೊದಲ ಟಾಪರ್ ಎನಿಸಿದ್ದಾರೆ
ರಾಷ್ಟ್ರೀಯ ರ‌್ಯಾಂಕ್ ಪಟ್ಟಿಯಲ್ಲಿ ತಮಿಳುನಾಡಿನ ಪ್ರಭಾಂಜನ್ ಜೆ. ಪ್ರಥಮ, ಕೌಸ್ತವ್ ಬೌರಿ 3ನೇ ರ‌್ಯಾಂಕ್ ಪಡೆದಿದ್ದರೆ, ಆಂಧ್ರ ಪ್ರದೇಶದ ಬೊರಾ ವರುಣ್ ಚಕ್ರವರ್ತಿ 2ನೇ ರ‌್ಯಾಂಕ್ ಪಡೆದಿದ್ದಾರೆ. ಕರ್ನಾಟಕದ ಬೈರೇಶ್ ಎಸ್.ಎಚ್. 48ನೇ ರ‌್ಯಾಂಕ್ ಪಡೆದಿದ್ದು, ಟಾಪ್ 50 ರ‌್ಯಾಂಕ್‌ಗಳಲ್ಲಿ ರಾಜ್ಯದ ಕೇವಲ ಇಬ್ಬರು ವಿದ್ಯಾರ್ಥಿಗಳು ಮಾತ್ರ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ:ಹೆಂಡತಿ ಮೇಲಿನ ಸಿಟ್ಟಿಗೆ 2 ವರ್ಷದ ಮಗುವನ್ನೇ ಕೊಂದ ಗಂಡ!
ಮಂಗಳವಾರ ರಾತ್ರಿ ರಾಷ್ಟ್ರೀಯ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ನೀಟ್-2023ರ ಫಲಿತಾಂಶವನ್ನು ಪ್ರಕಟಿಸಿದೆ. ದೇಶಾದ್ಯಂತ ಈ ಬಾರಿ 20,87,462 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 20,38,596 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 4,90,374 ವಿದ್ಯಾರ್ಥಿಗಳು ಹಾಗೂ 6,55,599 ವಿದ್ಯಾರ್ಥಿನಿಯರು ಸೇರಿ 11,45,976 ಮಂದಿ ಅರ್ಹತೆ ಹೊಂದಿದ್ದಾರೆ.
ಇದನ್ನೂ ಓದಿ:ಇದನ್ನು ಕುಡಿದರೆ ಹೃದಯಾಘಾತದ ಸಾಧ್ಯತೆ ತೀರಾ ಕಡಿಮೆ ಅಂತೆ!; ಏನಿದು, ಎಷ್ಟು ಕುಡಿಯಬೇಕು?
ಮೇ 7ರಂದು ದೇಶದ 499 ನಗರ ಹಾಗೂ ವಿದೇಶದ 14 ನಗರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಕನ್ನಡ, ಇಂಗ್ಲಿಷ್ ಸೇರಿ ದೇಶದ ವಿವಿಧ 13 ಭಾಷೆಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಕನ್ನಡ ಭಾಷೆಯಲ್ಲಿ 704 ಸೇರಿ ಕರ್ನಾಟಕದ 1,34,381 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 1,31,318 ಮಂದಿ ಪರೀಕ್ಷೆಗೆ ಹಾಜರಾಗಿದ್ದು, 75,248 ವಿದ್ಯಾರ್ಥಿಗಳು ಅರ್ಹತೆ ಹೊಂದಿದ್ದಾರೆ.
ಇದನ್ನೂ ಓದಿ:ಅತ್ತೆಯನ್ನೇ ಕೊಂದಳಾ ಸೊಸೆ?; ಬೇರೆ ಮನೆ ಮಾಡುವಂತೆ ಗಂಡನಿಗೆ ಕಿರುಕುಳ ಕೊಡುತ್ತಿದ್ದ ಆರೋಪ
ಧ್ರುವ್ ಅದ್ವಾನಿಯು 715 ಅಂಕಗಳನ್ನು (ಶೇ.99.99) ಪಡೆದು 5ನೇ ರ‌್ಯಾಂಕ್ ಪಡೆದಿದ್ದರೆ, 48ನೇ ರ‌್ಯಾಂಕ್ ಪಡೆದಿರುವ ಎಸ್.ಎಚ್.ಬೈರೇಶ್ 710(ಶೇ.99.99) ಅಂಕ ಗಳಿಸಿದ್ದಾರೆ. ಇನ್ನು ಟಾಪ್ 20ರಲ್ಲಿ ರಾಜ್ಯದ ಯಾವುದೇ ವಿದ್ಯಾರ್ಥಿಯರು ರ‌್ಯಾಂಕ್ ಪಡೆಯುವಲ್ಲಿ ವಿಫಲರಾಗಿದ್ದಾರೆ. ಆದರೆ, ಟಾಪ್ 10 ಅಂಗವಿಕಲ ಮಹಿಳಾ ಕೋಟಾದಲ್ಲಿ ಲಾವಣ್ಯ ಗುಪ್ತಾ 686 (ಶೇ.99.94) ಅಂಕ ಗಳಿಸಿ ದೇಶಕ್ಕೆ ಮೊದಲ ಟಾಪರ್ ಎನಿಸಿದ್ದಾರೆ.ಪರಿಶಿಷ್ಟ ಪಂಗಡ ಕೆಟಗರಿಯಲ್ಲಿ ಸಚಿನ್ ಪಿ.ಆರ್. 7ನೇ ರ‌್ಯಾಂಕ್ ಮತ್ತು ಚಾಯಾಂಕ್ ಮೂರ್ತೆಣ್ಣವರ್ 9ನೇ ರ‌್ಯಾಂಕ್ ಪಡೆದಿದ್ದಾರೆ.
ಆಧಾರ್ ಆನ್​ಲೈನ್​​ ಉಚಿತ ಅಪ್​ಡೇಟ್​​ಗೆ ನಾಳೆಯೇ ಕಡೇ ದಿನ: ಇಲ್ಲಿದೆ ಮಾಹಿತಿ..

ಮೂರನೇ ಮಗುವಾದರೆ 5 ಲಕ್ಷ ರೂ. ಕೊಡ್ತಾರಂತೆ!; ಶಿಕ್ಷಣ-ಚಿಕಿತ್ಸೆಯೂ ಉಚಿತ, ಮದ್ವೆ ಖರ್ಚಿಗೂ ಧನಸಹಾಯ: ಇಲ್ಲಿದೆ ವಿವರ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + two =
Remember me
