ಕಾಠ್ಮಂಡು:ಚೀನಾದ ಪ್ರಭಾವಕ್ಕೆ ಒಳಗಾಗಿ ಭಾರತದ ಮೇಲೆ ನಾನಾ ರೀತಿಯಲ್ಲಿ ಮುಗಿಬೀಳುತ್ತಾ ನೇಪಾಳ ಕಿರಿಕ್​ ಮಾಡುತ್ತಿದೆ. ಭಾನುವಾರ ಭಾರತ ವಿರೋಧಿ ಗೀತೆಗಳನ್ನು ರೇಡಿಯೋದಲ್ಲಿ ಪ್ರಸಾರ ಮಾಡಿದ್ದ ಅದು ಈಗ ಅಣೆಕಟ್ಟೆಯೊಂದರ ದುರಸ್ತಿಗೆ ಅಡ್ಡಿಪಡಿಸುವ ಮೂಲಕ ಭಾರತದ ಒಂದು ರಾಜ್ಯದ ಜನತೆಯ ಜೀವವನ್ನು ಅಪಾಯಕ್ಕೆ ದೂಡುತ್ತಿದೆ.
ಬಿಹಾರದಲ್ಲಿರುವ ಗಂಧಕ್​ ಅಣೆಕಟ್ಟೆ ಭಾರತ ಮತ್ತು ನೇಪಾಳದವರೆಗೆ ಹಬ್ಬಿದೆ. ಒಟ್ಟು 36 ಕಮಾನುಗಳುಳ್ಳ ಈ ಅಣೆಕಟ್ಟೆಯ 18 ಕಮಾನುಗಳು ನೇಪಾಳದ ವ್ಯಾಪ್ತಿಯಲ್ಲಿವೆ. ಅಣೆಕಟ್ಟೆಯ ಮಧ್ಯದಲ್ಲಿ ಪ್ರವಾಹ ತಡೆಗಟ್ಟುವ ವ್ಯವಸ್ಥೆ ಇದೆ.
ಇದೀಗ ಮಳೆಗಾಲ ಆರಂಭವಾಗಿದ್ದು, ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಹೆಚ್ಚಾಗಿ ಪ್ರವಾಹ ಉಂಟಾಗುವ ಭೀತಿ ಬಿಹಾರದಲ್ಲಿ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಪ್ರವಾಹ ತಡೆಗಟ್ಟುವ ವ್ಯವಸ್ಥೆಯನ್ನು ದುರಸ್ತಿಗೊಳಿಸಿ, ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಬಿಹಾರ ಸರ್ಕಾರ ಮುಂದಾಗಿದೆ. ಆದರೆ, ಈ ವ್ಯವಸ್ಥೆ ಇರುವಲ್ಲಿ ತಡೆಗೋಡೆ ನಿರ್ಮಿಸಿರುವ ನೇಪಾಳ, ವ್ಯವಸ್ಥೆಯ ದುರಸ್ತಿಗೆ ಅಡ್ಡಿಪಡಿಸುತ್ತಿದೆ. ಇದರಿಂದಾಗಿ ಈ ಭಾಗದಲ್ಲಿ ಪ್ರವಾಹ ಉಂಟಾಗಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ಮತ್ತು ಜನಜಾನುವಾರುಗಳ ಪ್ರಾಣಹಾನಿಯಾಗುವ ಸಾಧ್ಯತೆ ಹೆಚ್ಚಾಗಿದೆ.
ಇದನ್ನೂ ಓದಿ:ಧೀರ ಯೋಧರನ್ನು ಗೌರವಿಸುವುದು ಹೇಗೆಂದು ಭಾರತವನ್ನು ನೋಡಿ ಕಲಿಯಿರಿ
ಈ ಬಗ್ಗೆ ಮಾಹಿತಿ ನೀಡಿರುವ ಬಿಹಾರದ ಜಲಸಂಪನ್ಮೂಲ ಸಚಿವ ಸಂಜಯ್​ ಝಾ, ಗಡಿ ನಡುವಣ ಪ್ರದೇಶದಲ್ಲಿ ಹರಿಯುವ ಲಾಲ್​ ಬೇಕಿಯಾ ನದಿಗೆ ಅಡ್ಡಲಾಗಿ ಈ ಅಣೆಕಟ್ಟು ಕಟ್ಟಲಾಗಿದೆ. ಪ್ರವಾಹ ತಡೆ ವ್ಯವಸ್ಥೆ ಕೂಡ ಗಡಿ ನಡುವಣ ಪ್ರದೇಶದಲ್ಲಿದೆ. ಇದನ್ನು ದುರಸ್ತಿಗೊಳಿಸಲು ಭಾರತಕ್ಕೆ ಅವಕಾಶವಿದೆ. ಆದರೆ, ನೇಪಾಳ ಇದೇ ಮೊದಲ ಬಾರಿಗೆ ಈ ಪ್ರದೇಶಕ್ಕೆ ಅಡ್ಡಲಾಗಿ ತಡೆಗೋಡೆ ನಿರ್ಮಿಸಿ, ದುರಸ್ತಿಗೆ ಅವಕಾಶ ನಿರಾಕರಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬಿಹಾರದ ಇಂಜಿನಿಯರ್​ಗಳು ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್​ಗಳು ಸಂಬಂಧಪಟ್ಟ ನೇಪಾಳದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಇದೇ ವೇಳೆ ನಾವು ಇಲ್ಲಿನ ಪರಿಸ್ಥಿತಿ ವಿವರಿಸಿ ವಿದೇಶಾಂಗ ಸಚಿವಾಲಯಕ್ಕೂ ಪತ್ರ ಬರೆದಿದ್ದೇವೆ. ಈ ಸಮಸ್ಯೆಯನ್ನು ಸಕಾಲದಲ್ಲಿ ಪರಿಹರಿಸದಿದ್ದರೆ, ಈ ಬಾರಿಯ ಮಳೆಗಾಲದಲ್ಲಿ ಬಿಹಾರದಲ್ಲಿ ಭಾರಿ ಅನಾಹುತವೇ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಚೀನಾ ಸಂಘರ್ಷದಲ್ಲಿ ಬಲಿಯಾದ ಯೋಧನ ಕುಟುಂಬಕ್ಕೆ ಐದು ಕೋಟಿ ರೂ., ಪತ್ನಿಗೆ ಸಹಾಯಕ ಆಯುಕ್ತೆ ಹುದ್ದೆ ನೀಡಿದ ತೆಲಂಗಾಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
