ನವದೆಹಲಿ:ನೀಟ್​​-ಯುಜಿ 2024ರ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಸಂಬಂಧಿಸಿದಂತೆ ಸುಪ್ರೀಂಕೊರ್ಟ್ ನೀಡಿದ​​​ ತೀರ್ಪಿನ ಬಗ್ಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಶುಕ್ರವಾರ(ಆಗಸ್ಟ್​​ 2) ಪ್ರತಿಕ್ರಿಯಿಸಿದ್ದಾರೆ. ವಿವಾದಿತ ಪರೀಕ್ಷೆಯ ಪಾವಿತ್ರ್ಯತೆಗೆ ಯಾವುದೇ ಧಕ್ಕೆಯಾಗದ ಕಾರಣ ಪರೀಕ್ಷೆಯನ್ನು ರದ್ದುಗೊಳಿಸಿಲ್ಲ. ಮರುಪರೀಕ್ಷೆ ಬೇಡ ಎಂದಿರುವ ನ್ಯಾಯಾಲಯದ ತೀರ್ಪು ಕೇಂದ್ರ ಸರ್ಕಾರದ ನಿಲುವು ಸರಿಯಾಗಿದೆ ಎಂದು ಸಾಬೀತಾಗಿದೆ ಎಂದು ಅವರು ಹೇಳಿದರು.
ಇದನ್ನು ಓದಿ:ಆ.8ರವರೆಗೆ ಇಸ್ರೇಲ್​​​​ನ​​​ ಈ ಸ್ಥಳಕ್ಕೆ ವಿಮಾನ ಹಾರಾಟ ರದ್ದು; ಏರ್​ಇಂಡಿಯಾ ಕೊಟ್ಟ ಕಾರಣ ಇದು
ಸರ್ಕಾರವು ಪಾರದರ್ಶಕ ಮತ್ತು ದೋಷ-ಮುಕ್ತ ಪರೀಕ್ಷಾ ವ್ಯವಸ್ಥೆಗೆ ಬದ್ಧವಾಗಿದೆ. ಇದನ್ನು ಖಚಿತಪಡಿಸಿಕೊಳ್ಳಲು ಉನ್ನತ ಮಟ್ಟದ ತಜ್ಞರ ಸಮಿತಿಯ ಶಿಫಾರಸುಗಳನ್ನು ಸಲ್ಲಿಸಿದ ನಂತರ ಅವುಗಳನ್ನು ಜಾರಿಗೆ ತರುತ್ತೇವೆ ಎಂದು ತಿಳಿಸಿದರು.
ನ್ಯಾಯಾಲಯದ ತೀರ್ಪು ಸುಳ್ಳು ಪ್ರಚಾರವನ್ನು ಸಾರಾಸಗಟಾಗಿ ತಿರಸ್ಕರಿಸಿದೆ. ನ್ಯಾಯ ಒದಗಿಸಿದ ಮತ್ತು ಲಕ್ಷಾಂತರ ವಿದ್ಯಾರ್ಥಿಗಳ ಹಿತಾಸಕ್ತಿಗಳನ್ನು ಕಾಪಾಡಿದ್ದಕ್ಕಾಗಿ ಸುಪ್ರೀಂಕೋರ್ಟ್​​ಗೆ ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್​​​ ಸಾಮಾಜಿಕ ಜಾಲತಾಣ ಎಕ್ಸ್​​ನಲ್ಲಿ ಪೋಸ್ಟ್​ ಮಾಡಿದ್ದಾರೆ.
सत्य के सूर्य को झूठ का बादल कुछ समय के लिए छिपा सकता है, पर सत्य की सदा ही जीत होती है।Hon’ble Supreme Court’s observation on no systemic breach of sanctity in NEET-UG exam and therefore no re-exam vindicates the stand of the govt. The govt. stands committed to "Tamper-free,…
ವಿವಾದಿತ ಪರೀಕ್ಷೆಯ ರದ್ದತಿ ಮತ್ತು ಮರುಪರೀಕ್ಷೆಯನ್ನು ಕೋರಿ ಸಲ್ಲಿಸಲಾದ ಮನವಿಗಳನ್ನು ಸುಪ್ರೀಂಕೋರ್ಟ್ ಜುಲೈ 23 ರಂದು ವಜಾಗೊಳಿಸಿತು. ದಾಖಲೆಯಲ್ಲಿರುವ ದತ್ತಾಂಶವು ಪ್ರಶ್ನೆಪತ್ರಿಕೆಯ ವ್ಯವಸ್ಥಿತ ಸೋರಿಕೆಗೆ ಸಾಕ್ಷಿಯಲ್ಲ ಎಂದು ತಿಳಿಸಿತ್ತು. (ಏಜೆನ್ಸೀಸ್​​)
ಹಿಮಾಚಲದಲ್ಲಿ ಮೇಘಸ್ಫೋಟ: 50 ಮಂದಿ ನಾಪತ್ತೆ.. ರೆಡ್​ ಅಲರ್ಟ್​​ ಘೋಷಣೆ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:six + 11 =
Remember me
