ನವದೆಹಲಿ: ಕರೊನಾ ವೈರಸ್​ನ ಎರಡನೇ ಅಲೆ ವ್ಯಾಪಕವಾಗಿ ಹಬ್ಬಿರುವ ಪರಿಣಾಮವಾಗಿ ಭಾರತ ಅತಿದೊಡ್ಡ ಆರೋಗ್ಯ ಬಿಕ್ಕಟ್ಟನ್ನು ಎದುರಿಸುತ್ತಿದೆ. ಹಾಗಿದ್ದರೂ, ಭಾರತದ ಪರಿಸ್ಥಿತಿ ಅಮೆರಿಕ ಮತ್ತು ಯುರೋಪ್​ನ ಕೆಲವು ಅಭಿವೃದ್ಧಿ ಹೊಂದಿದ ದೇಶಗಳಷ್ಟು ಕರಾಳವಾಗಿಲ್ಲ.
ಅಲ್ಲದೆ ಸೋಂಕಿತರ ಚೇತರಿಕೆ ಪ್ರಮಾಣವೂ ಆಶಾದಾಯಕವಾಗಿದೆ. ಹೀಗಿದ್ದರೂ, ಈಚಿನ ದಿನಗಳಲ್ಲಿ ಸಾವಿನ ಸಂಖ್ಯೆ ಹಾಗೂ ಜನರು ನರಳಾಡುತ್ತಿರುವ ದೃಶ್ಯಗಳನ್ನೇ ಹೆಚ್ಚಾಗಿ ಪ್ರಚಾರ ಮಾಡುತ್ತಾ ಭಾರತದ ಬಗ್ಗೆ ಪಾಶ್ಚಾತ್ಯ ಮಾಧ್ಯಮಗಳಲ್ಲಿ ನಕಾರಾತ್ಮಕ ಚಿತ್ರಣ ನೀಡುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಅಂಕಿ-ಅಂಶಗಳ ಪ್ರಕಾರವೇ ಹೇಳುವುದಾದರೂ ಕರೊನಾ ವಿಚಾರದಲ್ಲಿ ಭಾರತ ಇತರ ದೇಶಗಳಿಗಿಂತ ಎಷ್ಟೋ ವಾಸಿ ಎನ್ನುವುದು ಅತಿಶಯೋಕ್ತಿ ಏನಲ್ಲ. ಮೇ 11ರವರೆಗಿನ ಅಂಕಿ ಅಂಶಗಳ ಪ್ರಕಾರ, ಯೂರೋಪ್ ವ್ಯಾಪ್ತಿಯಲ್ಲಿ ಬರುವ 48 ದೇಶಗಳಲ್ಲಿ ಇದುವರೆಗೆ 4,59,47,841 ಕರೊನಾ ಕೇಸುಗಳು ವರದಿಯಾಗಿವೆ. ಅದೇ ರೀತಿಯಾಗಿ ಉತ್ತರ ಅಮೆರಿಕದ 26 ದೇಶಗಳಲ್ಲಿ ಒಟ್ಟು 3,81,33,675 ಕರೊನಾ ಪ್ರಕರಣಗಳು ದಾಖಲಾಗಿವೆ. ಅಂದರೆ ಈ ಎರಡು ಖಂಡಗಳಲ್ಲಿರುವ ಒಟ್ಟು ದೇಶಗಳು 74 ಮತ್ತು ಕರೊನಾ ಕೇಸುಗಳು 8,40,81,516. ಈ ಅಂಕಿ ಅಂಶಗಳನ್ನೇ ಭಾರತದೊಂದಿಗೆ ಹೋಲಿಸಿ ನೋಡಿದಾಗ ಕುತೂಹಲಕರ ಅಂಶಗಳು ಗಮನ ಸೆಳೆಯುತ್ತವೆ.
ಈ ಎರಡು ಖಂಡಗಳ ಈವರೆಗಿನ ಕರೊನಾ ಕೇಸುಗಳಿಗೆ ಹೋಲಿಸಿದರೆ ಭಾರತದಲ್ಲಿ ದಾಖಲಾಗಿರುವ ಕೇಸುಗಳ ಸಂಖ್ಯೆ (ಮೇ 11ರ ತನಕ) 2,33,40,938. ಮೇಲಾಗಿ, ಯೂರೋಪ್ ಖಂಡದಲ್ಲಿ ಕರೊನಾಕ್ಕೆ 10,42,090 ಮಂದಿ ಮೃತರಾಗಿದ್ದರೆ, ಉತ್ತರ ಅಮೆರಿಕ ಖಂಡದಲ್ಲಿ 8,58,813 ಮಂದಿ ಈ ಕಣ್ಣಿಗೆ ಕಾಣದ ವೈರಾಣುವಿನಿಂದ ಸಾವಿಗೀಡಾಗಿದ್ದಾರೆ.
ಆ ದೇಶಗಳಿಗೆ ಹೋಲಿಸಿದರೆ ಭಾರತದ ಚಿತ್ರಣ ಭಿನ್ನವಾಗಿರುವುದು ಸ್ಪಷ್ಟ. ಭಾರತದಲ್ಲಿ ಕರೊನಾಕ್ಕೆ ಬಲಿಯಾದವರ ಸಂಖ್ಯೆ 2,54,197. ಹಾಗೆಂದು ಭಾರತದಲ್ಲಿ ಮೃತಪಟ್ಟವರ ಸಂಖ್ಯೆ ನಗಣ್ಯ ಎಂದೇನಲ್ಲ. ಪ್ರತಿ ಜೀವ ಕೂಡ ಮುಖ್ಯ. ಆದರೆ, ಭಾರತದ ಸ್ಥಿತಿ ಅತಿ ಭೀಕರ, ಕರೊನಾ ನಿರ್ವಹಣೆಯಲ್ಲಿ ಭಾರತ ವಿಫಲವಾಗಿದೆ ಎಂಬಂತಹ ಸುದ್ದಿಗಳನ್ನು ಪ್ರಕಟಿಸುತ್ತಿರುವ ಕೆಲ ದುರುದ್ದೇಶಪೂರಿತ ಪಾಶ್ಚಿಮಾತ್ಯ ಮಾಧ್ಯಮಗಳು ತಮ್ಮದೇ ಆದ ಕೆಲವೊಂದು ಅಜೆಂಡಾ ಹೊಂದಿ, ಭಾರತವನ್ನು ನಿಕೃಷ್ಟವಾಗಿ ತೋರಿಸಬೇಕೆಂದೇ ಇಂತಹ ಕೃತ್ಯಗಳಲ್ಲಿ ಭಾಗಿಯಾಗಿರುವಂತೆ ಭಾಸವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಂತೂ ಈ ಅಜೆಂಡಾ ಪ್ರೇರಿತ ಸುದ್ದಿಗಳ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ.

ಯೂರೋಪ್ ಮತ್ತು ಉತ್ತರ ಅಮೆರಿಕದ ಒಟ್ಟು 74 ದೇಶಗಳನ್ನು ಸೇರಿಸಿ ಆಗುವ ಜನಸಂಖ್ಯೆ 1,33,85,86,291. ಈ 74 ದೇಶಗಳನ್ನು ಮೀರಿಸಿದ ಜನಸಂಖ್ಯೆ (1,38,00,04,385) ಭಾರತದಲ್ಲಿದೆ. ಅಲ್ಲದೆ, ಜಾಗತಿಕವಾಗಿ ನೋಡಿದರೆ ಭಾರತ ಇನ್ನೂ ಅಭಿವೃದ್ಧಿ ಹೊಂದುತ್ತಿರುವ ದೇಶ. ಈ ಎರಡು ಖಂಡದ ಹಲವು ದೇಶಗಳು ಅಭಿವೃದ್ಧಿ ಸಾಧಿಸಿ ಮುನ್ನಡೆಯುತ್ತಿವೆ. ಹೀಗಿದ್ದರೂ, ತನ್ನ ದೈತ್ಯಾಕಾರದ ಸವಾಲುಗಳ ಮಧ್ಯೆ ಕರೊನಾ ತಂದಿಟ್ಟಿರುವ ಸಮಸ್ಯೆಗಳನ್ನು ನಿರ್ವಹಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ವಿವಿಧ ರಾಜ್ಯ ಸರ್ಕಾರಗಳು ತೊಡಗಿಸಿಕೊಂಡಿವೆ. ಆಳುವ ಸರ್ಕಾರಗಳಲ್ಲಿ ಲೋಪದೋಷಗಳೇ ಇಲ್ಲ ಎಂದಲ್ಲ. ಸಾಕಷ್ಟು ನ್ಯೂನತೆಗಳು ನಮ್ಮ ವ್ಯವಸ್ಥೆಯಲ್ಲಿಯೂ ಆಳವಾಗಿವೆ. ಇದು ಬೇರೆ ದೇಶಗಳಲ್ಲೂ ಇವೆ. ಅಡ್ಡಿ, ಅಡಚಣೆಗಳು ಭಾರತಕ್ಕಷ್ಟೇ ಸೀಮಿತವಾಗಿಲ್ಲ ಎಂಬುದನ್ನು ಅರಿತುಕೊಳ್ಳಬೇಕಿದೆ.
ಒಬ್ಬ ನಾಯಕ v/s 74 ನಾಯಕರು!
ಎರಡೂ ಖಂಡಗಳ 74 ದೇಶಗಳಲ್ಲಿ 74 ಪ್ರಧಾನಿ ಅಥವಾ ರಾಷ್ಟ್ರಪತಿಗಳಿದ್ದಾರೆ. ಮಂತ್ರಿ ಮಂಡಲಗಳೂ ಇವೆ. ಆದರೆ, ಎರಡೂ ಖಂಡಗಳನ್ನು ಮೀರಿದ ಜನಸಂಖ್ಯೆ ಇರುವ ಭಾರತವನ್ನು ನಿರ್ವಹಿಸುತ್ತಿರುವುದು ಓರ್ವ ಪ್ರಧಾನಿ ಮತ್ತು ಓರ್ವ ರಾಷ್ಟ್ರಪತಿ. ಭಾರತದ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳಿರುವಂತೆ ಆ ದೇಶಗಳಲ್ಲಿ ಪ್ರಾಂತ್ಯಗಳನ್ನು ನಿರ್ವಹಿಸುವ ಅಧಿಕಾರ ಅಥವಾ ಆಡಳಿತ ವ್ಯವಸ್ಥೆಗಳಿವೆ. ಈ 74 ರಾಷ್ಟ್ರಗಳಲ್ಲಿರುವಷ್ಟು ಸವಾಲುಗಳನ್ನು ಒಂದು ದೇಶವಾಗಿ ಭಾರತ ಎದುರಿಸುತ್ತಿದೆ ಎನ್ನುವುದು ಸತ್ಯವಾದರೂ, ಕೆಲ ಮಾಧ್ಯಮಗಳು ಈ ಸತ್ಯಾಂಶಗಳನ್ನು ಮರೆಮಾಚಿಸುತ್ತಲೇ ಇವೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + two =
Remember me
