ಪಟನಾ:ಭಾರತ ಮತ್ತು ನೇಪಾಳ ಗಡಿಭಾಗದಲ್ಲಿರುವ ಲಾಲ್​ಬಂದಿ ಗಡಿ ಹೊರಠಾಣೆಯ ವ್ಯಾಪ್ತಿಯಲ್ಲಿ ನೇಪಾಳ ಪೊಲೀಸರು ನಡೆಸಿದ ಗುಂಡಿನ ದಾಳಿಗೆ ಭಾರತದ ಒಬ್ಬ ನಾಗರಿಕ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಮತ್ತೊಬ್ಬನನ್ನು ನೇಪಾಳ ಸಶಸ್ತ್ರ ಪೊಲೀಸರು ವಶಕ್ಕೆ ಪಡೆದಿರುವುದಾಗಿ ಹೇಳಲಾಗುತ್ತಿದೆ.
ದಿನೇಶ್​ ಕುಮಾರ್​ (25) ಮೃತ. ಉಮೇಶ್​ ರಾಮ್​ ಮತ್ತು ಉದಯ್​ ಠಾಕೂರ್​ ಗಾಯಗೊಂಡವರು. ಉಮೇಶ್​ ರಾಮ್​ನ ಬಲಗೈಗೆ ಗಾಯವಾಗಿದ್ದರೆ, ಒಂದು ಗುಂಡು ಉದಯ್​ ಠಾಕೂರ್​ನ ತೊಡೆಯನ್ನು ಹೊಕ್ಕಿದೆ ಎನ್ನಲಾಗಿದೆ. ಲಗನ್​ ರಾಯ್​ ಎಂಬಾತನನ್ನು ನೇಪಾಳ ಸಶಸ್ತ್ರ ಪೊಲೀಸರು ವಶಕ್ಕೆ ಪಡೆದಿರುವುದಾಗಿ ಹೇಳಲಾಗುತ್ತಿದೆ.
ಶುಕ್ರವಾರ ಬೆಳಗ್ಗೆ 8.45ರಲ್ಲಿ ಗಡಿ ಭಾಗದ ಸೀತಾಮಾರಿ ಜಿಲ್ಲೆಯ ಜಾನಕಿನಗರ ಗ್ರಾಮದ ಈ ಯುವಕರು ನೇಪಾಳದ ಗಡಿ ಭಾಗಕ್ಕೆ ಹೋಗಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ನೇಪಾಳ ಸಶಸ್ತ್ರ ಪೊಲೀಸರು ಏಕಾಏಕಿ ಗುಂಡಿನ ದಾಳಿ ನಡೆಸಿದರು ಎನ್ನಲಾಗಿದೆ. ಸಶಸ್ತ್ರ ಸೀಮಾ ಬಲ್​ನ (ಎಸ್​ಎಸ್​ಬಿ) ಐಜಿ ಸಂಜಯ್​ಕುಮಾರ್​ ಈ ವಿಷಯವನ್ನು ಖಚಿತಪಡಿಸಿದ್ದಾರೆ.
ಇದನ್ನೂ ಓದಿ:ಜಾಸ್ತಿ ಕೆಲಸ ಮಾಡ್ಬೇಡಿ, ಎಂಟೇ ಗಂಟೆ ಸಾಕು- ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್
ಗಾಯಾಳುಗಳನ್ನು ಸೀತಾಮಾರಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜತೆಗೆ ಲಾಲ್​ಬಂದಿ ಗಡಿ ಹೊರಠಾಣೆ ವ್ಯಾಪ್ತಿಯಲ್ಲಿ ಗಸ್ತನ್ನು ಹೆಚ್ಚಿಸಲಾಗಿದೆ. ಸದ್ಯ ಗುಂಡಿನ ದಾಳಿ ನೇಪಾಳದ ಗಡಿಯೊಳಗೆ ನಡೆದಿದೆ. ಆದ್ದರಿಂದ, ಈ ಘಟನೆಗೆ ನಿಖರವಾದ ಕಾರಣ ಏನೆಂಬುದು ಸ್ಪಷ್ಟವಾಗಿಲ್ಲ ಎಂದು ಹೇಳಿದ್ದಾರೆ.
ನೇಪಾಳದ ಗಡಿಯೊಳಗೆ ಹೋಗಿದ್ದ ಭಾರತೀಯರು ನೇಪಾಳ ಸಶಸ್ತ್ರ ಪೊಲೀಸರ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ಕಸಿದುಕೊಳ್ಳಲು ಯತ್ನಿಸಿದಾಗ, ತಾವು ಗುಂಡಿನ ದಾಳಿ ನಡೆಸಿದ್ದಾಗಿ ನೇಪಾಳ ಸಶಸ್ತ್ರ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕೋಕಾಕೋಲಾ ಬ್ಯಾನ್​ ಮಾಡಿ ಎಂದವನಿಗೆ 5 ಲಕ್ಷ ದಂಡ ವಿಧಿಸಿದ ಸುಪ್ರೀಂಕೋರ್ಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + seven =
Remember me
