ಮುಂಬೈ:ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ರಿಲಯನ್ಸ್ ಸಂಸ್ಥಾಪಕ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಅವರ ಅದ್ಧೂರಿ ವಿವಾಹ ಸಮಾರಂಭಕ್ಕೆ ಇದೀಗ ದಿನಗಣನೆ ಆರಂಭಗೊಂಡಿದ್ದು, ಚಿತ್ರರಂಗದ ಕಲಾವಿದರು, ರಾಜಕೀಯ ಗಣ್ಯರು ಸೇರಿದಂತೆ ಹೆಸರಾಂತ ವ್ಯಕ್ತಿಗಳಿಗೆ ಅನಂತ್​ ಅವರೇ ಮದುವೆಯ ಆಮಂತ್ರಣ ಪತ್ರಿಕೆ ಕೊಟ್ಟು ಖುದ್ದಾಗಿ ಆಹ್ವಾನಿಸುತ್ತಿದ್ದಾರೆ.
ಇದನ್ನೂ ಓದಿ:ತಮ್ಮಿಬ್ಬರ ಮಕ್ಕಳೊಂದಿಗೆ ಲಂಡನ್​ನಲ್ಲೇ ಉಳಿಯಲಿದ್ದಾರೆ ವಿರಾಟ್ ದಂಪತಿ? ಈ 4 ಕಾರಣಗಳೇ ಸಾಕ್ಷಿ ಅಂತಾರೆ ನೆಟ್ಟಿಗರು
ಅನಂತ್-ರಾಧಿಕಾ ಮದುವೆ ಸಮಾರಂಭಕ್ಕೂ ಮುನ್ನ ಆಯೋಜಿಸಲಾಗಿದ್ದ ಸಂಗೀತ ಕಾರ್ಯಕ್ರಮಕ್ಕೆ ಖ್ಯಾತ ಗಾಯಕ ಜಸ್ಟಿನ್ ಬೀಬರ್​ ಆಗಮಿಸಿ, ನೆರೆದಿದ್ದ ಗಣ್ಯರನ್ನು ತಮ್ಮ ಗಾಯನದ ಮೂಲಕ ರಂಜಿಸಿದರು. ಇನ್ನು ಪುತ್ರನ ವಿವಾಹಕ್ಕೆ ಬೇಕಾದ ಅಗತ್ಯ ಸಿದ್ಧತೆಗಳನ್ನು ತಾವೇ ಮಾಡುತ್ತಿರುವ ನೀತಾ ಅಂಬಾನಿ, ತಮ್ಮಿಷ್ಟದ ವಿನ್ಯಾಸದಂತೆ ಮದುವೆಗೆ ಬೇಕಾದ ಹೆಚ್ಚುವರಿ ಬನಾರಸಿ ಸೀರೆಗಳನ್ನು ಆರ್ಡರ್​ ಮಾಡಿದ್ದಾರೆ.
ಆರ್ಡರ್ ಮಾಡಿದ್ದ ಬನಾರಸಿ ಸೀರೆಗಳು ಈಗ ಪೂರ್ಣಗೊಂಡಿದ್ದು, ವಸ್ತ್ರಗಳ ವಿವರಗಳನ್ನು ಸದ್ಯಕ್ಕೆ ಗೌಪ್ಯವಾಗಿ ಇರಿಸಲಾಗಿದೆ. ಹಲವಾರು ಸೀರೆಗಳನ್ನು ಸ್ವತಃ ನೀತಾ ಅಂಬಾನಿ ಅವರೇ ಆರ್ಡರ್​ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಬನಾರಸ್‌ನ ವಿಶಿಷ್ಟ ಸೀರೆಗಳು ಈ ಹಿಂದಿನಿಂದಲೂ ಮದುವೆ ಸಮಾರಂಭಕ್ಕೆ ಬಹಳ ಹೆಸರುವಾಸಿಯಾಗಿದೆ. ಇದೊಂದು ಸಾಂಪ್ರದಾಯಿಕ ಉಡುಗೆ ಎಂದೇ ಜನಪ್ರಿಯತೆ ಪಡೆದುಕೊಂಡಿದೆ.
ಇದನ್ನೂ ಓದಿ:ವೃತ್ತಿ ಜೀವನದಲ್ಲಿ ಯಶಸ್ಸಿನಲ್ಲಿರುವಾಗಲೇ… ದುರಂತ ಘಟನೆ ನೆನೆದು ಭಾವುಕರಾದ ಕನ್ನಡತಿ ನಭಾ ನಟೇಶ್​!
ನೀತಾ ಅಂಬಾನಿ ಆರ್ಡರ್​​ ಮಾಡಿರುವ ಬನಾರಸ್‌ ಸೀರೆಗಳು ಹೇಗಿರಲಿವೆ? ಕುಶಲಕರ್ಮಿಗಳ ಕುಶಲತೆಗೆ ಹೆಚ್ಚು ಪ್ರಾಮುಖ್ಯತೆ ಸಿಗಲಿದೆಯಾ ಎಂಬ ಕುತೂಹಲ ಅನೇಕರಲ್ಲಿ ಮೂಡಿದೆ. ಅಂಬಾನಿ ಪುತ್ರನ ಮದುವೆಯಿಂದ ಬನಾರಸಿ ಸೀರೆಗಳಿಗೆ ಮತ್ತಷ್ಟು ಬೇಡಿಕೆ ಹೆಚ್ಚಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ನೆಟ್ಟಿಗರು ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).
ತಮ್ಮಿಬ್ಬರ ಮಕ್ಕಳೊಂದಿಗೆ ಲಂಡನ್​ನಲ್ಲೇ ಉಳಿಯಲಿದ್ದಾರೆ ವಿರಾಟ್ ದಂಪತಿ? ಈ 4 ಕಾರಣಗಳೇ ಸಾಕ್ಷಿ ಅಂತಾರೆ ನೆಟ್ಟಿಗರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − twelve =
Remember me
