ಹೊಸದಿಲ್ಲಿ:ಇಂದು ಲೋಕಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ನೇರ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಜವಾಹರಲಾಲ್ ನೆಹರು ತಮ್ಮ ಅಮೆರಿಕನ್ ಮತ್ತು ಚೀನಾದ ಸಹವರ್ತಿಗಳಿಗೆ ಹೋಲಿಸಿದರೆ ಭಾರತೀಯರು ಸೋಮಾರಿಗಳು ಮತ್ತು ಕಡಿಮೆ ಬುದ್ಧಿವಂತಿಕೆ ಹೊಂದಿದ್ದಾರೆಂದು ಭಾವಿಸಿದ್ದರು ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ:ಸೋಲಾರ್​ ಘಟಕ ಸ್ಥಾಪಿಸುವ ದೊಡ್ಡ ಗುತ್ತಿಗೆ: ಕೆಪಿಐ ಗ್ರೀನ್ ಎನರ್ಜಿ ಷೇರು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ; ಬೋನಸ್​ ಷೇರು ವಿತರಣೆಗೆ ಕಂಪನಿ ಸಜ್ಜು
ರಾಷ್ಟ್ರಪತಿಗಳ ಭಾಷಣದ ಬಳಿಕ ಧನ್ಯವಾದ ತಿಳಿಸಿದ ಪ್ರಧಾನಿ, ಸುಮಾರು 2 ಗಂಟೆಗಳ ಕಾಲ ಮಾತನಾಡಿದರು. ಈ ವೇಳೆ ಭಾರತೀಯರು ಕಷ್ಟಗಳಿಂದ ಓಡಿಹೋಗುತ್ತಾರೆ ಎಂಬ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹೇಳಿಕೆಯನ್ನು ಮುನ್ನೆಲೆಗೆ ತಂದ ಮೋದಿ, ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದರು.
“ಭಾರತೀಯರಿಗೆ ಸಾಮಾನ್ಯವಾಗಿ ತುಂಬಾ ಕಷ್ಟಪಟ್ಟು ಕೆಲಸ ಮಾಡುವ ಅಭ್ಯಾಸವಿಲ್ಲ. ನಾವು ಯುರೋಪ್, ಜಪಾನ್, ಚೀನಾ, ರಷ್ಯಾ ಅಥವಾ ಅಮೆರಿಕ ರಾಷ್ಟ್ರದ ಜನರಂತೆ ಕೆಲಸ ಮಾಡುವುದಿಲ್ಲ ಎಂದು ಪ್ರಧಾನಿ ನೆಹರು ಅಂದು ಕೆಂಪು ಕೋಟೆಯಲ್ಲಿ ಹೇಳಿದ್ದನ್ನು ನಾನು ಈಗ ಓದಿದ್ದೇನೆ” ಎಂದರು.
ಇದನ್ನೂ ಓದಿ:ಹುಣಸೆ ಉಪಯೋಗಿಸಿ, ಬೆಳಸಿ, ಉಳಿಸಿ ಹುಣಸೆ ರಕ್ಷಿಸಿ; ಸಮಗ್ರ ಚರ್ಚೆಗೆ ರೈತರ ಕಾರ್ಯಾಗಾರ
“ಭಾರತೀಯರು ಸೋಮಾರಿಗಳು ಮತ್ತು ಕಡಿಮೆ ಬುದ್ಧಿವಂತರು ಎಂದು ನೆಹರು ಜೀ ಭಾವಿಸಿದ್ದರು. ಇಂದಿರಾ ಗಾಂಧಿಯವರ ಚಿಂತನೆಯೂ ನೆಹರು ಅವರ ಚಿಂತನೆಗಿಂತ ಭಿನ್ನವಾಗಿಲ್ಲ” ಎಂದು ಹೇಳಿದ ಪ್ರಧಾನಿ ಮೋದಿ, ಸ್ವಾತಂತ್ರ್ಯ ದಿನದಂದು ಮಾಜಿ ಪ್ರಧಾನಿ ಕೆಂಪು ಕೋಟೆಯಲ್ಲಿ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸುವ ಮೂಲಕ ಕಾಂಗ್ರೆಸ್​ ವಿರುದ್ಧ ವ್ಯಂಗ್ಯವಾಡಿದರು,(ಏಜೆನ್ಸೀಸ್).
ಕ್ರಿಮಿನಲ್ ಪ್ರಕರಣಗಳಲ್ಲಿ ಜೈಲುಪಾಲಾದ ಮಾಜಿ ಸಿಎಂಗಳು ಯಾರೆಲ್ಲಾ ಗೊತ್ತೇ? ಇಲ್ಲಿದೆ ನೋಡಿ ಮಾಹಿತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 17 =
Remember me
