ನವದೆಹಲಿ:ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್, ಬಿಜೆಪಿ ಮತ್ತು ಬಿಹಾರದ ಜೆಡಿಯುನಲ್ಲಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಗಳು ಪೂರ್ಣಗೊಳ್ಳುತ್ತಿದ್ದು, ಮೂರೂ ಪಕ್ಷಗಳು ಹಳೆ ತಲೆಮಾರಿನ ನಾಯಕರ ಬದಲು ಹೊಸಬರಿಗೆ ಆದ್ಯತೆ ನೀಡುತ್ತಿರುವುದು ಸ್ಪಷ್ಟವಾಗುತ್ತಿದೆ. ರಾಜ್ಯಸಭೆ ಸದಸ್ಯರಾಗುವ ಮೂಲಕ ರಾಜಕೀಯ ಜೀವನವನ್ನು ಉಳಿಸಿಕೊಳ್ಳ ಬಯಸಿರುವ ಕೆಲ ನಾಯಕರಿಗೆ ಈ ನಿರ್ಣಯದಿಂದಾಗಿ ಭವಿಷ್ಯವೇ ಈಗ ಕತ್ತಲಲ್ಲಿದೆ.
ಬಿಜೆಪಿ ನಾಯಕ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರಾಗಿದ್ದರೂ, ಅವರ ಮುಂದುವರಿಕೆಗೆ ಹೈಕಮಾಂಡ್ ಮನಸ್ಸು ಮಾಡಿದಂತೆ ಕಾಣುತ್ತಿಲ್ಲ. ರಾಜ್ಯಸಭೆ ಸದಸ್ಯತ್ವವಿಲ್ಲದೆ ಸಚಿವರು ತಮ್ಮ ಸ್ಥಾನದಲ್ಲಿ 6 ತಿಂಗಳಷ್ಟೇ ಮುಂದುವರಿಯಬಹುದು. ನಖ್ವಿಯವರಿಗೆ ಟಿಕೆಟ್ ತಪ್ಪಿಸುವ ಮೂಲಕ ಪರೋಕ್ಷವಾಗಿ ಅವರಿಗೆ ರಾಜೀನಾಮೆ ಸಂದೇಶ ರವಾನೆಯಾಗಿದೆಯೇ ಎಂಬ ಚರ್ಚೆಗಳು ಬಿಜೆಪಿ ಅಂಗಳದಲ್ಲಿ ಕೇಳಿಬಂದಿದೆ. ವರಿಷ್ಠರ ತೀರ್ವನದ ಇತರೆ ಬಿಜೆಪಿ ನಾಯಕರನ್ನೂ ಅಚ್ಚರಿಗೆ ತಳ್ಳಿದೆ. ಅದೇ ರೀತಿ, ಜೆಡಿಯು ಮೂಲಕ ಕೇಂದ್ರ ಸಚಿವ ಸ್ಥಾನದಲ್ಲಿರುವ ಆರ್​ಸಿಪಿ ಸಿಂಗ್​ಗೆ ಕೂಡ ಟಿಕೆಟ್ ತಪ್ಪಿದ್ದು, ರಾಜೀನಾಮೆ ನೀಡುವುದು ಅನಿವಾರ್ಯವಾಗಲಿದೆ ಎಂದು ಹೇಳಲಾಗುತ್ತಿದೆ. ನಖ್ವಿಯವರನ್ನು ರಾಜ್ಯಸಭೆಯ ಉಪ ನಾಯಕರನ್ನಾಗಿಯೂ ನೇಮಕ ಮಾಡಲಾಗಿತ್ತು. ಆದರೆ, ರಾಜ್ಯಸಭೆಯಿಂದ ಅವರನ್ನು ದೂರವಿಡುವ ನಿರ್ಧಾರಕ್ಕೆ ಕಾರಣ ಇನ್ನೂ ನಿಗೂಢವಾಗಿದೆ. ಆರ್​ಸಿಪಿ ಸಿಂಗ್ ಬಿಜೆಪಿ ಜತೆ ಒಡನಾಟ ಹೊಂದಿದ್ದರೂ, ಬಿಜೆಪಿ ನಾಯಕರೂ ಅವರ ಬಗ್ಗೆ ಮೌನವಾಗಿದ್ದಾರೆ.
ಜಾವಡೇಕರ್, ಸಹಸ್ರಬುದ್ಧೆಗೆ ನಿರಾಸೆ:ರಾಜ್ಯಸಭೆ ಸದಸ್ಯತ್ವ ಮೂಲಕ ಕೇಂದ್ರ ಸಚಿವರಾಗಿದ್ದ ಪ್ರಕಾಶ್ ಜಾವಡೇಕರ್​ಗೂ ರಾಜ್ಯಸಭೆ ಟಿಕೆಟ್ ನೀಡಿಲ್ಲ. ಹೀಗಾಗಿ, ಅವರ ರಾಜಕೀಯ ಭವಿಷ್ಯವೂ ಬಹುತೇಕ ಅಂತ್ಯ ಎನ್ನಲಾಗಿದೆ. ಕಳೆದ ಕೇಂದ್ರ ಸಚಿವ ಸಂಪುಟ ಪುನರ್ ರಚನೆ ವೇಳೆ ವರಿಷ್ಠರು ಜಾವಡೇಕರ್​ರಿಂದ ಮಂತ್ರಿಸ್ಥಾನಕ್ಕೆ ರಾಜೀನಾಮೆ ಪಡೆದುಕೊಂಡಿದ್ದರು. ಆಗಲೇ ರಾಜ್ಯಸಭೆ ಟಿಕೆಟ್ ಸಿಗುವುದು ಕಷ್ಟ ಎಂಬ ಚರ್ಚೆಗಳೆದ್ದಿದ್ದವು. ಹಿರಿಯ ನಾಯಕ ವಿನಯ್ ಸಹಸ್ರಬುದ್ಧೆಗೂ ರಾಜ್ಯಸಭೆ ಟಿಕೆಟ್ ನೀಡಲಾಗಿಲ್ಲ.
ಜಿ-23 ನಾಯಕರಿಗೆ ಕೈ:ಉದಯಪುರ ಚಿಂತನಾ ಶಿಬಿರದ ಬಳಿಕ ಕಾಂಗ್ರೆಸ್ ಪಕ್ಷದ ಪ್ರಮುಖ ಸಮಿತಿಗಳಲ್ಲಿ ಸ್ಥಾನ ಪಡೆದಿದ್ದ ಗುಲಾಂ ನಬೀ ಆಜಾದ್ ಮತ್ತು ಆನಂದ್ ಶರ್ಮರ ಹೆಸರು ಕಾಂಗ್ರೆಸ್​ನ ಮೊದಲ ಪಟ್ಟಿಯಲ್ಲಿ ಕಂಡಿಲ್ಲ. ರಾಹುಲ್ ಗಾಂಧಿ ಸಾಮರ್ಥ್ಯ ಹಾಗೂ ಕಾಂಗ್ರೆಸ್​ನ ಒಟ್ಟಾರೆ ಕಾರ್ಯನಿರ್ವಹಣೆ ಬಗ್ಗೆ ಬಹಿರಂಗ ಅಸಮಾಧಾನ ಹೊರಹಾಕಿದ್ದ ಇಬ್ಬರು ನಾಯಕರು ಜಿ-23 ಗುಂಪಿನಲ್ಲೂ ಇದ್ದರು. ಆಜಾದ್ ರಾಜ್ಯಸಭೆ ಅವಧಿ ಪೂರ್ಣಗೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ಕಳೆದ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೂ ಆಜಾದ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದು ರಾಹುಲ್ ಸೇರಿ ಅನೇಕರ ಮುಜುಗರಕ್ಕೂ ಕಾರಣವಾಗಿತ್ತು. ರಾಜ್ಯಸಭೆಗೆ ಮರುನಾಮಕರಣದ ನಿರೀಕ್ಷೆಯಲ್ಲಿದ್ದ ಹಿಮಾಚಲ ಪ್ರದೇಶ ಮೂಲದ ಆನಂದ್ ಶರ್ಮ ಕೂಡ ಟಿಕೆಟ್ ತಪ್ಪಿದ್ದಕ್ಕೆ ನಿರಾಶೆಗೊಂಡಿದ್ದಾರೆ. ವರ್ಷಾಂತ್ಯದಲ್ಲಿ ಹಿಮಾಚಲ ಪ್ರದೇಶ ಚುನಾವಣೆಯಿದ್ದು, ಚುನಾವಣೆ ಕದನಕ್ಕೆ ತಮ್ಮ ಅಗತ್ಯವಿಲ್ಲ ಎಂಬ ಸಂದೇಶ ರವಾನಿಸಿರುವ ವಿಶ್ಲೇಷಣೆ ಕೇಳಿಬಂದಿದೆ. ಟಿಕೆಟ್ ತಪ್ಪಿದ್ದಕ್ಕೆ ಬೇಸರಗೊಂಡಿದ್ದ ಮತ್ತೋರ್ವ ರಾಜ್ಯಸಭೆ ಸದಸ್ಯ ಪವನ್ ಖೇರಾ, ಟ್ವಿಟರ್​ನಲ್ಲಿ ಅತೃಪ್ತಿ ಹೊರಹಾಕಿದ್ದರು. ಸಿನಿಮಾ ನಟಿ ನಗ್ಮಾ ಕೂಡ ಟ್ವಿಟ್ಟರ್ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಯಿಂದ ಡಿಸ್​ಚಾರ್ಜ್ ಆದ್ರು ಐದು ರೂಪಾಯಿ ಡಾಕ್ಟರ್​ ಶಂಕರೇಗೌಡ ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × three =
Remember me
