ನವದೆಹಲಿ:ಹುಬ್ಬಳ್ಳಿಯಲ್ಲಿ ಹತ್ಯೆಯಾದ ನೇಹಾ ಹಿರೇಮಠ್‌ ಪ್ರಕರಣಕ್ಕೆ ನಾವು ಲವ್‌ ಜಿಹಾದ್‌ ಬಣ್ಣ ಕಟ್ಟುತ್ತಿಲ್ಲ. ಇದು ಖಂಡಿತವಾಗಿಯೂ ಲವ್‌ ಜಿಹಾದ್‌ ಪ್ರಕರಣವೇ ಆಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಇದನ್ನೂ ಓದಿ:ರಷ್ಯಾ ಕ್ಷಿಪಣಿ ದಾಳಿ: ಉಕ್ರೇನ್‌ನಲ್ಲಿ ಐವರು ಸಾವು- ಹ್ಯಾರಿ ಪಾಟರ್ ಕೋಟೆ ನಾಶ!
ಈ ಬಗ್ಗೆ ಮಾತನಾಡಿದ ಅವರು ನೇಹಾ ಹಿರೇಮಠ್‌ ಪ್ರಕರಣ ನಿಜವಾಗಿಯೂ ಲವ್‌ ಜಿಹಾದ್‌ ಪ್ರಕರಣ ಆಗಿದೆ. ನಾವು ಅದಕ್ಕೆ ಲವ್‌ ಜಿಹಾದ್‌ ಬಣ್ಣ ಕಟ್ಟುತ್ತಿಲ್ಲ ಎಂದು ಹೇಳಿದರು.
ನೇಹಾ ಹೀರೇಮಠ್‌ ಪ್ರಕರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್​ ವೈಯಕ್ತಿಕ ಕಾರಣಗಳಿಗೆ ನಡೆದಿದೆ ಎಂದಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ಕರ್ನಾಟಕ ಸಿಎಂ, ಡಿಸಿಎಂ ಅಲ್ಪ ಸಂಖ್ಯಾತರ ಮತಬ್ಯಾಂಕ್‌ಗಾಗಿ ಆ ರೀತಿ ಹೇಳಿದ್ದಾರೆ. ಅವರು ಮೊದಲಿನಿಂದಲೂ ತುಷ್ಟೀಕರಣ ಮಾಡುತ್ತ ಬರುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕಾಲೇಜು ಕ್ಯಾಂಪಸ್‌ನಲ್ಲಿ ಈ ರೀತಿ ಕೊಲೆ ನಡೆಯುತ್ತದೆ ಎಂದರೆ ಅದು ವೈಯಕ್ತಿಕ ವಿಷಯ ಹೇಗಾಗುತ್ತದೆ? ಕಾಲೇಜು ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿನಿಯರಿಗೆ ಭದ್ರತೆ ಸಿಗಬೇಕೋ ಬೇಡವೋ? ಕಾಂಗ್ರೆಸ್‌ ವೋಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ಈ ರೀತಿ ಸತ್ಯ ಮುಚ್ಚಿಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ
‘ಅವರಿಂದಾಗಿಯೇ ನಿಶ್ಚಿತಾರ್ಥದ ವಿಷಯ ಹೊರಬಂತು’..ನಟಿ ಅದಿತಿ ರಾವ್ ಹೀಗೆ ಹೇಳಿದ್ದೇಕೆ ಗೊತ್ತಾ?

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:thirteen + eight =
Remember me
