ನವದೆಹಲಿ:ವೈದ್ಯಕೀಯ ಕೋರ್ಸ್​ ಪ್ರವೇಶಾತಿಗೆ ಸರ್ಕಾರದ ವತಿಯಿಂದ ನಡೆಸಲಾಗುವ ನೀಟ್​ ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮಾಸ್ಟರ್​ಮೈಂಡ್​ ಮತ್ತು ಸಾಲ್ವರ್ ಆಗಿ ಕೆಲಸ ಮಾಡಿದ ಇಬ್ಬರು MBBS ವಿದ್ಯಾರ್ಥಿಗಳನ್ನು ಜಮ್​ಶೆಡ್​ಪುರದಲ್ಲಿ ಬಂಧಿಸಿದೆ.
ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬಂಧಿತರಾಗಿರುವ ಇಬ್ಬರು ಸಾಲ್ವರ್​ಗಳನ್ನು ರಾಜಸ್ತಾನದ ಭರತ್‌ಪುರ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಾದ ಕುಮಾರ್ ಮಂಗಳಂ ಬಿಷ್ಣೋಯ್ ಮತ್ತು ದೀಪೇಂದರ್ ಕುಮಾರ್ ಎಂದು ಗುರುತಿಸಲಾಗಿದೆ. ಮಾಸ್ಟರ್​​ಮೈಂಡ್​ನನ್ನು ಬಿಟೆಕ್​ ಪದವಿಧರ ಪಂಕಜ್​ ಕುಮಾರ್​ ಎಂದು ತಿಳಿದು ಬಂದಿದೆ ಇದರೊಂದಿಗೆ ಬಂಧಿತರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ:ಬಹಳಷ್ಟು ಜವಾಬ್ದಾರಿ ಉತ್ಸಾಹ…; ಟಿ20 ನಾಯಕನಾದ ಬಳಿಕ ಸೂರ್ಯಕುಮಾರ್​ ಮೊದಲ ರಿಯಾಕ್ಷನ್
ಮೇ 05ರಂದು ನಡೆದ ನೀಟ್​ ಪರೀಕ್ಷೆ ವೇಳೆ ದ್ವಿತೀಯ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಕುಮಾರ ಮಂಗಲಂ ಬಿಷ್ಣೋಯ್ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿ ದೀಪೇಂದರ್ ಶರ್ಮಾ ಪರೀಕ್ಷೆ ನಡೆಯುತ್ತಿದ್ದ ಹಜಾರಿಬಾಗ್‌ನಲ್ಲಿ ಉಪಸ್ಥಿತರಿದ್ದರು. ಇದನ್ನು ಸ್ಥಳೀಯ ಸಿಸಿಟಿವಿ ಕ್ಯಾಮರಾಗಳು ದೃಢಪಡಿಸಿದ್ದು, ಮಾಸ್ಟರ್​ಮೈಂಡ್​ ಪಂಕಜ್​ ಕುಮಾರ್​ ಕದ್ದ ಪೇಪರ್​ಗಳನ್ನು ಕುಮಾರ ಮಂಗಲಂ ಹಾಗೂ ದೀಪೇಂದರ್​ ಸಾಲ್ವ್​ ಮಾಡಿದ್ದರು ಎಂದು ವರದಿಯಾಗಿದೆ.
ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ಸುಪ್ರೀಂಕೋರ್ಟ್ ಆದೇಶದ ನಂತರ NEET-UG ಗಾಗಿ ಕೇಂದ್ರ ಮತ್ತು ನಗರವಾರು ಫಲಿತಾಂಶಗಳನ್ನು ಪ್ರಕಟಿಸಿದ ಗಂಟೆಗಳ ನಂತರ ಇವರ ಬಂಧನದ ಸುದ್ದಿಯಾಗಿದೆ. ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಹಲವು ಅಕ್ರಮಗಳ ಕುರಿತು ಸುಪ್ರೀಂಕೋರ್ಟ್‌ನಲ್ಲಿ ಹಲವು ಅರ್ಜಿಗಳ ವಿಚಾರಣೆ ನಡೆಯುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − ten =
Remember me
