ಮಧ್ಯಪ್ರದೇಶ:ಸೋಮವಾರ ನಡೆದ 16ನೇ ಮಧ್ಯಪ್ರದೇಶ ವಿಧಾನಸಭೆಯ ಮೊದಲ ಅಧಿವೇಶನದಲ್ಲಿ ಮಾಜಿ ಪ್ರಧಾನಿ ದಿವಂಗತ ಜವಾಹರಲಾಲ್ ನೆಹರು ಭಾವಚಿತ್ರವನ್ನು ದಿವಂಗತ ಡಾ.ಬಿ.ಆರ್. ಅಂಬೇಡ್ಕರ್ ಅವರ ಫೋಟೋಯಿಂದ ಬದಲಾಯಿಸಲಾಯಿತು. ಇದಾಗಿದ್ದೇ ತಡ ಸದನದೊಳಗೆ ತೀವ್ರ ವಿವಾದ ಸೃಷ್ಟಿಯಾಗಿ, ಕಾಂಗ್ರೆಸ್​ ನಾಯಕರು ನೇರ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಇಂದು ಐಪಿಎಲ್ ಮಿನಿ ಹರಾಜು: ಮೊದಲ ಬಾರಿಗೆ ವಿದೇಶದಲ್ಲಿ ಆಯೋಜನೆ, ಯಾರಿಗೆ ಒಲಿಯಲಿದೆ ಲಕ್!
ಒಂದು ಬದಿಯಲ್ಲಿ ಮಹಾತ್ಮ ಗಾಂಧಿಯವರ ಭಾವಚಿತ್ರವನ್ನು ಪ್ರದರ್ಶಿಸಲಾಗುತ್ತಿದ್ದು, ಸಭಾಧ್ಯಕ್ಷರ ಪೀಠದ ಇನ್ನೊಂದು ಬದಿಯಲ್ಲಿದ್ದ ಜವಾಹರಲಾಲ್ ನೆಹರು ಚಿತ್ರವನ್ನು ಬದಲಿಸಲಾಗಿದೆ. ಬದಲಾವಣೆಗೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕರು ಜವಾಹರಲಾಲ್ ನೆಹರು ಅವರ ಭಾವಚಿತ್ರವನ್ನು ಮರುಸ್ಥಾಪಿಸುವಂತೆ ಒತ್ತಾಯಿಸಿದರು. ಫೋಟೋವನ್ನು ಅದರ ಮೂಲ ಸ್ಥಿತಿಗೆ ತರದಿದ್ದರೆ, ಕಾಂಗ್ರೆಸ್ ಶಾಸಕರೇ ಅದನ್ನು ಮಾಡುತ್ತಾರೆ ಎಂದು ಪಕ್ಷ ಎಚ್ಚರಿಸಿತು. ಘಟನೆಯ ವಿಡಿಯೋ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ.
ಚುನಾವಣೆಯ ನಂತರ ಮೊದಲ ಅಧಿವೇಶನ:ಹಂಗಾಮಿ ಸ್ಪೀಕರ್ ಗೋಪಾಲ್ ಭಾರ್ಗವ ನೂತನವಾಗಿ ಆಯ್ಕೆಯಾದ ಸದಸ್ಯರನ್ನು ಸದನಕ್ಕೆ ಸ್ವಾಗತಿಸಿ ಪ್ರಮಾಣ ವಚನ ಬೋಧಿಸುವ ಪ್ರಕ್ರಿಯೆ ಆರಂಭಿಸುವುದರೊಂದಿಗೆ ಅಧಿವೇಶನ ಆರಂಭವಾಯಿತು. ಮುಖ್ಯಮಂತ್ರಿ ಮೋಹನ್ ಯಾದವ್ ನೇತೃತ್ವದ ಹೊಸ ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರ ಅಧಿಕಾರಕ್ಕೆ ಬಂದ ಸುಮಾರು ಒಂದು ವಾರದ ಬಳಿಕ ನಾಲ್ಕು ದಿನಗಳ ಚಳಿಗಾಲದ ಅಧಿವೇಶನ ಪ್ರಾರಂಭವಾಗಿದೆ.
ಇದನ್ನೂ ಓದಿ:ಈ ರಾಶಿಯವರಿಗಿಂದು ಅನಿರೀಕ್ಷಿತ ಧನ ಲಾಭ: ನಿತ್ಯಭವಿಷ್ಯ
ಕಾಂಗ್ರೆಸ್‌ನಿಂದ ಉಮಂಗ್ ಸಿಂಘಾರ್ ಅವರನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ (LOP) ಪಕ್ಷದಿಂದ ಆಯ್ಕೆ ಮಾಡಲಾಗಿದೆ ಎಂದು ಹಂಗಾಮಿ ಸ್ಪೀಕರ್ ಸದನಕ್ಕೆ ತಿಳಿಸಿದರು,(ಏಜೆನ್ಸೀಸ್).
ಯಶ್​ ಮತ್ತು ಪ್ರಭಾಸ್​ ಇಬ್ಬರೂ ಒಂದೇ ರೀತಿ ಎಂದಿದ್ದೇಕೆ ನಿರ್ದೇಶಕ ಪ್ರಶಾಂತ್​ ನೀಲ್​?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 9 =
Remember me
