ನವದೆಹಲಿ:ಇದುವೆರೆಗೂ ಭಾರತದೊಂದಿಗೆ ಸ್ನೇಹ ಹಾಗೂ ಸೌಹಾರ್ದ ಸಂಬಂಧ ಹೊಂದಿದ್ದ ನೇಪಾಳ ಇದೀಗ ಭಾರತದಿಂದ ದೂರ ಸರಿಯುತ್ತಿರುವ ಹಾಗೂ ಚೀನಾಕ್ಕೆ ಹತ್ತಿರಾಗುತ್ತಿರುವ ಕುರುಹುವನ್ನು ಢಾಳಾಗಿ ತೋರಿಸುತ್ತಿದೆ.
ಕೆಲವೇ ದಿನಗಳ ಹಿಂದೆ ಕಾಲಾಪಾನಿ, ಲಿಪುಲೇಖ್​ ಮತ್ತು ಲಿಂಪಿಯಾಧುರಾ ಬಳಿಯ ಭಾರತದ ಭಾಗವನ್ನು ತನ್ನದೆಂದು ಹೇಳಿಕೊಂಡು ಪರಿಷ್ಕೃತ ನಕ್ಷೆಯನ್ನು ಸಿದ್ಧಪಡಿಸಿ ಸಂಸತ್​ನ ಕೆಳ ಮತ್ತು ಮೇಲ್ಮನೆಯಲ್ಲಿ ನೇಪಾಳ ಅನುಮೋದನೆ ಪಡೆದುಕೊಂಡಿದೆ. ಇದೀಗ ಅದು ಭಾರತೀಯರಿಗಾಗಿ ಹೊರ ಪೌರತ್ವ ಕಾಯ್ದೆಯನ್ನು ಜಾರಿಗೊಳಿಸಲು ಮುಂದಾಗಿದೆ.
ಇದನ್ನೂ ಓದಿ:ಗಲ್ವಾನ್​ ಘರ್ಷಣೆ ಬಳಿಕ ಎಲ್​ಎಸಿಯಲ್ಲಿ ಭದ್ರತೆ ಹೆಚ್ಚಿಸಿದ ಭಾರತ
ಇದರ ಪ್ರಕಾರ, ನೇಪಾಳದ ಹುಡುಗನನ್ನು ಭಾರತೀಯ ಯುವತಿ ಮದುವೆಯಾದರೆ, ಆಕೆಗೆ ಏಳು ವರ್ಷಗಳ ಬಳಿಕ ನೇಪಾಳದ ಪೌರತ್ವ ದೊರೆಯಲಿದೆ. ಈ ಬಗ್ಗೆ ಮಾಹಿತಿ ನೀಡಿರುವ ನೇಪಾಳದ ಗೃಹ ಸಚಿವ ರಾಮ್​ ಬಹಾದ್ದೂರ್​ ಥಾಪಾ, ಯಾವುದೇ ದೇಶದ ಯುವತಿಯರು ಭಾರತೀಯ ಯುವಕರನ್ನು ವರಿಸಿದರೆ, ಏಳು ವರ್ಷಗಳ ಬಳಿಕ ಅವರಿಗೆ ಭಾರತದ ಪೌರತ್ವ ನೀಡಲಾಗುತ್ತದೆ. ನೇಪಾಳ ಕೂಡ ಇದೇ ಕ್ರಮವನ್ನು ಅನುಸರಿಸಲಿದೆ ಎಂದು ಹೇಳಿದರು.
ಭಾರತದಲ್ಲಿ ಜಾರಿಯಲ್ಲಿರುವ ಪೌರತ್ವ ಕಾಯ್ದೆಯ ಈ ನಿಯಮ ನೇಪಾಳದ ಯುವತಿಯರಿಗೆ ಅನ್ವಯವಾಗುವುದಿಲ್ಲ. ಅವರು ಮದುವೆಯಾದ ದಿನದಿಂದಲೇ ಅವರಿಗೆ ಭಾರತದ ಪೌರತ್ವ ದೊರೆಯುತ್ತದೆ. ಈ ಸಂಗತಿ ತಿಳಿದಿದ್ದರೂ ರಾಮ್​ ಬಹಾದ್ದೂರ್​ ಥಾಪಾ ಮಾತ್ರ ಈ ನಿಯಮ ನೇಪಾಳದ ಯುವತಿಯರಿಗೂ ಅನ್ವಯವಾಗುತ್ತದೆ ಎಂಬ ಅರ್ಥದಲ್ಲಿ ಪ್ರತಿಪಾದಿಸಿದರು ಎನ್ನಲಾಗಿದೆ.
ಭಾರತವನ್ನು ಹಣಿಯಲು ಹೊಸ ಪ್ರಹಸನ ಆರಂಭಿಸಿದ ಚೀನಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 3 =
Remember me
